ಮೃತ ಬಾಲಕಿಯ ಮನೆಗೆ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಭೇಟಿ

MLC Channaraja Hattiholi visits the house of the deceased girl

ಮೃತ ಬಾಲಕಿಯ ಮನೆಗೆ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಭೇಟಿ

ಬೆಳಗಾವಿ 24: ಸಿಡಿಲು ಬಡಿತದಿಂದ ಬುಧವಾರ ಮೃತಪಟ್ಟಿರುವ  ಖನಗಾಂವ ಬಿಕೆ ಗ್ರಾಮದ ಬಾಲಕಿ ಅಕ್ಸಾ ಜಮಾದಾರ ಮನೆಗೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬುಧವಾರ ಭೇಟಿ ನೀಡಿದರು.ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಚನ್ನರಾಜ,  ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಸ್ವಲ್ಪಮಟ್ಟಿಗೆ ಆರ್ಥಿಕ ಸಹಾಯ ಮಾಡಿದರು. ಜೊತೆಗೆ ಸರ್ಕಾರದಿಂದ ಸಿಗುವ ಪರಿಹಾರ ದೊರಕಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದು, ಶೀಘ್ರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.