ಲೋಕದರ್ಶನ ವರದಿ
ಗೋಕಾಕ 19: ಕ್ರೀಡೆಗಳಿಂದ ಮಕ್ಕಳಲ್ಲಿ ಸತ್ಯ, ನಿಷ್ಠೆ, ಏಕಾಗ್ರತೆ ಹಾಗೂ ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ಬೆಳಗಾವಿಯ ನೆಹರು ಯುವ ಕೇಂದ್ರದ ಸಂಯೋಜಕ ಆರ್ ಆರ್ ಮುತಾಲಿಕದೇಸಾಯಿ ಹೇಳಿದರು.
ನಗರದ ಎನ್ಎಸ್ಎಫ್ ಶಾಲೆಯಲ್ಲಿ ಶನಿವಾರದಂದು ನೆಹರು ಯುವ ಕೇಂದ್ರ ಹಾಗೂ ಕನಕದಾಸ ಯುವಕ ಸಂಘ ಚಿಕ್ಕನಂದಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಖೋಖೋ, ಕಬಡ್ಡಿ, ವ್ಹಾಲಿಬಾಲ್ ಹಾಗೂ ವಿವಿಧ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕ್ರೀಡೆಗಳು ವಿದ್ಯಾರ್ಥಿಗಳ ಬದುಕಿನಲ್ಲಿ ಬಹುದೊಡ್ಡ ಬದಲಾವಣೆ ತರುವದರೊಂದಿಗೆ ಅವರನ್ನು ಸಾಧಕರನ್ನಾಗಿ ಮಾಡುತ್ತದೆ. ಇಂತಹ ಕ್ರೀಡಾಕೂಟಗಳಲ್ಲಿ ವಿದ್ಯಾಥರ್ಿಗಳು ಶಿಸ್ತು ಬದ್ಧರಾಗಿ ನಿರ್ನಾಯಕರ ನಿರ್ನಯಗಳನ್ನು ಗೌರವಿಸಿ ಉತ್ತಮ ಪ್ರದರ್ಶನ ನೀಡಿ ನಾಡಿಗೆ ಹೆಸರು ತರುವಂತೆ ಹಾರೈಸಿದರು. ಖೋಖೋ, ಕಬಡ್ಡಿ, ವ್ಹಾಲಿಬಾಲ್ ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ವಿವಿಧ ಶಾಲೆಗಳ ವಿದ್ಯಾರ್ಥಿಗಳ ತಂಡಗಳಿಗೆ ಡಾಲಗಳು ಮತ್ತು ಪ್ರಶಸ್ತಿ ಪ್ರಮಾಣ ಪತ್ರ ನೀಡಿದರು. ಕನಕದಾಸ ಯುವಕ ಸಂಘದ ಅಧ್ಯಕ್ಷ ಬಾಲಚಂದ್ರ ಬನವಿ, ಕಾರ್ಮಿಕ ನಿರೀಕ್ಷಕ ಪಿ ವಿ ಮಾವರಕರ, ಶಾಲೆಯ ಮುಖ್ಯೋಪಾಧ್ಯಾಯ ಎಮ್ ಎಚ್ ಮೇಟಿ, ಡಿ.ಡಿ.ಬೋಟೆ, ದೈಹಿಕ ಶಿಕ್ಷಕ ಎಮ್ ಎಲ್ ಪಾಗದ, ದುಂಡಯ್ಯ ಮೇಳ್ಳೆನ್ನವರ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.