ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವುದಕ್ಕೆ ಮಹಾರಾಷ್ಟ್ರ ವಿರೋಧ

Maharashtra opposes raising the height of Almatti reservoir

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವುದಕ್ಕೆ ಮಹಾರಾಷ್ಟ್ರ ವಿರೋಧ 

ಮಾಂಜರಿ 25: ಉತ್ತರ ಕರ್ನಾಟಕ ಜೀವನಾಡಿ ಕೃಷ್ಣಗೆ ನೆರೆ ರಾಜ್ಯ ಮಹಾರಾಷ್ಟ್ರದಿಂದ ಯಾವಾಗಲೂ ಕಿರಿಕ್ ಇದ್ದಿದೆ. ಆಲಮಟ್ಟಿ ಜಲಾಶಯದಿಂದ ನೆರೆಯ ಕೊಲ್ಲಾಪುರ, ಸಾಂಗ್ಲಿ ವ್ಯಾಪ್ತಿಯಲ್ಲಿ ಪ್ರವಾಹ ಎದುರಾಗುತ್ತದೆ ಎಂದು ಜಲಾಶಯ ಎತ್ತರಕ್ಕೆ ಮಹಾರಾಷ್ಟ್ರ ವಿರೋಧ ವ್ಯಕ್ತಪಡಿಸುತ್ತಿದೆ. ಬೆಳಗಾವಿ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಯ ರೈತರು ಆಲಮಟ್ಟಿ ಜಲಾಶಯದ ಎತ್ತರ ಎರಿಸುವ ಒತ್ತಾಯ ಮಾಡ್ತಿದ್ದಾರೆ. ಇದೀಗ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರುಗಳು ಸಹ ಜಿಲ್ಲೆಯ ರೈತರ ಹಿತಾಸಕ್ತಿ ಕಾಯಲು ಬದ್ಧ ಎನ್ನುವ ಮೂಲಕ ರೈತರ ಕಣ್ಣಂಗಳಲ್ಲಿ ಆಶಯ ಮೂಡಿದೆ. 

ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಬೆಳಗಾವಿ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಯ ರೈತರು ಸರ್ವಸ್ವವನ್ನೂ ಧಾರೆ ಎರೆದಿದ್ದಾರೆ. ಆಲಮಟ್ಟಿ ಆಣೆಕಟ್ಟುಯಿಂದ ತಮ್ಮ ಬದುಕು ಬಂಗಾರವಾಗುತ್ತದೆ ಎಂದು ಭಾವಿಸಿದ್ದ ರೈತರಿಗೆ ಮಹಾರಾಷ್ಟ್ರ ಸರ್ಕಾರ ಒಂದಿಲ್ಲೊಂದು ರೀತಿಯಲ್ಲಿ ವಿರೋಧ ಮಾಡುತ್ತಾ ಕಾಲಹರಣ ಮಾಡುತ್ತಿದೆ. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ಅವಳಿ ಜಿಲ್ಲೆಯ ರೈತರು ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಮಹಾರಾಷ್ಟ್ರ ಸರ್ಕಾರ ಆಲಮಟ್ಟಿ ಎತ್ತರದಿಂದ ನೆರೆಯ ಕೊಲ್ಲಾಪುರ, ಸಾಂಗ್ಲಿ ವ್ಯಾಪ್ತಿಯಲ್ಲಿ ಪ್ರವಾಹ ಎದುರಾಗುತ್ತದೆ ಎಂಬ ಖ್ಯಾತೆ ತೆಗೆದಿದೆ. ಆಲಮಟ್ಟಿ ಆಣೆಕಟ್ಟು ಎತ್ತರವನ್ನು ಎತ್ತರಿಸದಿರಲು ಒತ್ತಾಯ ಮಾಡಹತ್ತಿದೆ. ಇನ್ನೂ ಡಿಸಿಎಂ ಡಿಕೆ ಶಿವಕುಮಾರ ಆಲಮಟ್ಟಿ ಆಣೆಕಟ್ಟು ಎತ್ತರವನ್ನು 524 ಮೀಟರ್ ಗೆ ಎತ್ತರಿಸಲು ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಜತೆಗೆ ಇದಕ್ಕೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಿದ್ದೇವೆ ಎಂದಿರೋದು ರೈತರಲ್ಲಿ ಆಶಾಕಿರಣ ಮೂಡಿದೆ. 

