ಕುಕನೂರ 30 : ಮನುಷ್ಯ ತನ್ನ ಬದುಕಿನಲ್ಲಿ ಕಾಯಕ ತತ್ವ ಅಳವಡಿಸಿಕೊಳ್ಳಬೇಕು, ಬಸವಣ್ಣನವರ ಕಾಯಕ ನಿಷ್ಠೆ ನಮ್ಮಲ್ಲರಿಗೂ ಪ್ರೇರಣೆ ಎಂದು ಪೂಜ್ಯ ಮಹಾದೇವ ಸ್ವಾಮೀಜಿ ಹೇಳಿದರು.
ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀಮಠ ಮತ್ತು ವೀರಶೈವ ಲಿಂಗಾಯತ ಮಹಾಸಭಾ ಕುಕನೂರ ಘಟಕ ವತಿಯಿಂದ ನಡೆದ ಬಸವ ಜಯಂತಿ, 200ನೇ ಶಿವಾನುಭವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡುತ್ತಾ ಬಸವಣ್ಣನವರು ಜಾತಿ ಮತ ಪಂಥ ಮೀರಿ ಬೆಳೆದವರು, ಅವರಲ್ಲಿಯ ಸಮಾನತೆ, ನೊಂದವರ ಬಿದ್ದವರ ಮೆಲಿದ್ದ ಕಾಳಜಿ ಅಪಾರ, ನಮ್ಮಲ್ಲಿ ಬಸವ ಚಿಂತನೆ ಪ್ರಾರಂಭವಾಗಬೇಕು ಅಂದಾಗ ಮಾತ್ರ ಸಮಾಜ ಸುಧಾರಣೆಯಾಗಲು ಸಾದ್ಯ ಎಂದರು. ವೀರಶೈವ ಮಹಾಸಭಾದ ವೀರಣ್ಣ ಅಣ್ಣಿಗೇರಿ ಮಾತನಾಡಿ ವೀರಶೈವ ಸಮಾಜದ ಎಲ್ಲಾ ಜಾತಿಗಳು ಒಂದಾಗಬೇಕು, ನಮ್ಮಲ್ಲಿ ತಾರತಮ್ಯ ಭಾವನೆ ಬರಬಾರದು ಲಿಂಗಾಯತರು ಒಗ್ಗಾಟ್ಟಾದ ಮಾತ್ರ ಈ ಧರ್ಮ ಉಳಿಯಲು ಸಾದ್ಯ ಎಂದರು. ವೀರಯ್ಯ ತೋಂಟದಾರ್ಯಮಠ ಮಾತನಾಡಿ ಬಸವ ಜಯಂತಿ ನಿಮಿತ್ಯ ಕಾಯಕಯೋಗಿಗಳ ಸನ್ಮಾ ಮಾಡಿದ್ದು ಸಂತೋಷ ತಂದಿದೆ, ಬಸವಣ್ಣ ಕಾಯಕ ಮಾಡುವವರ ಹೃದಯದಲ್ಲಿ ಸದಾಕಾಲವೂ ಇದ್ದಾನೆ ಬಸವ ಸ್ಮರಣೆಯಿಂದ ಬದುಕು ಪಾವನ ಎಂದರು. ಈ ಸಂದರ್ಭದಲ್ಲಿ ಪಿ ಯು ಸಿ ವಿದ್ಯಾರ್ಥಿಗಳ ಪ್ರತಿಭ ಪುರಸ್ಕಾರ, ಕಾಯಕಯೋಗಿಗಳಿಗೆ ಸನ್ಮಾನವನ್ನ ವೀರಶೈವ ಮಹಾಸಭಾದ ಜಿಲ್ಲ ಸದಸ್ಯರಾದ ಎಮ್ ಸಿ ಹಿರೇಮಠ ಹಾಗೂ ಸಂಗಮೇಶ ಕಲ್ಮಠ ನಡೆಸಿಕೊಟ್ಟರು.
ಗದಿಗೆಪ್ಪ ಪವಾಡಶೆಟ್ಟಿ, ಬಸವನಗೌಡ ಮಾಲಿಪಾಟೀಲ, ಬಸಪ್ಪ ದಿವಟರ, ಈರ್ಪ ಮ್ಯಾಳಿ, ದೊಡ್ಡಪ್ಪ ಬಾವಿಕಟ್ಟಿ, ಜಂಬಣ್ಣ ಅಂಗಡಿ, ಲಕ್ಷ್ಮಣ ಕಾಳಿ, ಮಹಾದೇವಪ್ಪ ಮಡಿವಾಳರ, ಕವಿತಾ ಶಿರೋಳ, ಲಲಿತಾ ಶಿಳ್ಳಿನ, ರೆಣಮ್ಮ, ಪ್ರಭು ಶಿವಸಿಂಪರ, ರಾಮನಗೌಡ ಹುಚನೂರ ಮತ್ತು ಇತರರು ಇದ್ದರು.