ಲೋಕದರ್ಶನ ವರದಿ
ಕೊಪ್ಪಳ 09: ಪವಿತ್ರ ರಮಜಾನ್ ಹಬ್ಬದ ಈದ್ ಮಿಲನ್ ಕಾರ್ಯಕ್ರಮ ಇದೇ ತಿಂಗಳ ಜೂನ್ ಕೊನೆಯ ವಾರದಲ್ಲಿ ಕೊಪ್ಪಳ ನಗರದಲ್ಲಿ ಈದ್ ಮಿಲನ್ ಪ್ರಯುಕ್ತ ಹಾಸ್ಯ ಕವಿಗೊಷ್ಠಿ (ಮಜಾಹಿಯ ಮುಷಾಯರಾ) ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ್ ಉರ್ದು ಅಕ್ಯಾಡಮಿ ಸದಸ್ಯ ಶಾಹಿದ್ ಖಾಜಿ ಹೇಳಿದರು.
ಅವರು ರವಿವಾರ ಕೊಪ್ಪಳಕ್ಕೆ ಭೇಟಿ ಮಾಡಿ, ನಗರದಲ್ಲಿ ಆರಂಭಗೊಳ್ಳಲಿರುವ ಬಸೇರಾ ಅನಾಥಾಶ್ರಮದ ಸಭಾಭವನದಲ್ಲಿ ಟ್ರಸ್ಟ್ ಪರವಾಗಿ ಎರ್ಪಡಿಸಿದ ಸನ್ಮಾನ ಸ್ವೀಕರಿಸಿದ ಬಳಿಕ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು ರಮಜಾನ್ ಹಬ್ಬದ ಈದ್ ಮಿಲನ್ ಕಾರ್ಯಕ್ರಮ ಆಯೋಜಿಸಿ ಎಲ್ಲರನ್ನು ಕಾರ್ಯಕ್ರಮದಲ್ಲಿ ಸೇರಿಸಿ ಸೌಹಾರ್ದಕೂಟ ಆಚರಿಸಿ ಇದರ ಅಂಗವಾಗಿ ಹಾಸ್ಯ ಕವಿಗೊಷ್ಠಿ ಕಾರ್ಯಕ್ರಮ ಎರ್ಪಡಿಸಲು ನಮ್ಮ ಅಕ್ಯಾಡಮಿಯ ಅಧ್ಯಕ್ಷರಲ್ಲಿ ಮನುವರಿಕೆ ಮಾಡಿ ಅವರಿಂದ ಶೀಘ್ರ ಅಧಿಕೃತ ದಿನಾಂಕ ಘೊಷಿಸಲಾಗುವುದು ಎಂದರು.
ಮುಂದುವರೆದು ಮಾತನಾಡಿದ ಅವರು ಬಡ-ಅನಾಥ ಮಕ್ಕಳಿಗಾಗಿ ಬಸೇರಾ ಅನಾಥಾಶ್ರಮ ಪ್ರಾರಂಭಿಸುವ ಕಾರ್ಯ ಅತ್ಯಂತ ಶ್ಲ್ಯಾಘನಿಯ ವಾಗಿದೆ. ಇದರಿಂದ ಬಡ-ನಿರ್ಗತಿಕ ಮಕ್ಕಳಿಗೆ ಅನುಕೂಲವಾಗಲಿದೆ ಅವರ ಭವಿಷ್ಯ ಉಜ್ವಲಗೊಳ್ಳಲು ಅವರಿಗೆ ಊಟ-ವಸತಿ ಜೋತೆಗೆ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವ ಕೆಲಸ ಮಾಡಿದಂತಾಗುತ್ತದೆ. ಈ ಸಂಸ್ಥೆಗೆ ಕನರ್ಾಟಕ ಉದರ್ು ಅಕ್ಯಾಡಮಿ ವತಿಯಿಂದ ಸಿಗಬಹುದಾದ ಸಹಾಯ ಸೌಕರ್ಯ ಮತ್ತು ಯೋಜನೆಗಳನ್ನು ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ. ಅಕ್ಯಾಡಮಿ ಅಧ್ಯಕ್ಷರ ಗಮನಕ್ಕೆ ತಂದು ಅವರ ನೆತೃತ್ವದಲ್ಲಿ ಅಕ್ಯಾಡಮಿ ಮತ್ತು ಅಲ್ಪಸಂಖ್ಯಾತರ ಇಲಾಖೆಯಿಂದ ಸಿಗಬಹುದಾದ ಸೌಕರ್ಯ ವದಗಿಸಲು ಪ್ರಯತ್ನಿಸುವದಾಗಿ ಕನರ್ಾಟಕ ಉದರ್ು ಅಕ್ಯಾಡಮಿ ಸದಸ್ಯ ಶಾಹಿದ್ ಖಾಜಿ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಉದರ್ು ಸಾಹಿತಿ ಕವಿ ನಿವೃತ್ತ ಪ್ರಾಧ್ಯಾಪಕ ಅನ್ವರ ಹುಸೇನರವರು ವಹಿಸಿದ್ದರು. ಹಿರಿಯ ಶಿಕ್ಷಕ ಸಯ್ಯದ್ ಗೌಸ್ಪಾಷಾ ಖಾಜಿ, ಹಿರಿಯ ಪತ್ರಕರ್ತ ಎಂ. ಸಾದಿಕ ಅಲಿ, ಬಸೇರಾ ಅನಾಥಾಶ್ರಮ ಸೇವಾ ಸಮಿತಿಯ ಅಧ್ಯಕ್ಷ ಎಂ.ಡಿ.ಯುಸುಫ್ ಖಾನ್, ಬಷೀರ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.