ಇನ್ನೂ ಡಿಸಿಎಂ ಹೇಳಿಕೆ ಬಳಿಕ ಮಾಜಿ ಡಿಸಿಎಂ ಹಾಗೂ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಸಹ ಜಿಲ್ಲೆಯ ರೈತರ ಬೆನ್ನಿಗೆ ನಿಲ್ಲುವ ಮೂಲಕ ರೈತರ ಹಿತಾಸಕ್ತಿ ಕಾಯಲು ಬದ್ಧ ಎಂದಿದ್ದಾರೆ. ಮಹಾರಾಷ್ಟ್ರ ರಾಜ್ಯದ ಆರೋಪದಂತೆ ಪ್ರವಾಹ ಎನ್ನುವದು ಶುದ್ಧ ಸುಳ್ಳು, ಆಲಮಟ್ಟಿ ಜಲಾಶಯ ನಿರ್ಮಾಣ ಪೂರ್ವದಲ್ಲೂ ಅಂದರೆ 1969ಕ್ಕಿಂತ ಮೊದಲೇ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಪ್ರತಿ ವರ್ಷ ಮಳೆಗಾಲದ ವೇಳೆ ಪ್ರವಾಹ ಉಂಟಾಗುತ್ತಿತ್ತು ಎಂಬುದು ದಾಖಲೆಗಳಿಂದ ತಿಳಿದುಬರುತ್ತಿದೆ ಎಂದಿದ್ದಾರೆ. ಮಹಾರಾಷ್ಟ್ರ ಸರ್ಕಾರವೇ ದಶಕದ ಈಚೆಗೆ ನೀರಾವರಿ, ತಾಂತ್ರಿಕ ತಜ್ಞ ವದನೆಯರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಅಧ್ಯಯನ ನಡೆಸಿದ್ದು, ಕರ್ನಾಟಕದ ಆಲಮಟ್ಟಿ, ಹಿಪ್ಪರಗಿ ಜಲಾಶಯಗಳಲ್ಲಿ ನೀರು ಸಂಗ್ರಹಕ್ಕೂ, ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ವೈಜ್ಞಾನಿಕ ವರದಿ ನೀಡಿದ್ದಾರೆ. ಹೀಗಿದ್ದೂ ಮಹಾರಾಷ್ಟ್ರ ಸರ್ಕಾರ ವಿವಿಧ ವೇದಿಕೆಯಲ್ಲಿ ಆಲಮಟ್ಟಿ ಜಲಾಶಯಕ್ಕೆ ವಿರೋಧ ವ್ಯಕ್ತಪಡಿಸಿ, ಸುಳ್ಳು ತಕರಾರು ತೆಗೆದು ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿರುವುದನ್ನು ಖಂಡಿಸಿದ್ದಾರೆ.  

ಆಲಮಟ್ಟಿ ಜಲಾಶಯವನ್ನು ಈಗಿರುವ 519ರಿಂದ 524 ಮೀಟರ್ ಎತ್ತರಿಸುವುದು ಈಗಾಗಲೇ ನಿರ್ಧಾರವಾಗಿರುವ ವಿಷಯ. ಈ ಕುರಿತು ಮಹಾರಾಷ್ಟ್ರ ಸರ್ಕಾರ ವಿನಃ ಕಾರಣ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ ಎಂದಿದ್ದಾರೆ.  

ಒಟ್ನಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ರಾಜ್ಯದ ನಾಯಕರು ಧ್ವನಿ ಎತ್ತುತ್ತಿದ್ದಾರೆ. ಅವಳಿ ಜಿಲ್ಲೆಗಳ ಬಹಳ ದಿನಗಳ ಕನಸು ಆಲಮಟ್ಟಿ ಜಲಾಶಯದ ಎತ್ತರವನ್ನು ಎತ್ತರಿಸುವದು. ಇದೀಗ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರು ಅಭಿಪ್ರಾಯಗಳು ರೈತರಲ್ಲಿ ಆಶಾಕಿರಣ ಮೂಡಿಸಿವೆ. ಅದ್ಯಾವಾಗ ಕನಸು ನನಸಾಗುತ್ತದೆ ಎಂದು ಕಾದುನೋಡಬೇಕಿದೆ. 

ಕೋಟ್ 

ಬೆಳಗಾವಿ, ಬಿಜಾಪುರ್ ಬಾಗಲಕೋಟ್ ಮತ್ತು ರಾಯಚೂರು ಜಿಲ್ಲೆಗೆ ವರದಾನವಾಗಿರುವ ಕೃಷ್ಣಾ ನದಿಯ ಮೇಲಿರುವ ಆಲಮಟ್ಟಿ ಜಲಾಶಯವನ್ನು 524 ಮೀಟರ್ ಎತ್ತರ ಮಾಡಲಿಕ್ಕೆ ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸರ್ವಸಾಮಾನ್ಯ ಜನರಿಗೆ ದಿಕ್ಕು ತಪ್ಪುಸುತ್ತಿದ್ದಾರೆ ಅದಕ್ಕಾಗಿ ಕರ್ನಾಟಕ ರಾಜ್ಯ ಸರಕಾರವು ಮಹಾರಾಷ್ಟ್ರ ಸರಕಾರದ ಯಾವುದೇ ಮುಲಾಜು ಮಾಡದೆ ಆಲಮಟ್ಟಿ ಜಲಾಶಯ ಎತ್ತರವನ್ನು 524 ಮೀಟರ್‌ಕ್ಕೆ ಮಾಡಬೇಕು ಎಂದು ನಮ್ಮ ಆಶಯವಾಗಿದೆ. ಮಳೆಗಾಲದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರದ ಜಲ ಸಂಪನ್ಮೂಲ ಅಧಿಕಾರಿಗಳು ಸಮಯನ್ವತೆ ಕಾಯ್ದುಕೊಂಡು ಪ್ರವಾಹ ಪರಿಸ್ಥಿತಿ ಎದುರಿಸಬೇಕೆಂದು ನಮ್ಮ ಆಶಯವಾಗಿದೆ.