ವಿಜಯಪುರ 22: ಶ್ರೀ ಚಂದ್ರಗಿರಿ ದೇವಿ ಹಾಗೂ ಶ್ರೀ ಗುರು ಚಕ್ರವರ್ತಿ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವದಂಗವಾಗಿ ವಿಜಯಪುರ ನಗರದ ರಹಿಮ ನಗರದಲ್ಲಿರುವ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠದಲ್ಲಿ ದಿ. 04/05/2025, ರವಿವಾರ ಬೆಳಿಗ್ಗೆ 11-00ಕ್ಕೇ ಬಡ ಜನತೆಗೆ ಅನುಕೂಲವಾಗಲೆಂದು ಸರಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಾಡಿನ ಪರಮ ಪೂಜ್ಯರು ಗಳ ಸಾನಿಧ್ಯದಲ್ಲಿ, ಸಚಿವರು,ಶಾಸಕರುಗಳು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ವಿವಾಹ ಮಹೋರ್ತದ ನಂತರ ಭಕ್ತಾದಿಗಳಿಗೆ ಅನ್ನ ಸಂತರೆ್ಣ ಹಾಗೂ ಜಾತ್ರೆಯ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ಈ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಜೋಡಿಗಳು ಆಧಾರ ಕಾರ್ಡ, ವಯಸ್ಸಿನ ದೃಡೀಕರಣ ಪತ್ರದೊಂದಿಗೆ ಫೋನ್ ಕರೆ ಅಥವಾ ಖುದ್ದಾಗಿ ಬಂದು 9483222238, 9448439976, 8310481104, 9902836193, 6360561489 ಗೆ ಸಂಪರ್ಕಿಸಿ ಹೆಸರು ನೋಂದಾಯಸಿಕೊಳ್ಳಲು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಲಾಗಿದೆ.