ಪ್ರತಿಯೊಬ್ಬರೂ ಕನ್ನಡ ನಾಡು, ನುಡಿ ಬೆಳಿಸೋಣ: ಬಸವರಾಜ ಖಾನಪ್ಪನವರ

Let's all cultivate Kannada language and culture: Basavaraja Khanappa

ಬೆಟಗೇರಿ, 24 :ಇಂದು ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯ ಉಳಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಕನ್ನಡ ನಾಡು ಕಟ್ಟೋಣ, ಕನ್ನಡ ಭಾಷೆ ಬೆಳೆಸೋಣ ಎಂದು ಕರ್ನಾಟಕ  ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.  

ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ  ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಸಹಯೋಗದಲ್ಲಿ ನಾನು ಕರವೇ ಕಾರ್ಯಕರ್ತ ಸದಸ್ಯತ್ವ ಅಭಿಯಾನ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಾನು ಕರವೇ ಕಾರ್ಯಕರ್ತ ಸದಸ್ಯತ್ವ ಅಭಿಯಾನದ ಕರಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋಕಾಕ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ಘಟಕದ ಕರವೇ ಸಂಘಟನೆ ಸ್ಥಾಪಿಸಿ, ಎಲ್ಲರೂ ಈ ಕರವೇ ಸಂಘಟನೆಗೆ ಸೇರಿ ಕನ್ನಡ ಪರ ಹೋರಾಟಗಾರರಾಗಿ ಕನ್ನಡ ನಾಡು, ನುಡಿ ಬೆಳಿಸೋಣ ಎಂದರು.      

 ಈ ವೇಳೆ ಕರ್ನಾಟಕ  ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಉಪಾಧ್ಯಕ್ಷ ದೀಪಕ ಹಂಜಿ, ಸಂಚಾಲಕ ಮಲ್ಲಪ್ಪ ಸಂಪಗಾಂವ, ಬೆಟಗೇರಿ ಗ್ರಾಮ ಘಟಕದ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ, ರಾಮಣ್ಣ ಮಾಳೇದ, ಈರ​‍್ಪ ಕನೋಜಿ, ನಾಗಪ್ಪ ಹಿಡಕಲ, ಕರ್ನಾಟಕ  ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಸದಸ್ಯರು, ಸ್ಥಳೀಯ ಕನ್ನಡ ಪರ ಅಭಿಮಾನಿ ಬಳಗದ ಸದಸ್ಯರು, ಗ್ರಾಮಸ್ಥರು ಇದ್ದರು.