ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕು.ವಿ.ಸುಧೀಕ್ಷಾಗೆ ಸನ್ಮಾನ
ಬಳ್ಳಾರಿ: 2019-20ನೇ ಸಾಲಿನ ರಾಜ್ಯ ಮಟ್ಟದ ಕ್ರೀಡಾಕೂಟದ 100, 200 ಮೀಟರ್ ಓಟದ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಸಕರ್ಾರಿ ಆದರ್ಶ ವಿದ್ಯಾಲಯದ ವಿದ್ಯಾಥರ್ಿನಿ, ವಿ.ಸುಧೀಕ್ಷಾಗೆ ಶಾಲೆಯಲ್ಲಿ ಮುಖ್ಯ ಗುರುಗಳಾದ ಆಂಜನೇಯ.ಕೆ.ಜಿ. ಮತ್ತು ಸಿಬ್ಬಂದಿ ವರ್ಗದವರು ಸನ್ಮಾನಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಶ್ರೀಧರನ್ ಮಾತನಾಡಿ ಬಳ್ಳಾರಿ ಜಿಲ್ಲೆಗೆ ಐತಿಹಾಸಿಕ ಗೆಲುವು ತಂದಕೊಟ್ಟ ಸುಧೀಕ್ಷಾಳ ಶ್ರಮ ಶ್ಲಾಘನೀಯ ಎಂದರು.
ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಶಿವಲಿಂಗ ರೆಡ್ಡಿಯವರು ಮಾತನಾಡಿ ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಆದರ್ಶ ಶಾಲೆಯ ಸುಧೀಕ್ಷಾ ಅನನ್ಯ ಸಾಧನೆ ಮಾಡಿದ್ದಾಳೆ ಎಂದರು.
ಬಾಲಕಿಯರ ವಿಭಾಗದಲ್ಲಿ ಈ ರೀತಿಯ ಸಾಧನೆ ಜಿಲ್ಲೆಯಲ್ಲಿಯೇ ಮೊದಲು ಎಂದು ದೈಹಿಕ ಶಿಕ್ಷಣ ಶಿಕ್ಷಕರ ಗ್ರೇಡ್-1 ಜಿಲ್ಲಾಧ್ಯಕ್ಷ ಕೆ. ಎರ್ರಿಸ್ವಾಮಿ ಯವರು ಅಭಿನಂದಿಸಿದರು.
ರಾಷ್ಟ್ರಮಟ್ಟದಲ್ಲಿ ಉನ್ನತ ಮಟ್ಟದ ಸಾಧನೆ ಮಾಡುವ ಛಲ, ವಿಶ್ವಾಸ ಮತ್ತು ಶಕ್ತಿ ಅವಳಲ್ಲಿದೆ ಎಂದು ವೀರೇಶಪ್ಪ ವಿಷಯ ಪರಿವೀಕ್ಷಕರು ಶುಭ ಹಾರೈಸಿದರು.
ಸುಧೀಕ್ಷಾಳ ತಂದೆ-ತಾಯಿಯಂತೆ ಎಲ್ಲಾ ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರವರ ಆಸಕ್ತಿದಾಯಕ ಕ್ಷೇತ್ರದಲ್ಲಿ ಅವರನ್ನು ಪ್ರೋತ್ಸಾಹಿಸಬೇಕೆಂದು ದೈಹಿಕ ಶಿಕ್ಷಕ ಉಮೇಶ್ ಕುಮಾರ್ ರವರು ತಿಳಿಸಿದರು.
ಸಿಬ್ಬಂದಿ ವರ್ಗದವರಾದ ವೀಣಾ, ಜರೀನಾ ತಾಜ್, ಸೌಭಾಗ್ಯ, ಜ್ಯೋತಿ, ಶ್ರೀಮತಿ ಶೈಲಜ, ಬಸವ ಜ್ಯೋತಿ, ಅಶ್ವಿನಿ ಹಾಗು ಸುಮಲತಾ, ನಾಗರಾಜ, ಮತ್ತು ಸರಸ್ವತಿಯವರು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆದರ್ಶ ಶಾಲೆಯ ಮುಖ್ಯಗುರು ಆಂಜನೇಯ ಕೆ.ಜಿ. ರವರು ತನ್ನ ಸತತ ಪರಿಶ್ರಮದಿಂದ ಇಂದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸುಧೀಕ್ಷಾ ವಿಶ್ವಮಟ್ಟದಲ್ಲಿ ಬೆಳೆಯಲಿ, ನಮ್ಮ ನಾಡಿಗೆ ಕೀತರ್ಿ ತರಲೆಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್ ಕುಮಾರ್, ಕ್ರೀಡಾ ತರಬೇತುದಾರರಾದ ರಾಮಸ್ವಾಮಿಯವರಿಗೆ ಮತ್ತು ಸುಧೀಕ್ಷಾಳ ತಂದೆ-ತಾಯಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಧರನ್. ಉಪ ನಿದರ್ೇಶಕರು ಸಾ.ಶಿ.ಇ. ಬಳ್ಳಾರಿ, ವಿಷಯ ಪರಿವೀಕ್ಷಕ ವೀರೇಶಪ್ಪ, ಸತ್ಯನಾರಾಯಣ, ಬಸವರಾಜ ಹಾಗೂ ಶಿವಲಿಂಗ ರೆಡ್ಡಿ. ಎ.ಸಿ.ಪಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ರುದ್ರಮುನಿ ರಾಜಗುರು, ಇ.ಸಿ.ಓ. ಈರಣ್ಣ ಬಡಿಗೇರ್, ದೈಹಿಕ ಶಿಕ್ಷಣ ಶಿಕ್ಷಕರ ಗ್ರೇಡ್-1 ಜಿಲ್ಲಾ ಅಧ್ಯಕ್ಷ ಎರ್ರಿಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕರ ಗ್ರೇಡ್-2 ಜಿಲ್ಲಾ ಅಧ್ಯಕ್ಷ ಜೆ.ಎಂ.ಆರ್.ಬಸವರಾಜ್, ದೈಹಿಕ ಶಿಕ್ಷಣ ಶಿಕ್ಷಕರ ಗ್ರೇಡ್-1 ಕುರುಗೋಡು ತಾಲೂಕಿನ ಅಧ್ಯಕ್ಷ ವೀರನಗೌಡ, ಸುಧೀಕ್ಷಾಳ ಪಾಲಕ ಪೋಷಕರು ಮತ್ತು ವಿದ್ಯಾಥರ್ಿಗಳು ಭಾಗವಹಿಸಿದ್ದರು.