ವರ್ಷಾ೦ತ್ಯದ ವೇಳೆಗೆ ಇಟಲಿಗೆ ವಿಮಾನ ಸಂಪರ್ಕ ರದ್ದು : ಇರಾನ್

     ತೆಹ್ರಾನ್, ನ 4:   ಇರಾನ್ ನ ಮಹಾನ್ ಏರ್ ಸಂಸ್ಥೆ ಡಿಸೆಂಬರ್ ವೇಳೆಗೆ ಇಟಲಿಗೆ ವಿಮಾನ ಹಾರಾಟ ರದ್ದುಪಡಿಸಲಿದೆ. ಅಮೆರಿಕ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇರಾನ್ ನ ವಿಮಾನಯಾನ ಸಂಸ್ಥೆಯ ಮುಖ್ಯಸ್ಥ ಮಸೌದ್ ಅಸ್ಸಾದಿ ಸಲ್ಮಾನಿ ತಿಳಿಸಿದ್ದಾರೆ. ಇಟಲಿ ನಗರಗಳಾದ ರೋಮ್ ಮತ್ತು ಮಿಲನ್ ಗಳಿಗೆ ಡಿಸೆಂಬರ್ 21 ರ ವರೆಗೆ ಮಹಾನ್ ವಿಮಾನಯಾನ ಸಂಸ್ಥೆಯ ಸೇವೆ ಇರಲಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇರಾನ್ ವೈಮಾನಿಕ ಸಂಸ್ಥೆ ಗುರಿಯಾಗಿಸಿ ಅಮೆರಿಕ ನಿರ್ಧಾರ ಹೇರಿರುವುದರ ಭಾಗವಾಗಿ ಅಮೆರಿಕದ ಒತ್ತಡದ ಪರಿಣಾಮದಿಂದಾಗಿ ಇಟಲಿಗೆ ಮಹಾನ್ ಏರ್ ರದ್ದುಪಡಿಸುವ ತೀರ್ಮಾನಕ್ಕೆ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.         ಕಳೆದ ವರ್ಷದ ಡಿಸೆಂಬರ್ ನಲ್ಲಿ ಯೂರೋಪ್ ನ ಎರಡು ದೇಶಗಳಾದ ಜರ್ಮನಿ ಮತ್ತು ಫ್ರಾನ್ಸ್ ಗಳು ಮಹಾನ್ ಏರ್ ಸಂಸ್ಥೆಯ ವಿಮಾನಗಳ ಮೇಲೆ ನಿಷೇಧ ಹೇರಿತ್ತು.