ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ.ಮಾಸಿಕ ಸಭೆ

ಹಾವೇರಿ 16 : ಸಕಾಲಕ್ಕೆ ಕಾಮಗಾರಿ ಅನುಷ್ಠಾನಗೊಳಿಸದೇ ಬಿಡುಗಡೆಯಾದ ಹಣ ಬಳಕೆಮಾಡದೇ ವ್ಯರ್ಥಮಾಡಿದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಅವರು ಎಚ್ಚರಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಸೆಪ್ಟೆಂಬರ ತಿಂಗಳ ಮಾಸಿಕ ಕೆ.ಡಿ.ಪಿ. ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಸಾಲಿನಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ನಿಗಧಿತ ಅವಧಿಯಲ್ಲಿ ಕಾಮಗಾರಿಕೈಗೊಳ್ಳದ ಕಾರಣ ಹಾಗೂ ಕಾಮಗಾರಿ ವೆಚ್ಚದ ಬಿಲ್ಲುಗಳನ್ನು ಸಕಾಲದಲ್ಲಿ ಖಜಾನೆಗೆ ಸಲ್ಲಿಕೆಮಾಡದಕಾರಣ 1.70 ಕೋಟಿ ರೂ. ಅನುದಾನ ಬಳಕೆಮಾಡಲು ಸಾಧ್ಯವಾಗದೆ ಲ್ಯಾಪ್ಸ್ ಆಗಿದೆ ಎಂದು ತಿಳಿಸಿದರು.

ಆಥರ್ಿಕ ವರ್ಷದಲ್ಲಿ ಇಂತಹ ಲೋಪಗಳಿಗೆ ಅವಕಾಶಮಾಡಿಕೊಡಬೇಡಿ. ಎಲ್ಲ ಇಲಾಖಾ ಅಧಿಕಾರಿಗಳು ನಿಗಧಿತ ಅವಧಿಯಲ್ಲಿ ಕ್ರಿಯಾಯೋಜನೆ ಅನುಸಾರ ಕಾಮಗಾರಿಯನ್ನು ಪೂರ್ಣಗೊಳಿಸಿ ಅನುದಾನವನ್ನು ಪೂರ್ಣಪ್ರಮಾಣದಲ್ಲಿ ಬಳಕೆಮಾಡಿಕೊಳ್ಳಬೇಕು  ಎಂದು ತಿಳಿಸಿದರು.

ವಿವಿಧ ಗುತ್ತಿಗೆ ಸಂಸ್ಥೆಗಳಿಂದ ನಿಮರ್ಾಣ ಮಾಡಲಾದ ಕಾಮಗಾರಿಗಳನ್ನು ಇಲಾಖೆಗೆ ಹಸ್ತಾಂತಮಾಡಿಕೊಳ್ಳುವ ಪೂರ್ವದಲ್ಲೇ ಗುಣಮಟ್ಟವನ್ನು ಪರಿಶೀಲನೆ ಮಾಡಬೇಕು. ಕಳಪೆಕಾಮಗಾರಿಯಾದೆ ಹಸ್ತಾಂತರಮಾಡಿಕೊಳ್ಳಬಾರದು. ಒಂದೊಮ್ಮೆ ಇಲಾಖೆಗೆ ಹಸ್ತಾಂತರವಾದ ಮೇಲೆ ಕಾಮಗಾರಿ ಕಳಪೆ ಗುಣಮಟ್ಟ ಎಂದು ಕಂಡುಬಂದರೆ ಆಯಾ ಇಲಾಖಾ ಅಧಿಕಾರಿಗಳನ್ನೇ ಹೊಣೆಮಾಡಲಾಗುವುದು ಎಂದು ಎಚ್ಚರಿಸಿದರು.

