ಜಲ ಶಂಕರ ದೇವಸ್ಥಾನ ಪುರಾತನವಾದ ದೇವಸ್ಥಾನ: ಹುಯಿಲಗೋಳ

ಲೋಕದರ್ಶನ ವರದಿ

ಗದಗ 16: ಜಲ ಶಂಕರ ಪುಣ್ಯಕ್ಷೇತ್ರ ದೇವಸ್ಥಾನ ಪುರಾತನವಾದ ದೇವಸ್ಥಾನ ಬಹಳ ಒಂದು ಅದ್ಬುತ ಶಕ್ತಿಯನ್ನು ಹೊಂದಿದೆ ಎಂದು ಶರದ್ರಾವ ಹುಯಿಲಗೋಳ ಹೇಳಿದರು.

ಅವರು ನಾಗಾವಿ ತಾಂಡಾ ಜಲ ಶಂಕರ ದೇವಸ್ಥಾನದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಅನಾರೋಗ್ಯದಿಂದ ಇದ್ದರೆ ಇಲ್ಲಿಗೆ ಬಂದು ಬ್ರಹ್ಮದೇವರ ಬಾವಿಯಲ್ಲಿ ಸ್ನಾನ ಮಾಡಿದರೆ ಅವರ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು.

ಇನ್ನೊರ್ವ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕನರ್ಾಟಕ ತಾಂಡಾ ರಕ್ಷಣಾ ವೇದಿಕೆ ಅಧ್ಯಕ್ಷ ಪರಮೇಶ ನಾಯಕ ದೇವಸ್ಥಾನಕ್ಕೆ ಬೇಕಾದಂಥ ಅಭಿವೃಧಿ ಕೇಲಸಕ್ಕೆ ಮಜುರಾಯಿ ಇಲಾಖೆಯವರು ಹೇಚ್ಚು ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಜಾತ್ರಾ ಕಮಿಟಿಯ ಅಧ್ಯಕ್ಷ ಗಣೀಶ ಪಾಂಡಪ್ಪ ಲಮಾಣಿ, ದಯಾನಂದ ಪವಾರ ಧನಸಿಂಗ್ ಲಮಾಣಿ, ಹನುಮಂತ ಲಮಾಣಿ, ಮಾಂತೇಶ ಲಮಾಣಿ, ಸುರೇಶ ಲಮಾಣಿ, ಬಾಲಾಜಿ ಪೂಜಾರ್, ವಿಠಲ್ ಲಮಾಣಿ, ಧರಮಪ್ಪ ರಾಠೂಡ್, ಮೂತಿಲಾಲ್ ಚನ್ನಳ್ಳಿ, ಚಂದ್ರಶೇಖರ ನಾಯಕ, ಪಾಂಡಪ್ಪ ಮನಿಯಪ್ಪ ಲಮಾಣಿ  ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಜಲ ಶಂಕರ ಪುಣ್ಯಕ್ಷೇತ್ರ ಜಾತ್ರಾ ಮಹೋತ್ಸವದ ಸರ್ವ ಸದಸ್ಯರು, ಸುತ್ತಮುತ್ತಲಿನ ಗ್ರಾಮದ ಗುರು ಹಿರಿಯರು, ಯುವಕರು ಭಾಗವಹಿಸಿದ್ದರು