ಭರತೇಶ ಮಹಾವಿದ್ಯಾಲಯದಲ್ಲಿ ಕನ್ನಡ ಹಬ್ಬ ಆಚರಣೆ

Kannada festival celebrated at Bharatesh Mahavidyalaya

ಬೆಳಗಾವಿ 14:ಇಲ್ಲಿಯ ಭರತೇಶ ಶಿಕ್ಷಣ ಸಂಸ್ಥೆಯ ಜೆ ಜಿ ಎನ್ ಡಿ ಭರತೇಶ ಪದವಿ ಮಹಾವಿದ್ಯಾಲಯದ ಕನ್ನಡ ಬಳಗದ ವಿದ್ಯಾರ್ಥಿಗಳೊಂದಿಗೆ ಏಪ್ರಿಲ್29-2025 ರಿಂದ ಮೇ 10-2025ರ ವರೆಗೆ ಕನ್ನಡೋತ್ಸವ ಕನ್ನಡ ಹಬ್ಬದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. 

ಲಿಮಗರಾಜ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಡಾ. ಬಸವರಾಜ ಜಗಜಂಪಿ ಅವರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು. ಜೈನ ಕವಿಗಳು, ವಚನಕಾರರು ಹಾಗೂ ಹೊಸಗನ್ನಡ ಕವಿಗಳು. ಕನ್ನಡ ಪರಂಪರೆಯನ್ನು ಸಾಹಿತ್ಯದ ಮೂಲಕ ಉಳಿಸಿಕೊಂಡು ಬಂದಿದ್ದಾರೆ.ಆದ್ದರಿಂದ ಬೇರೆ ಭಾಷೆಗಳ ವ್ಯಾಮೋಹದಿಂದ ಹೊರ ಬಂದು ಕನ್ನಡವನ್ನು ಹೆಬ್ಬಾಗಿಲಿನಂತೆ ಉಳಿಸಿಕೊಂಡು ಹೋಗುವಂತೆ ಹಳೆಯ ಸಂಸ್ಕೃತಿಗಳನ್ನು ಮೆಲುಕು ಹಾಕುತ್ತಾ ಹಾಸ್ಯ ದಾಟಿಯಲ್ಲಿ  ಕಿವಿ ಮಾತುಗಳನ್ನು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಭರತೇಶ ಶಿಕ್ಷಣ  ಸಂಸ್ಥೆಯ ಕಾರ್ಯದರ್ಶಿಗಳಾದ ವಿನೋದ ದೊಡ್ಡಣ್ಣವರ ಅವರು ಮಾತನಾಡಿ,  ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾತೃಭಾಷೆಯ ಮೂಲಕ ಉನ್ನತಿಯನ್ನು ಸಾಧಿಸಲು ಸಾಧ್ಯವೆಂದು ಹೇಳುತ್ತ ನಾಡಿನ ಶ್ರೀಮಂತ ಪರಂಪರೆಯನ್ನು ನೆನಪಿಸಿದರು. ಮಹಾವಿದ್ಯಾಲಯದ  ಆಡಳಿತ ಮಂಡಳಿಯ ಅಧ್ಯಕ್ಷರಾದ ಹಿರಾಚಂದ ಕಲಮನಿ   ಅವರು ಮಾತನಾಡಿ, ಕನ್ನಡ ಮಾತೃ ಭಾಷೆಚಿಾಗಿ ಕಲಿತವರು ಅಕ್ಕ ಪಕ್ಕದ ಬಹುಭಾಷಾ ಪಂಡಿತರಾಗಿರುತ್ತಾರೆಂದರು. ಈ ಸಮಯದಲ್ಲಿ ಜೆ ಜಿ ಎನ್ ಡಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ನೀತಾ ಗಂಗಾರೆಡ್ಡಿ ಇವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ’ಕನ್ನಡೋತ್ಸವದ’ ಆಯೋಜಕಿಯರಾದ ಶ್ರೀಮತಿ ಸುಪರ್ಣಾ ಲಗಮಣ್ಣವರ ಇವರು ಅತಿಥಿಗಳ ಪರಿಚಯ ಮಾಡಿದರು. ಬಾಲೇಷ ಮಣ್ಣಿಕೇರಿ ಹಾಗೂ ಬಿ.ಎ ಅಂತಿಮ ವಿದ್ಯಾರ್ಥಿ ವಿಶ್ವನಾಥ ವಿಜಾಪೂರ ಇವರುಗಳು ಕಾರ್ಯಕ್ರಮವನ್ನು ನಿರೂಪಿಸಿದರು. ಕಾಶಿನಾಥ ಶೃಂಗೇರಿಯವರು ’ಕನ್ನಡೋತ್ಸವದ’ ವರದಿ ವಾಚನ ನೀಡಿದರು. ನಾಗರಾಜ ಬಾಗೇವಾಡಿಇವರು ವಂದನಾರೆ​‍್ಣಯನ್ನು ನೆರವೇರಿಸಿದರು.