ಧಾರವಾಡ 08: ಪತ್ರಿಕೋದ್ಯಮ ವಿದಾಥರ್ಿಗಳು ಇಂದಿನ ಆಧುನಿಕ ಯುಗದಲ್ಲಿ ಹೊಸ ತಂತ್ರಾಂಶಗಳ ಜ್ಞಾನರ್ಜನೆಗೆ ಮುಂದಾಗಬೇಕು ಎಂದು ಹುಬ್ಬಳ್ಳಿ ಉಪ ಸಂಪಾದಕ ಸಿದ್ಧು ಆರ್.ಜಿ ಹಳ್ಳಿ ಹೇಳಿದರು.
ಕನರ್ಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ನಡೆದ ಸಂವಹನ ಕೂಟದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪತ್ರಿಕೆಗಳಿಗೆ ಪುಟವಿನ್ಯಾಸವೇ ಜೀವಾಳ. ಪುಟವಿನ್ಯಾಸವು ತನ್ನದೇ ಆದ ವಿಶೇಷ ಮಹತ್ವ ಹೊಂದಿದೆ. ತಂತ್ರಜ್ಞಾನದ ಅತೀವ ಬೆಳವಣಿಗೆಯಿಂದ ಇಂದು ಪತ್ರಿಕೆಗೆ ಸಾಕಷ್ಟು ಪೈಪೋಟಿಯನ್ನು ನವಮಾಧ್ಯಮಗಳು ನೀಡುತ್ತಿವೆ.
ಬಿಡುವಿಲ್ಲದ ಸಮಯ ಸಾರಿಣಿಯಲ್ಲಿ ಜನರು ಪತ್ರಿಕೆಯನ್ನು ಓದುತ್ತಿಲ್ಲ ಬದಲಾಗಿ ನೋಡುತ್ತಿದ್ದಾರೆ. ಪತ್ರಿಕೆಯಲ್ಲಿ ಸುದ್ದಿಗಿಂತಲೂ ಪ್ರಕಟವಾಗುವ ಸಂಕ್ಷಿಪ್ತ ಸುದ್ದಿ, ಮಾಹಿತಿಯೊಂದಿಗೆ ಗ್ರಾಫಿಕ್ಸ, ನಕ್ಷೆಗಳು ಓದುಗರ ಗಮನ ಸೆಳೆಯುತ್ತಿವೆ. ಸಮಾಜ ಬದಲಾದಂತೆ ಪತ್ರಕರ್ತರೂ ಬದಲಾಗಬೇಕು. ಒಬ್ಬ ವರದಿಗಾರ ಕೇವಲ ಸುದ್ದಿ ಒದಗಿಸಿದರೆ, ಅದನ್ನು ಸಿಂಗರಿಸುವ ಕಾರ್ಯ ಉಪಸಂಪಾದಕನದ್ದು. ಹಾಗಾಗಿ ಜನರು ಇಷ್ಟಪಡುವ ಹಾಗೆ ಪತ್ರಿಕೆಯ ಪುಟ ವಿನ್ಯಾಸ ಮಾಡಬೇಕು.
ಪತ್ರಿಕಾ ಪುಟವಿನ್ಯಾಸಕ್ಕಾಗಿ ಹಲವಾರು ತಂತ್ರಾಶಗಳು ಲಭ್ಯವಿದೆ. ಇತ್ತೀಚಿಗೆ ಇನ್ಡಿಸೈನ್ ತಂತ್ರಾಂಶ ಹೆಚ್ಚು ಬಳಕೆಯಲ್ಲಿದೆ. ಈ ತಂತ್ರಾಂಶ ಬಳಸುವ ರೀತಿ, ಅದರ ಮಹತ್ವವನ್ನು ಪ್ರಾಯೋಗಿಕವಾಗಿ ತಿಳಿಸಿದರು.
ವಿಭಾಗದ ಮುಖಸ್ಥ ಪ್ರೊ. ಜೆ.ಎಮ್.ಚಂದುನವರ ಮಾತನಾಡಿ, ಇಂದಿನ ಪತ್ರಿಕೋದ್ಯಮ ವಿದ್ಯಾಥರ್ಿಗಳು ಮೂಲಭೂತವಾಗಿ ಕಲಿಯಲೇಬೇಕಾದ ತಾಂತ್ರಿಕ ಅಂಶವೆಂದರೆ ಪುಟವಿನ್ಯಾಸ. ಇದಕ್ಕೆ ಪ್ರಾಯೋಗಿಕವಾಗಿ ಹೆಚ್ಚು ಒತ್ತು ನೀಡಬೇಕು. ಇದರಿಂದ ಹೊಸದನ್ನು ಕಲಿಯಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಪ್ರೀತಿಕಾಮತ ಸ್ವಾಗತಿಸಿದರು. ವಿಜಯ ಲಮಾಣಿ ನಿರೂಪಿಸಿದರು. ವಿಜಯ ಬೆಳ್ಳಾರಿಮಠ ವಂದಿಸಿದರು. ವಿಭಾಗದ ವಿದ್ಯಾಥರ್ಿಗಳು ಹಾಜರಿದ್ದರು.