ಗ್ರಂಥಾಲಯಗಳು ಗುಣಮಟ್ಟದ ಸೇವೆ ನೀಡಲಿ: ಗದ್ದಗಿಮಠ

ಧಾರವಾಡ 03 ಗ್ರಂಥಾಲಯದಲ್ಲಿ ವಿಶೇಷವಾದ ಸೇವೆಗಳನ್ನು ನೀಡಲು ಗ್ರಂಥಪಾಲಕರು ಶ್ರಮಿಸಬೇಕು. ಅಂತರಜಾಲದಲ್ಲಿ ಸಿಗುತ್ತಿರುವ ಹೊಸ ಅವಿಷ್ಕಾರಗಳ ಉಚಿತವಾಗಿ ಲಭ್ಯವಿರುವ  ಪರಾಮರ್ಶನ ಎಲೆಕ್ಟ್ರಾನಿಕ ಸಂಪನ್ಮೂಲಗಳನ್ನು ಕ್ರೂಢೀಕರಿಸಿ ಅವುಗಳನ್ನು ಓದುಗರಿಗೆ /ವಿದ್ಯಾಥರ್ಿಗಳಿಗೆ ತಲುಪುವಂತೆ ಮಾಡುವ ಜವಾಬ್ದಾರಿ ಗ್ರಂಥಪಾಲಕರದ್ದಾಗಿದೆ ಎಂದು ಡಾ. ರವಿ ಗದ್ದಗಿಮಠ ಆಚಾರ್ಯ ಇನಸ್ಟಿಟ್ಯೂಟ ಬೆಂಗಳೂರು ಅವರು ಉನ್ನತ ಶಿಕ್ಷಣ ಅಕಾಡೆಮಿಯಲ್ಲಿ ನಡೆದ ಮೂರು ದಿನಗಳ ಗ್ರಂಥಪಾಲಕರ ತರಬೇತಿ ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಗ್ರಂಥಪಾಲಕರಿಗೆ ಸಲಹೆ ನೀಡಿದರು. 

ಕಾಲೇಜುಗಳಲ್ಲಿ ಸವಾಲುಗಳು ಸಾಕಷ್ಟಿರುತ್ತವೆ. ಅವುಗಳನ್ನು ಎದುರಿಸಿ ಉಪನ್ಯಾಸಕರಿಗೆ ಹಾಗೂ ವಿದ್ಯಾಥರ್ಿಗಳಿಗೆ ಗ್ರಂಥಾಲಯಲ್ಲಿರುವ ಓದುವ ಪುಸ್ತಕ ಹಾಗೂ ಎಲ್ಲ ರೀತಿಯ ಸಾಮಾಗ್ರಿಗಳನ್ನು ನೀಡುವ ಸೇವೆಯನ್ನು ಮಾಡಿದ್ದಲ್ಲಿ ಗ್ರಂಥಾಲಯಗಳು ಮಹತ್ವವನ್ನು ಪಡೆಯಲಿವೆ.

ಬದಲಾವಣೆಗೆ ಗ್ರಂಥಪಾಲಕರು ತಯಾರಾದಲ್ಲಿ ಉತ್ತಮವಾದ ಫಲಿತಾಂಶ ನೀರಿಕ್ಷೀಸಬಹುದು ಆದಾಗ ಮಾತ್ರ ಗ್ರಂಥಾಲಯಗಳು ಶೈಕ್ಷಣಿಕ ಕೇಂದ್ರ ಬಿಂದುಗಳಾಗಲು ಸಾದ್ಯ. ಗ್ರಂಥಪಾಲಕರ ಪ್ರಯತ್ನದಿಂದ ಸಾಧ್ಯ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉನ್ನತ ಶಿಕ್ಷಣ ಅಕಾಡೆಮಿಯ ನಿದರ್ೇಶಕರಾದ ಪ್ರೊ.ಎಸ್.ಎಮ್.ಶಿವಪ್ರಸಾದ ಹೇಳಿದರು. ಗ್ರಂಥಾಲಯದ ಬದಲಾವಣೆಯಿಂದ ಕಾಲೇಜುಗಳಲ್ಲಿ ಉಪನ್ಯಾಸಕರಿಗೆ ಹಾಗೂ ವಿದ್ಯಾಥರ್ಿಗಳಿಗೆ ಉತ್ತಮವಾದ ಸೇವೆಗಳನ್ನು ನೀಡಲಾಗುವುದು ಮತ್ತು ಶೈಕ್ಷಣಿಕವಾಗಿ ವಿದ್ಯಾಥರ್ಿಗಳು ಪ್ರಗತಿಯತ್ತ ಸಾಗಲು ಸಾಧ್ಯವಾಗುವುದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಅಕಾಡೆಮಿಯ ಡೀನರಾದ ಡಾ ಅರುಂಧತಿ ಕುಲಕಣರ್ಿ ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು, ಡಾ. ಡಾ.ಆಯ್.ಬಿ.ಸಾತೀಹಾಳ ಕಾರ್ಯಕ್ರಮವನ್ನು ನಿರೂಪಿಸಿದರು. ಗ್ರಂಥಪಾಲಕರು ಹಾಗೂ ತರಬೇತಿಯ ಸಂಚಾಲಕರಾದ ಡಾ.ಮಲ್ಲಿಕಾಜರ್ುನ ಮೂಲಿಮನಿ ವಂದಿಸಿದರು, ಡೀನರಾದ ಡಾ ಎ.ಆರ್. ಜಗತಾಪ ಮತ್ತು ಅಕಾಡೆಮಿಯ ಸಿಬ್ಬಂದಿಯವರು ಹಾಜರಿದ್ದರು.