ಸಂತೋಷ ಮಣಗೀರಿಗೆ ಸ್ಫೂರ್ತಿದಾಯಕ ಪ್ರಶಸ್ತಿ

Inspirational award for Santosh Managiri

ಸಿಂದಗಿ 29; ಪಟ್ಟಣದ ಕನ್ನಡಪರ ಹೋರಾಟಗಾರ ಸಂತೋಷ ಮಣಗೀರಿ ಅವರಿಗೆ ರಾಜ್ಯಮಟ್ಟದ ಸ್ಫೂರ್ತಿದಾಯಕ  ಪ್ರಶಸ್ತಿ ಲಭಿಸಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೋರವಾರ ಶಾಖೆವತಿಯಿಂದ ಏಪ್ರಿಲ್ 26ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂತೋಷ್ ಮಣಗಿರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.   

ಕನ್ನಡ ನಾಡು ನುಡಿ ಮತ್ತು ಭಾಷೆಗಾಗಿ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಿರುವ ಇವರು ಇನ್ನು ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನು ಪಡೆಯಲಿ ಎಂದು ಹಿತೈಷಿಗಳು ಶುಭ ಕೋರಿದ್ದಾರೆ.