ದಿಶಾ ಸಮಿತಿ ನಾಮ ನಿರ್ದೇಶಿತ ಸದಸ್ಯರಾಗಿ ಕಾಶೀರಾಯಗೌಡ ನೇಮಕ
ತಾಳಿಕೋಟಿ 09: ತಾಲೂಕಿನ ಪೀರಾಪೂರ ಗ್ರಾಮದವರಾದ ಕಾಶೀರಾಯಗೌಡ ಗುರನಗೌಡ ಬಿರಾದಾರ ಇವರನ್ನು ಜಿಲ್ಲಾ ದಿಶಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಮಂಗಳವಾರ ವಿಜಯಪುರ ನಗರದ ಲೋಕಸಭಾ ಸಂಸದರ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಇವರ ನೇಮಕದ ಆದೇಶವನ್ನು ಪ್ರಕಟಿಸಲಾಯಿತು.ಈ ಸಮಯದಲ್ಲಿ ಮುಖಂಡರಾದ ವಾಯ್,ವಾಯ್.ಹಿಪ್ಪರಗಿ, ಸಿದ್ದನಗೌಡ ಬಿರಾದಾರ (ಕಾರಗನೂರ), ಸುರೇಶ ಕುಮಾರ ಇಂಗಳಗೇರಿ (ಪೀರಾಪೂರ), ಮಡಿವಾಳಪ್ಪಗೌಡ ಬಿರಾದಾರ, ಶಿವನಗೌಡ ಪಾಟೀಲ (ಗೊಟಖಂಡಕಿ), ಬಸನಗೌಡ ಚಿಂಚೋಳಿ, ಅಯ್ಯಪ್ಪ ದೊಡ್ಡಮನಿ, ಸುಭಾಸ ನಡುವಿನಮನಿ (ಗುಂಡುಕನಾಳ) ಮತ್ತಿತರರು ಇದ್ದರು.