ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ
ಬಾಗಲಕೋಟೆ 05: ಪ್ರತಿನಿತ್ಯದ ಕರ್ತವ್ಯದ ಕಾರ್ಯದೊತ್ತಡಗಳಿಂದ ಹೊರಬರಲು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಾಯಕ. ಈ ಕಾರಣದಿಂದ ಪ್ರತಿಯೊಬ್ಬ ಸರ್ಕಾರಿ ನೌಕರರು ಪ್ರತಿದಿನ ಕ್ರೀಡೆ, ಯೋಗ, ವ್ಯಾಯಮ, ಸಾಂಸ್ರ್ಕತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ರವರು ಕರೆ ನೀಡಿದರು.
ಜಿಲ್ಲಾ ಕ್ರೀಡಾಂಗಣ ಜರುಗುತ್ತಿರುವ 2024-25ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಪಿ. ಎಸ್. ಪೂಜಾರ ಮಾತನಾಡುತ್ತಾ ಶಾಸಕಾಂಗ, ನ್ಯಾಯಾಂಗದಷ್ಠೇ ಪ್ರಮುಖ ಅಂಗ ಕಾರ್ಯಾಂಗವಾಗಿದೆ. ಈ ದಿಶೆಯಲ್ಲಿ ಜಿಲ್ಲೆಯ ನೌಕರರ ಸಂಘದ ಕಾರ್ಯಚಟುವಟಿಕೆ ಹಾಗೂ ನೌಕರರ ಕಾರ್ಯಬದ್ಧತೆ ತೃಪ್ತಿತಂದಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯಾಧ್ಯಕ್ಷ
ಮಲ್ಲಿಕಾರ್ಜುನ ಬಿ. ಬಳ್ಳಾರಿ ಅವರು ಮಾತನಾಡುತ್ತಾ ತಮ್ಮ ಅಧ್ಯಕ್ಷತೆಯ 11 ವರ್ಷಗಳ ಅವಧಿಯ ಮೊದಲಲ್ಲಿ 100ರ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದ ನೌಕರರ ಕ್ರೀಡಾಪಟುಗಳ ಸಂಖ್ಯೆ ಇವತ್ತು 3000ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ನೌಕರರು ಭಾಗವಹಿಸುವ ಮುಖೇನ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಪಸರಿಸುತ್ತಿರುವುದು ಹರ್ಷತಂದಿದೆ ಎಂದು ತಿಳಿಸಿದರು. ಕ್ರೀಡಾ ನಿಯಮಗಳನ್ವಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಸಿ. ಡೂಗನವರ, ರಾಜ್ಯ ಉಪಾಧ್ಯಕ್ಷ ಎಸ್. ವ್ಹಿ. ಸತ್ಯರಡ್ಡಿ, ಕೋಶಾದ್ಯಕ್ಷ ಜಿ. ಎನ್. ನೀಲನಾಯ್ಕ, ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ವಿಠ್ಠಲ ಎಲ್. ವಾಲೀಕಾರ ಸ್ವಾಗತಿಸಿದರು. ಹಿರಿಯ ಉಪಾಧ್ಯಕ್ಷ ಎಸ್. ಎ. ಸಾರಂಗಮಠ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ರಂಗನಾಥ ಕ್ಯಾಲಕೊಂಡ ವಂದಿಸಿದರು.