ಗ್ರಾಮೀಣ ಭಾಗದ ಬಯಲಾಟ ಕಲೆ ಉಳಿಸಿ: ಶಾಸಕ ಜೆ.ಎನ್‌.ಗಣೇಶ

Kampli news-16-4

ಕಂಪ್ಲಿ 16: ಆಧುನಿಕ ಯುಗದಲ್ಲಿ ಗ್ರಾಮೀಣ ಕಲೆಯಲ್ಲಿ ಒಂದಾದ ಬಯಲಾಟ ಕಲೆಯು ಕಣ್ಮರೆಯಾಗುತ್ತಿದ್ದು, ಈ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗುವ ಜತೆಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಶಾಸಕ ಜೆ.ಎನ್‌.ಗಣೇಶ ಹೇಳಿದರು.  

ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ದೇವಮಾಂಭ ಕೃಷ ಪೋಷಿತ ಬಯಲಾಟ ನಾಟಕ ಮಂಡಳಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಾಲಿ ವೆಂಕೋಬಣ್ಣ ವಿರಚಿತ ಗಿರಿಜಾ ಕಲ್ಯಾಣ ಅರ್ಥಾತ್ ತಾರಕಸೂರನ ವಧಾ ಪೌರಾಣಿಕ ಬಯಲಾಟಕಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಯಲಾಟಕ್ಕೆ ಹೆಚ್ಚಿನ ಅಧ್ಯತೆ ನೀಡುವುದರ ಜೊತೆಗೆ ಕಲೆಯನ್ನು ಉಳಿಸಿ ಬೆಳಿಸಲು ಯುವಕರು ಮುಂದಾಗಬೇಕು.  

ಬಾಲ್ಯದಲ್ಲಿ ಮಕ್ಕಳಿಗೆ ಕಲೆ ಬಯಲಾಟದ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಕಲೆಗಳ ಸಂರಕ್ಷಣೆ ಸಾಧ್ಯ. ತಾಲೂಕು ವ್ಯಾಪ್ತಿಯ ಕಂಪ್ಲಿ ಮುದ್ದಪುರ ಅಗಸಿಯಿಂದ ರಾಮಸಾಗರ ಕ್ರಾಸ್‌ವರೆಗೂ 4ಕೋಟಿ ವೆಚ್ಚದಲ್ಲಿ ರಸ್ತೆಗೆ ಶೀಘ್ರದಲ್ಲಿ ಭೂಮಿ ಪೂಜೆ ಮಾಡಲಾಗುವುದು ಎಂದು ಭರವಸೆ ನೀಡಿದರು.  

ವಿನಾಯಕ, ಪಾರ್ವತೀಶ್ ಹೂಗಾರ(ಬಾಲಕೃಷ್ಣ ಪಾತ್ರಧಾರಿ), ಬಳ್ಳಾರಿ ನಾಗರಾಜ(ಕೃಷ್ಣ), ಜೀರ್ ಮಲ್ಲಿಕಾರ್ಜುನ(ಮನ್ಮಥ ಪಾತ್ರಧಾರಿ), ಜಡೆ ದೊಡ್ಡಬಸಪ್ಪ (ಬೃಹಸ್ಪತಿ), ಉಪ್ಪಾರ ದೊಡ್ಡಬಸಪ್ಪ (ನಾರದ), ಜಡೆ ಮಹಾದೇವಪ್ಪ ಯಾದವ್ (ಹೇಮಾಂತರಾಜ), ಸೋಮಶೇಖರ ರಾಜಶೇಖರ(ಪರಮೇಶ್ವರ), (ನಂದೀಶ್ವರ), ಉಪ್ಪಾರ ಮುದ್ರಿಕಾರ ಭೀಮಪ್ಪ (ತಾರಕ ಸೂರ), ಚೌಕಳಿ ರಾಮ (ವಜ್ರದೂಷ), ಬಳ್ಳಾರಿ ಪುರುಷೋತ್ತಮ (ಕಂಠೀರವ), ದಾಸರ ಹನುಮಂತಪ (ದೇವೇಂದ್ರ), ಪವಿತ್ರ ಗೊಳ್ಳರಹಳ್ಳಿ(ಶಚಿರುಕ್ಕಿಣಿ), ಜೀರ್ ಅಂಜಿಲಿ(ಪಾರ್ವತಿ ಪಾತ್ರ), ನಾಗರತ್ನ ವಿರುಪಾಪುರ(ಮೇನಕ/ರಥಿದೇವಿ) ಇವರು ವಿವಿಧ ಪಾತ್ರಧಾರಿಗಳಾಗಿ ಅಭಿನಯಿಸಿ, ಪ್ರೇಕ್ಷಕರ ಗಮನ ಸೆಳೆದರು.  

ಹೆಚ್‌.ಶಿವರುದ್ರ​‍್ಪ, ಹೆಚ್‌.ತಿಪ್ಪೇಸ್ವಾಮಿ ಇವರು ಹಾರ್ಮೋನಿಯಂ ನುಡಿಸಿದರು. ವಿ.ನಾರಾಯಣಪ್ಪ ಇವರು ಕಥಾ ನಾಯಕರಾಗಿ, ಕುಂಟೋಜಿ ಶಿವುರಾಜ ಸಾರಧಿ, ದಳವಾಯಿ ಗಂಗಪ್ಪ ಮತ್ತು ಅಗಸರ ಮಡಿವಾಳಪ್ಪ ವಸ್ತ್ರಾಲಂಕಾರ, ಕುಡತಿನಿ ತಿಪ್ಪೇಸ್ವಾಮಿ ಇವರು ತಬಲಾಕ್ಕೆ ಸಾಥ್ ನೀಡಿದರು. ಮತ್ತು ರಾಜಸಬ್ ಇವರು ರಂಗಸಜ್ಜಿಕೆ ನಿರ್ವಹಿಸಿದರು. ಮಹಿಳೆಯರು, ವೃದ್ಧರು ಸೇರಿ ಸಾರ್ವಜನಿಕರು ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರು ಆಗಮಿಸಿ, ಬಯಲಾಟವನ್ನು ವೀಕ್ಷಿಸಿ, ಚಪ್ಪಾಳೆ, ಶಿಳ್ಳೆ ಹೊಡೆದು, ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್‌.ದುರ್ಗಾದಾಸ ಸೇರಿದಂತೆ ಗ್ರಾಮಸ್ಥರು ಇದ್ದರು.