ಶುದ್ಧ ಕುಡಿಯುವ ನೀರು ಪೂರೈಕೆಗೆ ಸಕರ್ಾರ ಆದ್ಯತೆ ನೀಡಿದೆ, ಲಕ್ಷ ರೂ.ವೆಚ್ಚಮಾಡುತ್ತಿದೆ. ಆದರೆ ಶುದ್ಧ ನೀರಿನ ಘಟಕದಲ್ಲಿ ಅಳವಡಿಸಿರುವ ಉಪಕರಣಗಳು ಹಾಗೂ ಷರತ್ತಿನಂತೆ ನಿರ್ವಹಣೆಮಾಡಲು ಏಜೆನ್ಸಿಗಳು ವಿಫಲವಾಗಿವೆ. ಕಾರಣದಿಂದ ಜನರಿಗೆ ಉದ್ದೇಶದಂತೆ ನೀರು ಪೂರೈಸಲಾಗುತ್ತಿಲ್ಲ. ಇನ್ನುಮುಂದೆ ಘಟಕಗಳು ಕೆಟ್ಟುನಿಂತಾಗ ಒಂದೇ ದಿನದಲ್ಲಿ ದುರಸ್ತಿಯಾಗಬೇಕು. ಕರ್ತವ್ಯದಲ್ಲಿ ಲೋಪವ್ಯಸಗಿದ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಸೂಚಿಸಿದರು.

ಜಿಲ್ಲೆಯ ರಸ್ತೆಗಳ ಗುಂಡಿಗಳನ್ನು ಮುಚ್ಚಲು 2 ಕೋಟಿ ರೂ. ಹಣ ಬಿಡುಗಡೆಯಾಗಿದೆ. ತ್ವರಿತವಾಗಿ ಕ್ರಿಯಾಯೋಜನೆ ಅನುಮೋದನೆಪಡೆದು ರಸ್ತೆ ತಗ್ಗುಗಳನ್ನು ಮುಚ್ಚಲು ಕ್ರಮವಹಿಸುವಂತೆ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಸೂಚಿಸಿದರು.

ಮಾಸೂರ-ರಾಣೇಬೆನ್ನೂರ ರಸ್ತೆ ತೀವ್ರವಾಗಿ ಹಾಳಾಗಿದೆ. ಈಗಾಗಲೇ ರಸ್ತೆಯನ್ನು ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲು ಪ್ರಾಧಿಕಾರಕ್ಕೆ ವಹಿಸಲಾಗಿದೆ. ಕಾಮಗಾರಿ ಆರಂಭವಾಗುವವರೆಗೆ  ತಾತ್ಕಾಲಿಕವಾಗಿ ದುರಸ್ಥಿಗೊಳಿಸಿ ವಾಹನಗಳ ಓಡಾಟಕ್ಕೆ ಅನುಕೂಲಮಾಡಿಕೊಡುವಂತೆ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆ ರಸ್ತೆಗಳ ಬದಿಯಲ್ಲಿ ತಿಪ್ಪೆಗುಂಡಿಗಳನ್ನು ನಿಮರ್ಾಣಮಾಡಿದ್ದಾರೆ. ರಸ್ತೆಯಲ್ಲೇ ಜಾನುವಾರುಗಳನ್ನು ಕಟ್ಟುತ್ತಾರೆ. ಇದರಿಂದ ವಾಹನ ಓಡಾಟಕ್ಕೆ ತೊಂದರೆಯಾಗುತ್ತಿದೆ. ತಿಪ್ಪೆಗುಂಡಿಗಳನ್ನು ತೆರವುಗೊಳಿಸಬೇಕು, ರಸ್ತೆಬದಿಯಲ್ಲಿ ಚರಂಡಿಗಳನ್ನು ನಿಮರ್ಾಣಮಾಡಬೇಕು. ಒಂದೊಮ್ಮೆ ಇಲಾಖೆಯಲ್ಲಿ ಅನುದಾನವಿಲ್ಲದಿದ್ದರೆ ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗದಿಂದ ಕಾಮಗಾರಿಕೈಗೊಳ್ಳಲು ಸೂಚಿಸಿದರು.

