ದೇವರಹಿಪ್ಪರಗಿ 16: ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿ ಹಾಗೂ ದೇಶದ ಆರ್ಥಿಕತೆ ಸುಧಾರಣೆಯಾಗುವಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾರಣ. ಇಂದಿರಾ ಗಾಂಧಿ ನಾಲ್ಕು ದಶಕಗಳ ಹಿಂದೆ ಜಾರಿಗೆ ತಂದ ಯೋಜನೆಗಳಿಂದ ಇಂದಿಗೂ ಈ ದೇಶದ ಬೆಸ್ಟ್ ಪ್ರಧಾನಿ ಎಂದು ಜಗತ್ತೇ ಹೇಳುತ್ತದೆ. ಭೂ ಸುಧಾರಣೆ ಕಾಯ್ದೆ ಈ ದೇಶದ ಜನರಿಗೆ ಒಳಿತನ್ನು ಮಾಡಿದ ಕಾರ್ಯಕ್ರಮ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆನಂದಗೌಡ ದೊಡ್ಡಮನಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರದಂದು ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಸ್ಮರಣಾರ್ಥವಾಗಿ ರಾಜ್ಯ ಯುವ ಕಾಂಗ್ರೆಸ್ ಆಯೋಜಿಸಿರುವ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಬ್ಯಾಂಕ್ಗಳ ವೀಲೀನದಿಂದ ಆರ್ಥಿಕ ಸ್ಥಿರತೆಗೆ ಕಾರಣರಾದರು. ಇವರ ಇಡೀ ಕುಟುಂಬವೇ ಮಹಾತ್ಯಾಗಕ್ಕೆ ಹೆಸರಾಗಿದೆ. ಇಂದಿರಾ ಗಾಂಧಿ ಮಾಡಿದ ಕೆಲಸ ಇಂದಿಗೂ ಜೀವಂತವಾಗಿದೆ.
ಬಡವರನ್ನು ಮೇಲೆತ್ತಲು ಅವರು ಕೈಗೊಂಡ ಯೋಜನೆಗಳು ಮಹತ್ವದ್ದು.ಯುದ್ಧ ನಡೆದ ಸಂದರ್ಭದಲ್ಲಿ ಗಟ್ಟಿತನದ ನಿರ್ಧಾರ ವಾಸ್ತಾವಂಶಗಳನ್ನ ಒಪ್ಪಿಕೊಂಡ ಧೀಮಂತೆ. ಸರಳವಾಗಿ ಬದುಕು ನಡೆಸಿದ್ದ ಅವರು ಕಾರ್ಯಕರ್ತರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದರು. ನಾವು ಇಂದಿರಾ ಗಾಂಧಿ ಅವರನ್ನ ಕಳೆದುಕೊಂಡರು ಕೂಡ ಅವರು ಯಾವಾಗಲೂ ಸ್ಫೂರ್ತಿಯಾಗಿರುತ್ತಾರೆ, ಅವರ ದಿಟ್ಟ ನಾಯಕತ್ವ ಮತ್ತು ತ್ಯಾಗದ ಸ್ಮರಣೆಗೆ ರಕ್ತದಾನದ ಮೂಲಕ ಕೃತಜ್ಞತೆ ಸಲ್ಲಿಸೋಣ ಹಾಗೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೋಯಿನ ಅಹ್ಮದ್ ಶೇಖ್, ಅಸೆಂಬ್ಲಿ ಅಧ್ಯಕ್ಷ ಸಲೀಂ ವಠಾರ, ಉಪಾಧ್ಯಕ್ಷರಾದ ವಿನಯಕುಮಾರ ಪಾಟೀಲ,ಪ್ರ.ಕಾ ಅರವಿಂದ ಬಿರಾದಾರ, ಬ್ಲಾಕ್ ಅಧ್ಯಕ್ಷರುಗಳಾದ ಸೋಮನಗೌಡ.ಎಸ್.ಅನೆಸೂರ, ಅರವಿಂದ ರಾಠೋಡ, ರಿಹಾನ್ ಕೆರೂರ, ಉಪಾಧ್ಯಕ್ಷ ಮಹಾಂತೇಶ ಚೆಲವಾದಿ ಸೇರಿದಂತೆ ಪದಾಧಿಕಾರಿಗಳು, ನಾಮನಿರ್ದೇಶಿತ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.