9ರಂದು ಮಹಾರಾಣಾ ಪ್ರತಾಪ್ ಸಿಂಹರ ಮೂರ್ತಿ ಪ್ರತಿಷ್ಠಾಪನೆ

Maharana Pratap Singh statue to be installed on 9th

9ರಂದು ಮಹಾರಾಣಾ ಪ್ರತಾಪ್ ಸಿಂಹರ ಮೂರ್ತಿ ಪ್ರತಿಷ್ಠಾಪನೆ 

 ತಾಳಿಕೋಟಿ 04: ಪಟ್ಟಣದಲ್ಲಿ ರಜಪೂತ ಸಮಾಜದ ವತಿಯಿಂದ ಮೇ 9ರಂದು ಮಹಾರಾಣಾ ಪ್ರತಾಪ ಸಿಂಹರ ಭವ್ಯ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು ಪಟ್ಟಣದ ಸರ್ವ ಸಮಾಜದ ಬಾಂಧವರು ಭಾಗವಹಿಸಿ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಮುಖಂಡ ವಿಜಯಸಿಂಗ್ ಹಜೇರಿ ಮನವಿ ಮಾಡಿಕೊಂಡರು.  

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾಜದ ವತಿಯಿಂದ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಸುಮಾರು 25 ಲಕ್ಷ ವೆಚ್ಚದಲ್ಲಿ ರಾಜಸ್ಥಾನದ ಜೈಪುರದಲ್ಲಿ ನಿರ್ಮಾಣಗೊಂಡಿರುವ ಮಹಾರಾಣಾ ಪ್ರತಾಪರ ಭವ್ಯ ಮೂರ್ತಿ ಮೇ 8ರಂದು ಬಳಗಾನೂರ ಗ್ರಾಮದಿಂದ ಚೈತನ್ಯ ಸ್ನೇಹಿತರ ಬಳಗದವರ ಬೈಕ್ ರ್ಯಾಲಿ ಮೂಲಕ ಪಟ್ಟಣಕ್ಕೆ ಆಗಮಿಸಲಿದ್ದು ಮೇ 9ರಂದು ಮುಂಜಾನೆ 9 ಗಂಟೆಗೆ ರಜಪೂತ ಬಡಾವಣೆಯಲ್ಲಿರುವ ಅಂಬಾ ಭವಾನಿ ಮಂದಿರದಿಂದ ಆರಂಭವಾಗುವ ಮೂರ್ತಿಯ ಭವ್ಯ ಮೆರವಣಿಗೆಗೆ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು, ಗುಂಡಕನಾಳದ ಗುರುಲಿಂಗ ಶಿವಾಚಾರ್ಯ ಹಾಗೂ ಕೆಸರಟ್ಟಿಯ ಸೋಮಲಿಂಗ ಮಹಾಸ್ವಾಮಿಗಳು ಚಾಲನೆ ನೀಡಲಿದ್ದು ಸರ್ವ ಸಮಾಜದ ಬಾಂಧವರು ಉಪಸ್ಥಿತರಿರುವರು, ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಹಾದು ಮಹಾರಾಣಾ ಪ್ರತಾಪ್ ಸಿಂಹ ವೃತ್ತಕ್ಕೆ ತಲುಪಿ ಅಲ್ಲಿ ಮೂರ್ತಿಯ ಪ್ರತಿಷ್ಠಾಪನೆ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಜರಗುವುದು ಎಂದರು.  

ಮುಖಂಡರಾದ ಸುರೇಶ ಹಜೇರಿ ಹಾಗೂ ಜೈಸಿಂಗ್ ಮೂಲಿಮನಿ ಮಾತನಾಡಿ ಮೇ 9ರಂದು ನಡೆಯುವ ಈ ಕಾರ್ಯಕ್ರಮದ ಆಮಂತ್ರಣವನ್ನು ಪಟ್ಟಣದ ಎಲ್ಲ ಸಮಾಜದ ಮುಖ್ಯಸ್ಥರಿಗೆ ನೀಡಲಾಗುತ್ತಿದೆ, ಈ ಕಾರ್ಯಕ್ರಮದಲ್ಲಿ ರಾಮನವಮಿ ಉತ್ಸವ ಸಮಿತಿಯವರು ಕುಡಿಯುವ ನೀರಿನ ವ್ಯವಸ್ಥೆ, ಚೇತನ್ಯ ಬಳಗದವರು ತಂಪು ಪಾನೀಯದ ವ್ಯವಸ್ಥೆ, ರತನಸಿಂಗ್ ಕೊಕಟನೂರ ಹಾಗೂ ದೀಲೀಪಸಿಂಗ್ ಹಜೇರಿ ವತಿಯಿಂದ ಉಪಹಾರದ ವ್ಯವಸ್ಥೆ ಹಾಗೂ ಸಂಜೀವಕುಮಾರ ಹಜೇರಿ ಇವರಿಂದ ಅಲ್ಪೋಪಹಾರದ ವ್ಯವಸ್ಥೆ ಇರುವುದು ಎಂದರು.  

ಪತ್ರಿಕಾಗೋಷ್ಠಿಯಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಪ್ರಕಾಶ ಹಜೇರಿ, ಮಾನಸಿಂಗ್ ಕೊಕಟನೂರ, ಬಾಬು ಹಜೇರಿ, ರಘುರಾಮಸಿಂಗ್ ಸೇಟ, ಸಿರಸಕುಮಾರ ಹಜೇರಿ, ಸಂತೋಷ್ ಹಜೇರಿ, ಪ್ರಹ್ಲಾದ್ ಹಜೇರಿ, ಸಂಜೀವ್ ಹಜೇರಿ, ದೀಲೀಪ ಸಿಂಗ್ ಹಜೇರಿ, ಸುದೀರ ತಿವಾರಿ, ಗೋವಿಂದಸಿಂಗ್ ಹಜೇರಿ, ಗಂಗಾರಾಮ ಸಿಂಗ್, ವಿಜಾಪುರ, ಸುನೀತ್ ವಿಜಾಪುರ, ಸೂರಜ್ ಹಜೇರಿ, ಸಂದೀಪ ಬನಸಿ, ವಿಠಲ್ ಬೆಕಿನಾಳ, ರಮೇಶ ಗೌಡಗೇರಿ, ಕೇಸರಸಿಂಗ್ ದೇವಿ, ರಾಹುಲ್ ಮೂಲಿಮನಿ, ಕುಂದನ್ ವಿಜಾಪುರ, ನಾಗೂ ದೇವಿ ಇದ್ದರು.