ವಿಜಯಪುರ : ವಿಜಯಪುರ ನಗರದ ವಾರ್ಡ್ ನಂ 18 ಬೆಂಡಿಗೇರಿ ಓಣಿಯ ಮೂಲಭೂತ ಅಭಿವೃದ್ದಿಗಾಗಿ ನಗರದ ಖಾಸಗಿ ಮಧುವನ ಹೋಟೇಲನಲ್ಲಿ ನಿಶಾಂತ ಮಂಗಳವೇಡೆ ಹಾಗೂ ಸಂದೀಪ ಬಿಜ್ಜರಗಿ ಇವರ ನೇತೃತ್ವದಲ್ಲಿ ಸಭೆ ಹಮ್ಮಿಕೊಳ್ಳಲಾಯಿತು.
ಇದೇ ಸಂಧರ್ಭದಲ್ಲಿ ನಿಶಾಂತ ಹಾಗೂ ಸಂದೀಪ ಬಿಜ್ಜರಗಿ ಮಾತನಾಡಿ, ಬೆಂಡಿಗೇರಿ ಓಣಿಯಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ಒಳಚರಂಡಿ ಮುಂತಾದ ಸಮಸ್ಯೆ ಇದ್ದು, ಅದನ್ನೆಲ್ಲಾ ನಾವು ಅಧಿಕಾರಿಗಳ ಗಮನಕ್ಕೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ. ಹಾಗೂ ಕಾರ್ಮಿಕರಿಗಾಗಿ ಸರ್ಕಾರದಿಂದ ಯೋಜನೆಗಳು ಸದುಪಯೋಗ ಪಡೆದುಕೋಳ್ಳುವುದು ನಾವು ಮುಂದೆ ನಿಂತು ತಿಳಿಸುತ್ತವೆ. ಇನ್ನೀತ್ತರ ಯಾವುದೇ ಸಮಸ್ಯೆ ಉಂಟಾದರೆ ನಾವು ಮುಂದೆ ನುಂತು ನಿಮ್ಮ ಸಮಸ್ಯೆಗೆ ಧ್ವನಿಯಾಗುತ್ತೆವೆ.
ಹಾಗೂ ವಾರ್ಡ್ ನಂ. 18 ರ ಸಂಪೂರ್ಣ ಸಮಸ್ಯೆಗಾಗಿ ನಾವು ಹಗಲಿರುಳು ಶ್ರಮಿಸುತ್ತೇವೆ ಹಾಗೂ ನಾವು ಯಾವುದೇ ಪಕ್ಷಕ್ಕೇ ಜಾತಿಗೆ ಅಂಟಿಕೊಳ್ಳದೇ ಸರ್ವರೊಂದಿಗೆ ಬೆರತುಕೊಂಡು ಅಭಿವೃದ್ಧಿಯತ್ತ ನಾವೆಲ್ಲರೂ ದಾಪುಗಾಲಿಡೋಣ ವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಂಡಿಗೇರಿ ಓಣಿಯ ಸಮಸ್ತ ನಾಗರಿಕರು ಪಾಲ್ಗೊಂಡು ಅಭಿವೃದ್ಧಿಗಾಗಿ ನಿಂತ ಯುವಕರಿಗೆ ಅಭಿನಂಧಿಸಿದರು. ನಿಮ್ಮಿಬ್ಬರ ಸೇವೆ ಓಣಿಯಲ್ಲಿ ಸದಾ ಮುಂದೊರೆಯಲಿ ಎಂದು ಹುರಿದುಂಬಿಸಿದರು.
ಈ ಸಮಯದಲ್ಲಿ ಸಭೆಯಲ್ಲಿ ಪಾಲ್ಗೊಂಡ ಸಮಸ್ತ ಜನತೆಗೆ ತಿಳಿಸಿ ಸಸಿ ನೀಡಲಾಯಿತು.