ಕೆಎಂಎಫ್ ಸಿಬ್ಬಂದಿ ಆರ್. ಅಶೋಕಗೆ ಬೀಳ್ಕೊಡುಗೆ

ಲೋಕದರ್ಶನ ವರದಿ

ಬೆಳಗಾವಿ: ಸ್ಥಳೀಯ ಕೆ.ಎಂ.ಎಫ್ ಹಾಲು ಒಕ್ಕೂಟದಲ್ಲಿ 32 ವರ್ಷ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಸದ್ಯ ಅಕೌಂಟಂಟ್ ಆಗಿ ಸೇನೆ ಸಲ್ಲಿಸಿ ನಿವೃತ್ತರಾದ ಆರ್. ಅಶೋಕ ಅವರಿಗೆ ಒಕ್ಕೂಟದ ವತಿಯಿಂದ ಗೌರವಿಸಿ ಬೀಳ್ಕೊಡಲಾಯಿತು.

ಸೇವಾ ನಿವೃತ್ತಿ ಹೊಂದುತ್ತಿರುವ ಆರ್. ಅಶೋಕ ಕುರಿತು ಸಿಬ್ಬಂದಿಯವರಾದ ವ್ಹಿ.ಕೆ.ಜೋಶಿ, ಜಯರಾಮ್, ಎಚ್.ಎಸ್. ದುಂಡಿ, ಜಯಕುಮಾರ ಇವರು ತಮ್ಮ ಅನಿಸಿಕೆಗೆ ವ್ಯಕ್ತಪಡಿಸಿ ಆರ್. ಅಶೋಕ ಅವರ ಶಿಸ್ತುಬದ್ಧ, ಕಾರ್ಯಬದ್ಧ, ಸೇವಾನಿಷ್ಟ ಗುಣಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ವ್ಯವಸ್ಥಾಪಕ ಡಾ. ಜಯಪ್ರಕಾಶ ಮನೇರಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು.

ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪಕ ನಿದರ್ೇಶಕ ಉಬೇದುಲ್ಲಾ ಖಾನ ಅವರು ಮಾತನಾಡಿ ಆರ್. ಅಶೋಕ ಅವರ ಜೀವನ ಸುಖಕರವಾಗಲಿ ಎಂದು ಹಾರೈಸಿದರು. ನಿವೃತ್ತಿ ನಿಮಿತ್ತ ಆರ್. ಅಶೋಕ ಅವರನ್ನು ಒಕ್ಕೂಟದ ವತಿಯಿಂದ ಹಾಗೂ ನೌಕರ ಸಂಘದ ವತಿಯಿಂದ ಶಾಲು ಹೊದಿಸಿ ಸತ್ಕರಿಸಲಾಯಿತು. ಆರಂಭದಲ್ಲಿ ಶ್ರೀರಂಗ ಜೋಶಿ ಪ್ರಾರ್ಥನೆ ಹೇಳಿದರು. ನಾಗಮೂತಿ ನಿರೂಪಿಸಿ ವಂದಿಸಿದರು. ಒಕ್ಕೂಟದ ಎಲ್ಲಾ ವಿಭಾಗಗಳ ಸಿಬ್ಬಂದಿ ಭಾಗವಹಿಸಿದ್ದರು