ಮಹಿಳೆಯರಿಗೆ ಕಾನೂನು ಅರಿವು ಅತ್ಯಗತ್ಯ : ನ್ಯಾಯವಾದಿ ದಾನೇಶ ಅವಟಿ

Legal awareness is essential for women: Advocate Danesh Avati

ಮಹಿಳೆಯರಿಗೆ ಕಾನೂನು ಅರಿವು ಅತ್ಯಗತ್ಯ : ನ್ಯಾಯವಾದಿ ದಾನೇಶ ಅವಟಿ 

ವಿಜಯಪುರ,29 : ವರದಕ್ಷಿಣೆ ಕೌಟುಂಬಿಕ, ದೌರ್ಜನ್ಯ, ಬಾಲ್ಯವಿವಾಹ, ಲೈಂಗಿಕ ಕಿರು ಕುಳ ಮುಂತಾದ ತೊಂದರೆಗಳಿಂದ ಹೊರಬರಲು ಮಹಿಳೆಯರಿಗೆ ಶಿಕ್ಷಣದೊಂದಿಗೆ ಕಾನೂನಿನ ಅರಿವು ಅತ್ಯಗತ್ಯ ಎಂದು ನ್ಯಾಯವಾದಿ ದನೇಶ ಅವಟಿ ಹೇಳಿದರು.  

ಶಿಕಾರಖಾನೆಯ ಶ್ರೀ ವೆಂಕಟೇಶ್ವರ ದೇವಾಲಯ ಸಭಾಭವನದಲ್ಲಿ ದಿನಾಂಕ 28-01-2 025 ರಂದು ಮಂಗಳವಾರ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವಿಜಯಪುರ ಇವರು ಏರಿ​‍್ಡಸಿದ್ದ ಮಹಿಳಾ ಸಬಲೀಕರಣ ವಿಚಾರ ಗೋಷ್ಠಿಯನ್ನು  ಶ್ರೀ ಮಂಜುನಾಥೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ. ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಇಂದು ಶಿಕ್ಷಣ ಮತ್ತು ಸಂಸ್ಕಾರ ಹೊಂದಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಆದರೂ ಇನ್ನೂ ಸಾಕಷ್ಟು ಮಹಿಳೆಯರು ಅನಕ್ಷರತೆ ಅಜ್ಞಾನ, ಶೋಷಣೆ, ಕುಟುಂಬಿಕ ಸಾಮಾಜಿಕ ದೌರ್ಜನ್ಯಗಳಿಂದ ಹೊರಬಂದಿಲ್ಲ, ಕಾರಣ ಮಹಿಳೆಯರು ಸಂಘಟಿತರಾಗಿ ತಮಗಾಗುತ್ತಿರುವ ಅನ್ಯಾಯ ಶೋಷಣೆ, ದೌರ್ಜನ್ಯಗಳಿಂದ ಹೊರಬರಲು ಶಿಕ್ಷಣ, ಕಾನೂನು ಸಂಘ ಸಂಸ್ಥೆಗಳ, ಸಮಾಜಸೇವಕರ, ವಕೀಲರ ನೆರವು ಪಡೆದುಕೊಳ್ಳಬೇಕೆಂದರು. ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕರು ಸಮಾನವಾಗಿ ಗೌರವಯುತ ಜೀವನ ನಡೆಸುವ ಸಂವಿಧಾನ ಬದ್ಧ ಹಕ್ಕನ್ನು ಹೊಂದಿದ್ದು. ಅಂಜದೆ ಅಳುಕದೆ ಪೊಲೀಸ್ ಇಲಾಖೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಚಿತ ಕಾನೂನು ನೆರವು ಕೇಂದ್ರ ಸಂಪರ್ಕಿಸಿ ಅಗತ್ಯ ಸಹಾಯ ಸಹಕಾರ ಪಡೆದುಕೊಳ್ಳಲು ಕರೆ ನೀಡಿದರು. 

ಈ ಸಂದರ್ಭದಲ್ಲಿ ಸಂಘದ ಜ್ಞಾನ ವಿಕಾಸದ ಪಥದಲ್ಲಿ ಸಮನ್ವಯ ಅಧಿಕಾರಿ ಶ್ರೀಮತಿ ಗಂಗಾ ಅವರು ಮಾತನಾಡಿ, 2017-18 ನೇ ಸಾಲಿನಿಂದ ಸದರಿ ಯೋಜನೆಯನ್ನು ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಎಂಬ ಹೆಸರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಈ ಯೋಜನೆಯು 60:40 ಕೇಂದ್ರ: ರಾಜ್ಯ ಸರ್ಕಾರದ ಧನ ಸಹಾಯ ಯೋಜನಯಾಗಿದೆ. 0-6 ತಿಂಗಳವರೆಗೆ ಕೇವಲ ತಾಯಿ ಎದೆ ಹಾಲುಣಿಸುವುದು, ಹೆರಿಗೆಯಾದ ಒಂದು ಗಂಟೆಯೊಳಗೆ ಎದೆ ಹಾಲುಣಿಸುವುದು ಹಾಗೂ ಅತಿ ಸಣ್ಣಮಕ್ಕಳಿಗೆ ಉಣಿಸುವ ಅಭ್ಯಾಸಗಳನ್ನು (ಐವೈಸಿಎಫ್)ಬೆಳಸಿಕೊಳ್ಳುವ ಬಗ್ಗೆ ಮಹಿಳೆಯರನ್ನು ಪ್ರೋತ್ಸಾಹಿಸುವುದು ಹಾಗೂ ಗರ್ಭಿಣಿಯರಿಗೆ ಬಾಣಂತಿಯರಿಗೆ ಆರೋಗ್ಯ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಲು ನಗದು ರೂಪದಲ್ಲಿ ಪ್ರೋತ್ಸಾಹಧನ ನೀಡಲಾಗುವುದು ಎಂದರು. 

ಈ ಸಂದರ್ಭದಲ್ಲಿ ಬಸಮ್ಮ ಅಂಗಡಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು. ಸೇವಾ ಪ್ರತಿನಿಧಿ ಶ್ರಿದೇವಿ ಪರೀಟ, ಒಕ್ಕೂಟದ ಅಧ್ಯಕ್ಷರಾದ ಪುಷ್ಪಾ ನೆಗಿನಾಳ, ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷರಾದ ರೇಖಾ ಹಲಸಂಗಿ ಇನ್ನಿತರರು ಇದ್ದರು.