ಕನ್ನಡವೆಂದರೆ ಒಂದೇ ಜಾತಿ: ರವೀಂದ್ರ ಪಾಟೀಲ

ಲೋಕದರ್ಶನ ವರದಿ

ಗುಲರ್ಾಪೂರ ಂ4: ಕನ್ನಡ ನಾಡು ನುಡಿ ಕನ್ನಡವೆಂದರೆ ಒಂದೇ ಜಾತಿ, ಕನ್ನಡವೆಂದರೆ ಒಂದು ಧರ್ಮ, ಕನ್ನಡವೆಂದರೆ ಒಂದು ಸಂಸ್ಕೃತಿ, ಕನ್ನಡವೆಂದರೆ ಒಂದು ಜೀವನದ ವಿಧಾನ, ಕನ್ನಡವೆಂದರೆ ಕನರ್ಾಟಕ ಮಾತ್ರವಲ್ಲ ವಿಶ್ವದ ಮೂಲೆ ಮೂಲೆಯಲ್ಲಿ ಕನ್ನಡಿಗರು ಇರುವುದರಿಂದ ಕನ್ನಡಿಗರ ಕನ್ನಡ ಕಸ್ತೂರಿ ಪರಿಮಳ ಇಡಿ ವಿಶ್ವದಾದ್ಯಂತ ಪಸರಿಸುತ್ತಿರುವುದರಿಂದ ಕನ್ನಡ ವಿಶ್ವದಗಲ, ಮುಗಿಲಗಲ, ನೆಲದಗಲ ನಾವು ವೀರ ಕನ್ನಡಿಗರೆಂದು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾದ ರವೀಂದ್ರ ಪಾಟೀಲರವರು  

ಸ್ಥಳೀಯ ಮಲ್ಲಿಕಾಜರ್ುನ ರಂಗ ಮಂಟಪದಲ್ಲಿ ವೀರ ಕನ್ನಡಿಗರ ಬಳಿಗದವತಿಯಿಂದ ಹಮ್ಮಿಕೊಂಡ 63ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ನೀವು  ಎಲ್ಲೆ ಇರಲಿ ಹೇಗೆ ಇರಲಿ ನಿಮ್ಮ ತನು ಮನ ಕನ್ನಡವಾಗಿರಲಿ ಎಂದರು. 

ಸಾನಿಧ್ಯವಹಿಸಿ ಮಾತನಾಡಿದ ಹಳ್ಳೂರಿನ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು-ಜಾತಿ, ಪಂಥ, ಧರ್ಮ, ರಾಜಕೀಯವಿಲ್ಲದೇ ಆಚರಿಸುವ ಏಕೈಕ ಹಬ್ಬವೆಂದರೆ ಕನರ್ಾಟಕ ರಾಜ್ಯೋತ್ಸವ ಮಾತ್ರ ಕನ್ನಡ ನಾಡು-ನುಡಿಗಾಗಿ ಎಷ್ಟೋ ಮಹನೀಯರು ವೀರಸಾಧಕರು ಶ್ರಮಿಸಿದ್ದಾರೆ. ಅವರ ಸ್ಮರಣೆಯನ್ನು ಸ್ಮರಿಸುತ್ತಾ ಯುವಕರು ರಾಜಕೀಯಕ್ಕೆ ಬೆರೆಯದೇ ಕನ್ನಡಗೋಸ್ಕರ ತಮ್ಮ ತನು-ಮನ ಅಪರ್ಿಸಿ ಎಂದು ಹೇಳಿದರು. 

ಪ್ರಾರಂಭದಲ್ಲಿ ತಾಯಿ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಹಾಗೂ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮತ್ತು ರವೀಂದ್ರ ಪಾಟೀಲ ಇವರನ್ನು ವೀರ ಕನ್ನಡಿಗರ ಬಳಗದವರಿಂದ ಸನ್ಮಾನಿಸಲಾಯಿತು. 

ದಯಾನಂದ ಪಾದಗಟ್ಟಿ, ಎಸ್.ಡಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿ.ಸಿ. ಮುಗಳಖೋಡ, ಎಲ್.ಎನ್. ಮರಾಠೆ, ವ್ಹಿ.ಬಿ. ಮುಗಳಖೋಡ ಪಿ.ಎ. ನೇಮಗೌಡರ, ಎಲ್.ಪಿ. ನೇಮಗೌಡರ, ಡಿ.ಎಮ್. ಮುಗಳಖೋಡ, ಎ.ಡಿ. ಗಾಣಿಗೇರ, ಪ್ರಕಾಶ ಹಳ್ಳೂರ, ಶ್ರೀಶೈಲ ಗೊಲಭಾಂವಿ, ರವಿ ಶಾಬನ್ನವರ, ರಾಜು ಕುಲಗೋಡ,  ಪ್ರಕಾಶ ಮುಗಳಖೋಡ, ಶ್ರೀಶೈಲ ಮುಗಳಖೋಡ, ಲಕ್ಷ್ಮಣ ಗಾಣಿಗೇರ, ಸದಾಶಿವ ಗೌರಾಣಿ, ಲಕ್ಷ್ಮಣ ಗೌರಾಣಿ ಹಾಗೂ ವೀರ ಕನ್ನಡಿಗರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಶಿವಬಸು ಮಿಜರ್ಿ ಸ್ವಾಗತಿಸಿದರು, ಮಹಾದೇವ ಕುಲಗೋಡ ನಿರೂಪಿಸಿದರು, ಶಿವಾನಂದ ಹಳ್ಳೂರ ವಂದಿಸಿದರು.