ಅಥಣಿ 11: ದಿನೆ ದಿನೇ ಬೇಸಿಗೆ ಬಿಸಿಲಿನ ತಾಪ ಹೆಚ್ಚು ಆಗುತ್ತದೆ ರಸ್ತೆ ಬದಿಯಲ್ಲಿ ದಿನ ನಿತ್ಯ ಬಿಸಿಲಿನಲ್ಲಿ ದುಡಿಯುತ್ತಿರುವ ಬಡ ಜನರ ಕಷ್ಟವನ್ನು ನೋಡಿದ ಶಾಸಕ ಲಕ್ಷ್ಮಣ ಸವದಿ ಅವರು, ನನ್ನ ಜನರಿಗೆ ಯಾವುದೇ ಕಾರಣಕ್ಕೂ ಬಿಸಿಲಿನಲ್ಲಿ ಕಷ್ಟ ಆಗಬಾರದು ಎಂದು ಮನ ಗೊಡು ಲಕ್ಷ್ಮಣ ಸವದಿ ಫೌಂಡೇಶನ್ ವತಿಯಿಂದ ಪಟ್ಟಣದ ಬೀದಿ ಬದಿಯಲ್ಲಿ ಕುಳಿತು ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಸ್ಥರಿಗೆ ಮಳೆ ಹಾಗೂ ಸುಡು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಲಕ್ಷ್ಮಣ ಸವದಿ ಅಭಿಮಾನಿಗಳು ಉತ್ತಮ ಗುಣ ಮಟ್ಟದ ಕೊಡೆಗಳನ್ನು ವಿತರಿಸಿದರು.
ಈ ವೇಳೆ ಬೀದಿ ಬದಿ ವ್ಯಾಪಾರಸ್ಥೆ ಮಾತನಾಡಿ ಇವತ್ತು ನಮ್ಮ ಬೀದಿಬದಿ ವ್ಯಾಪಾರಸ್ಥರಿಗೆ ಹಬ್ಬದಂತಾಗಿದೆ ಏಕೆಂದರೆ ಇಷ್ಟು ದಿನ ಯಾರು ಕೂಡ ಬೀದಿ ಬದಿ ವ್ಯಾಪಾರಸ್ಥರಿಗೆ ಸರಿಯಾಗಿ ಮಾತನಾಡಿ ಸುತ್ತಿರಲಿಲ್ಲ ಆದರೆ ಇವತ್ತು ನಮ್ಮ ಹೆಮ್ಮೆಯ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ಯುವ ನಾಯಕ ಚಿದಾನಂದ ಸವದಿ ಅವರು ಬೀದಿ ಬದಿ ವ್ಯಾಪಾರಸ್ಥರ ಪರಿಸ್ಥಿತಿಯನ್ನು ಅರಿತು ಬೇಸಿಗೆ ಬೇಗೆಯಿಂದ ರಕ್ಷಿಸಿ ಕೊಳ್ಳಲು ಕೋಡೆಗಳನ್ನು ನೀಡುವ ಮೂಲಕ ಬೀದಿಬದಿ ವ್ಯಾಪಾರಸ್ಥರಿಗೆ ನೆರಳನ್ನು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ಧುರೀಣರಾದ ಶಿವರುದ್ರ ಘೂಳಪ್ಪನವರ, ರಾಮ ಧರಿಗೌಡ, ವೆಂಕಟೇಶ ದೇಶಪಾಂಡೆ, ರಾಜು ಢಾಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.