ಲೋಕದರ್ಶನ ವರದಿ
ಸಂಕೇಶ್ವರ, 3: ನಗರದಲ್ಲಿಇಂದು 63ನೆಯ ಕನರ್ಾಟಕರಾಜ್ಯೋತ್ಸವದ ಸಂಭ್ರಮಾಚಣೆಯು ಅದ್ದೂರಿಯಾಗಿ ನಡೆಯಿತು. ನಗರದ ಗಾಂಧಿ ಚೌಕದಿಂದ ಮುಂಜನೆ 11 ಗಂಟೆಗೆ ಮೆರವಣಿಗೆಯ ಪ್ರಾರಂಭಗೊಂಡಿತು. ಕನ್ನಡದ ಜಯಘೋಷಣೆಗಳೊಂದಿಗೆ ಪ್ರಾರಂಭವಾದ ಮೆರವಣಿಗೆಯು ಅತ್ಯಂತ ಸಂಭ್ರಮ ಸಡಗರಗಳಿಂದ ನಡೆಯಿತು. ಮೆರವಣಿಗೆಯಲ್ಲಿ ನವಶಕ್ತಿ, ದುಗರ್ಾಮಾತೆಯರು, ಒನಕೆ ಓಬವ್ವನ ಚಿತ್ರದುರ್ಗದ ಕೋಟೆ, ಪ್ರತಿಭಾನ್ವೇಷಣೆ, ವೈಜಾನಿಕ ಸಾವಯವ ಕೃಷಿಪದ್ಧತಿ, ಭಾರತದಲ್ಲಿ ಹಳ್ಳಿಗಳ ಸೊಗಡು, ಜಾನಪದ ಕಲೆಗಳು, ಕರಡಿ ಮಜಲು, ಮೊದಲಾದ 14 ರೂಪಕಗಳು ಇದ್ದವು.ಲೇಜಿಮ್, ಡಿಜೆ ಸೌಂಡ್ಸಿಸ್ಟಮ್ಗಳೊಂದಿಗೆ ಕನ್ನಡದ ಯುವಕರು ಕನ್ನಡದ ಜಯ ಘೋಷಣೆಗಳೊಂದಿಗೆ ಕುಣಿದು ಕುಪ್ಪಳಿಸಿದರು.
ಮೆರವಣಿಗೆಯಲ್ಲಿಆನೆಯ ಮೇಲೆ ಅಂಬಾರಿಯಿದ್ದುದು ವಿಶೇಷ ಆಕರ್ಷಣೆಯಾಗಿತ್ತು.ಗೌತಮಕನ್ನಡಕಾನ್ವೆಂಟ ಶಾಲೆಯ ಹೆಣ್ಣಮಕ್ಕಳು ಉದ್ದವಾದಕನ್ನಡದ ಬಾವುಟ ಪ್ರದಶರ್ಿಸಿದರು. ಯುವಕರು ಬೈಕ್ಗಳ ಮೇಲೆ ಕನ್ನಡದ ಧ್ವಜಗಳು ಹಾರಿಸುತ್ತ ಕನ್ನಡಾಂಬೆಯ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಎಲ್ಲಿ ನೋಡಿದಲ್ಲಿ ಕನ್ನಡದ ಬಾವುಟಗಳು ಹಾರಾಡುತ್ತಿದ್ದವು.
ನಗರದ ಹಿರಿಯ ಗಣ್ಯ ವ್ಯಕ್ತಿ ರಾಜ್ಯೋತ್ಸವದ ರೂವಾರಿಯಾದ ಅಪ್ಪಾಸಾಹೇಬ ಶಿರಕೋಳಿ, ಪುರಸಭೆಯ ಸದಸ್ಯರಾದ ಸಂಜಯ ನಷ್ಠಿ, ಸಂಜಯ ಶಿರಕೋಳಿ, ರಾಜ್ಯೋತ್ಸವ ಸಮಿತಿಯಅಧ್ಯಕ್ಷರಾದ ಸುನೀಲ ಪಾಟೀಲ, ಮಾಜಿ ನಗರಾಧ್ಯಕ್ಷರಾದ ಶ್ರೀಕಾಂತ ಹತನೂರೆ, ಇವರುಕನ್ನಡದ ಪೇಟಾ ಹಾಕಿಕೊಂಡಿದ್ದು ವಿಶೇಷವಾಗಿತ್ತು. ಶಂಕರರಾವ ಹೆಗಡೆ, ರೋಹನ ನೇಸರಿ, ದಿಲೀಪ ಹೊಸಮನಿ, ಜಿತೇಂದ್ರ ಮರಡಿ, ಮಹೇಶ ಹಟ್ಟಿಹೊಳಿ, ಸುನೀಲ ಪರ್ವತರಾವ, ಗಜಾನನ ಕ್ವಳ್ಳಿ, ವಿವೇಕ ರಾಮಣ್ಣಾ ಕ್ವಳ್ಳಿ, ಉಮೇಶ ಫಡಿ, ಪುರಸಭೆಗೆ ನೂತನವಾಗಿ ಆಯ್ಕೆಗೊಂಡ ಪುರಸಭೆಯ ಎಲ್ಲ ಚುನಾಯಿತ ಸದಸ್ಯರು ಈ ಮೆರವಣಿಗೆಯಲ್ಲಿ ಹಾಜರಿದ್ದರು. ರಾಜ್ಯೋತ್ಸವ ಮೆರಣಿಗೆಯು ಶಾಂತ ರೀತಿಯಿಂದ ಗಾಂಧಿ ಚೌಕದಿಂದ ಪಿ.ಬಿ.ರೋಡ್, ಪೋಷ್ಟ ಆಫೀಸ್,ಮಡ್ಡಿಗಲ್ಲಿ, ಯಿಂದ ಮರಳಿ ಗಾಂಧಿಚೌಕದಲ್ಲಿ ಬಂದು ಮುಕ್ತಾಯಗೊಳಿಸಲಾಯಿತು. ಮೆರವಣಿಗೆಯಲ್ಲಿ ಸುಮಾರು 2000 ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.
ಕನರ್ಾಟಕ ರಾಜ್ಯೋತ್ಸವವು ನವಂಬರ್ 1ನೇ ತಾರೀಖಿನಿಂದ ಪ್ರಾರಂಭಗೊಂಡಿತ್ತು. ಆ ದಿನ ಗಾಂಧಿಚೌಕದಲ್ಲಿ ಕನ್ನಡ ಧ್ವಜವನ್ನು ಅಪ್ಪಾಸಾಹೇಬ ಶಿರಕೋಳಿ ಇವರ ಹಸ್ತದಿಂದ ಧ್ವಜಾರೋಹನ ಕಾರ್ಯಕ್ರಮವು ನೇರವೇರಿತು. ಕುಂಬಾರಗಲ್ಲಿಯೂ ಕೂಡ ಕನ್ನಡದ ಧ್ವಜಾರೋಹನ ಕಾರ್ಯಕ್ರಮವು ನೆರವೇರಿತು. ಈ ಸಮಾರಂಭದಲ್ಲಿರಾಜೇಂದ್ರ ಪಾಟೀಲ, ಮಾಜಿ ನಗರಾಧ್ಯಕ್ಷರುಗಳಾದ ಶ್ರೀಕಾಂತ ಹತನೂರೆ, ಅಮರ ನಲವಡೆ, ಬಸವರಾಜ ಬಾಗಲಕೋಟಿ, ಬಸನಗೌಡಾ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.