ತುಂಗಾ ಮೇಲ್ದಂಡೆ ಯೋಜನೆಯಡಿ ಮುಖ್ಯ ಕಾಲುವೆ, ಉಪ ಕಾಲುವೆ, ಹೊಲಗಾಲುವೆಗಳಲ್ಲಿ ಗಿಡಗಂಟೆ, ಬಳ್ಳಾರಿ ಜಾಲಿ ಬೆಳೆದುಕೊಂಡು ಸರಾಗವಾಗಿ ನೀರು ಹರಿಯುತ್ತಿಲ್ಲ. ಹಿರೇಕೆರೂರು ತಾಲೂಕು ಚಿಕ್ಕಕಬ್ಬಾರ ಒಳಗೊಂಡಂತೆ ಹಲವು ಗ್ರಾಮಗಳ  ನೂರಾರು ಎಕರೆ ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ಕಸತೆರವು ಹಾಗೂ ಹೊಲಗಳಿಗೆ ನೀರು ಹರಿಸುವ ಕುರಿತಂತೆ ಕ್ರಮವಹಿಸಿ. ಕೆಲವೆಡೆ ಹೊಲಗಾಲುವೆಗಳು ಮಳೆಯಿಂದ ಕೊಚ್ಚಿಹೋಗಿವೆದುರಸ್ಥಿಮಾಡಿ ಹಾಗೂ ನೀರಾವರಿ ಕಾಲುವೆ ರಸ್ತೆಗಳನ್ನು ಉದ್ಯೋಗ ಖಾತ್ರಿಯಡಿ ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲಮಾಡಿಕೊಡಿ ಎಂದು ಅಭಿಯಂತರರಿಗೆ ಸೂಚಿಸಿದರು.

ಉದ್ಯೋಗ ಖಾತ್ರಿ ಅನುದಾನದ ಬಳಕೆಗೆ ತಕ್ಕಂತೆ ಕಾಮಗಾರಿಗಳು ಪ್ರಮಾಣ ನಡೆಯುತ್ತಿಲ್ಲ. ಬಹುಪಾಲುಕಡೆ ಪಂಚಾಯತಿ ಸದಸ್ಯರುಗಳೇ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಕ್ರೇಟ್ ರಸ್ತೆ ಸೇರಿದಂತೆ ಖಾತ್ರಿ ಕಾಮಗಾರಿಗಳು ಬಹುಪಾಲು ಗುಣಮಟ್ಟದಿಂದ ಕೂಡಿರುವುದಿಲ್ಲ. ಕೆಲವೆಡೆ ಕ್ರಿಯಾ ಯೋಜನೆ ಅನುಮೋದನೆ ಪಡೆಯದೇ ಕಾಮಗಾರಿ ಮುಗಿಸಿರುತ್ತಾರೆ. ಲೋಪಗಳು ಆಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಕರ್ಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ತ್ಯಾಜ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕುಜಾನುವಾರುಗಳಿಗೆ ಕಾಲು-ಬಾಯಿ ರೋಗ ಹರಡಿದ ಗ್ರಾಮಗಳಲ್ಲಿ ವೈದ್ಯಕೀಯ ಕ್ಯಾಂಪ್ಮಾಡಿ ಸೂಕ್ತ ಚಿಕಿತ್ಸೆನೀಡಿ. ಬಾಳೆ, ಅಡಿಕೆಗೆ ರೋಗಬಾಧೆ ಕಂಡುಬಂದಿದೆ. ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.    

                 ಅಂಗನವಾಡಿಗಳಲ್ಲಿ ಕಳಪೆ ಆಹಾರ ಸಾಮಗ್ರಿ ಹಾಗೂ ಗ್ಯಾಸ್ ಸಿಲೆಂಡರ್  ಪೂರೈಕೆಯಾಗುತ್ತಿರುವ ಕುರಿತಂತೆ ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಳಪೆ ಸಾಮಗ್ರಿಗಳನ್ನು ಪ್ರದಶರ್ಿಸಿದ್ದಾರೆ. ಕುರಿತಂತೆ ಸಮಗ್ರ ತಪಾಸಣೆ ನಡೆಸಬೇಕು. ಕಳೆಪದಾರ್ಥಗಳ ಪೂರೈಕೆಯನ್ನು ಸ್ಥಗಿತಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿ.ಪಂ.ಉಪಾಧ್ಯಕ್ಷೆ ಶ್ರೀಮತಿ ದೀಪಾ ಅತ್ತಿಗೇರಿ, ಜಿಲ್ಲಾ ಪಂಚಾಯತ್ ಉಪಕಾರ್ಯದಶರ್ಿ ಜಿ.ಗೋವಿಂದಸ್ವಾಮಿಮುಖ್ಯ ಯೋಜನಾಧಿಕಾರಿ ವಿಶ್ವನಾಥ್ ಹಾಗೂ ವಿವಿಧ ಸ್ಥಾಯಿ ಸಮಿತಿಯ ಅಧ್ಯಕ್ಷರು, ಕನ್ನಡ ಕಾವಲು ಸಮಿತಿ ಸದಸ್ಯರಾದ ಪ್ರಕಾಶ ಜೈನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.