ಮಹಾತ್ಮಾಫುಲೆ ಉದ್ಯಾನ್ ಅಭಿವೃದ್ಧಿ ಕಾಮಗಾರಿ ಪ್ರಾರಂಭ ಕುರಿತು ಶಾಸಕ ಅಭಯ ಚಚರ್ೆ

ಲೋಕದರ್ಶನ ವರದಿ

ಬೆಳಗಾವಿ, 31: ಇಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಹಾತ್ಮಾಫುಲೆ ಉದ್ಯಾಣದ ಅಭಿವೃದ್ಧಿ ಮಾಡುವ ಉದ್ದೇಶದಿಂದ ಮಹಾತ್ಮಾ ಫುಲೆ ಭಾಗದಲ್ಲಿ ಹಿರಿಯ ನಾಗಕರಿಕರೊಂದಿಗೆ ಶಾಸಕ ಅಭಯ ಪಾಟೀಲ ಇವರು ಚಚರ್ೆ ನಡೆಸಿ, ಮಾರ್ಚ ತಿಂಗಳನಿಂದ ಉದ್ಯಾನದ ಅಭಿವೃದ್ಧಿ ಕಾಮಗಾರಿ ಪ್ರಾರಂಭ ಮಾಡುವುದಾಗಿ ಶಾಸಕ ಅಭಯ ಪಾಟೀಲ ಭರವಸೆ ನೀಡದರು.

ಸೋಮವಾರ ಬೆಳಿಗ್ಗೆ ಮಹಾತ್ಮಾ ಫುಲೆ ಉದ್ಯಾನದಲ್ಲಿ ಶಾಸಕರು ಮತ್ತು ಆ ಭಾಗದ ನಾಗರಿಕರು ಸೇರಿ ಒಟ್ಟಾಗಿ ಸಭೆ ನಡೆಸಲಾಗಿ ಉದ್ಯಾನದಲ್ಲಿ ವಾಕಿಂಗ್ ಟ್ರ್ಯಾಕ್, ನೀರಿನ ವ್ಯವಸ್ಥೆ, ಶೌಚಾಲಯ, ಬೆಂಚಗಳನ್ನು ಅಳವಡಿಸುವುದು ಸೇರಿದಂತೆ ಉದ್ಯಾನದ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಅಳವಡಿಸುವ ಕುರಿತು ಚಚರ್ೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲ ಅವರು ಈ ಉದ್ಯಾನದ ಅಭಿವೃದ್ಧಿ ಪಡಿಸಲಾಗುವುದೆಂದು ಹೇಳಿದರು. ಅಲ್ಲದೇ ಸುಮಾರು ವರ್ಷಗಳಿಂದ ಅಭಿವೃದ್ಧಿ ವಂಚಿತವಾಗಿದ್ದ ಕಚೇರಿ ಗಲ್ಲಿ, ಮೀರಾಪೂರ ಗಲ್ಲಿ, ಹುಲಭತ್ತಿ ಕಾಲೋನಿ ರಸ್ತೆ ಈ ಭಾಗದಲ್ಲಿ ರಸ್ತೆಗಳನ್ನು ಡಾಂಬರೀಕರಣ ಕಾಮಗಾರಿ ಆರಂಬ ಮಾಡಲಾಗಿದ್ದು, ಇಲ್ಲಿ ಉತ್ತಮ ಹಾಗು ಗುಣಮಟ್ಟದ ರ್ಸತೆ ನಿಮರ್ಿಸಲಾಗುತ್ತಸೆ ಎಂದು ಅವರು ತಿಳಿಸಿದರು.

ಇಂದಿನ ಈ ಸಭೆಯಲ್ಲಿ ಶಹಾಪೂರ, ಮಹತ್ಮಾಫುಲೆ, ಕಚೇರಿ ಗಲ್ಲಿ, ಮೀರಾಪೂರ ಗಲ್ಲಿ ಹಾಗೂ ಹುಲಭತ್ತಿ ಕಾಲೋನಿಯಲ್ಲಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.