ದೇವೇಂದ್ರ ಹೆಳವರ
ವಿಜಯಪುರ 22: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಶಾಸಕ ಎಂ.ಬಿ.ಪಾಟಿಲರಿಗೆ ಸಚಿವ ಸ್ಥಾನ ದೊರೆತಿರುವುದರಿಂದ ಜಿಲ್ಲೆಯ ಜನತೆ ಹರ್ಷಗೊಂಡಿದ್ದಾರೆ.
ಶನಿವಾರ ಸಂಜೆ ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಎಂ.ಬಿ.ಪಾಟೀಲರು ಸಂಪುಟ ದಜರ್ೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸಂಪುಟದಲ್ಲಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ದೊರೆತಮತಾಗಿದೆ. ಇದರೊಂದಿಗೆ ವಿಜಯಪುರ ಜಿಲ್ಲೆಗೆ ಮೂವರು ಸಚಿವರ ಭಾಗ್ಯ ದೊರೆತಿದೆ. ಸಮ್ಮಿಶ್ರ ಸರಕಾರದಲ್ಲಿ ಜಿಲ್ಲೆಯ ಬಸವನ ಬಾಗೇವಾಡಿ ಕ್ಷೇತ್ರವನ್ನು ಪ್ರತಿನಿಧಿಸುವ ಶಿವಾನಂದ ಪಾಟೀಲ, ಸಿಂದಗಿ ಮತಕ್ಷೇತ್ರವನ್ನು ಪ್ರತಿನಿಧಿಸುವ ಎಂ.ಸಿ. ಮನಗೂಳಿ ಅವರು ಕ್ಯಾಬಿನೆಟ್ ಸಚಿವರಾಗಿದ್ದು, ಈಗ ಬಬಲೇಶ್ವರ ಕ್ಷೇತ್ರವನ್ನು ಪ್ರತಿನಿಧಿಸುವ ಎಂ.ಬಿ. ಪಾಟೀಲ ಸಹ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದು, ಎರಡನೇ ಬಾರಿ ಅವರು ಸಚಿವರಾಗಿದ್ದಾರೆ.
ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕೆರೆ ತುಂಬುವ ಯೋಜನೆ ಸೇರಿದಂತೆ ಹಲವಾರು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅವುಗಳನ್ನು ಒಂದು ನಿಣರ್ಾಯಕ ಹಂತಕ್ಕೆ ತಂದಿದ್ದ ಎಂ.ಬಿ.ಪಾಟಿಲರಿಗೆ ಸಮ್ಮಿಶ್ರ ಸಕರ್ಾರ ರಚನೆಯ ಸಂದರ್ಭದಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಸಚಿವ ಸ್ಥಾನ ಕೈ ತಪ್ಪಿ ಹೋಗಿತ್ತು. ಆರು ತಿಂಗಳ ಬಳಿಕ ಈಗ ಮತ್ತೆ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದ್ದರಿಂದ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ತುಂಬಾ ಹರ್ಷಗೊಂಡಿದ್ದಾರೆ.
ಎಂ.ಬಿ.ಪಾಟೀಲರು ಶನಿವಾರ ಅತ್ತ ಬೆಂಗಳೂರಿನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವಕರಿಸುತ್ತಿದ್ದಂತೆ ಇತ್ತ ವಿಜಯಪುರದಲ್ಲಿ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾರಿ ಪಟಾಕ್ಷಿ ಸಿಡಿಸಿ ಸಂಭ್ರಮಿಸಿದರು. ಶಿಕ್ಷಣ ಪ್ರೇಮಿಯಾದ ಎಂ.ಬಿ.ಪಾಟೀಲರು ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ. ಕಳೆದ 27 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಎಂ.ಬಿ.ಪಾಟೀಲರು 25 ವರ್ಷಗಳ ಹಿಂದೆ 1990 ರಲ್ಲಿ ಅವರ ತಂದೆಯವರಾದ ಮಾಜಿ ಸಚಿವ ದಿ.ಬಿ.ಎಂ.ಪಾಟೀಲರ ನಿಧನಾನಂತರ ನಡೆದ ಉಪಚುನಾವಣೆಯಲ್ಲಿ ತಮ್ಮ 27ನೇ ವಯಸ್ಸಿನಲ್ಲಿಯೇ ಆಗಿನ ತಿಕೋಟಾ ಕ್ಷೇತ್ರದಿಂದ ವಿಧಾನಸಭೆ ಆಯ್ಕೆಯಾದರು. 1998ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ನಂತರ 2004 ರಲ್ಲಿ ಮತ್ತೆ ತಿಕೋಟಾ ಮತಕ್ಷೇತ್ರದಿಂದ ಆಯ್ಕಲೆಯದರು. ಕ್ಷೇತ್ರ ಪುನವರ್ಿಂಗಡೆಣೆಯ ಬಳಿಕ 2008, 2013 ಹಾಗೂ 2018 ರಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 30 ಸಾವಿರ ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿ ಜಿಲ್ಲೆಯಲ್ಲಿ ಹೊಸ ದಾಖಲೆ ಮಾಡಿದ್ದಾರೆ.