ಹೃದಯಾಘಾತದಿಂದ ವ್ಯಕ್ತಿ ಸಾವು

Man dies of heart attack

ಹೃದಯಾಘಾತದಿಂದ ವ್ಯಕ್ತಿ ಸಾವು 

ಸಂಬರಗಿ, 06; ಮಲಾಬಾದ ಗ್ರಾಮದ ಸಂಪತ ಸುಧಾಕರ ಪಾಟೀಲ, ವಯಸು: 36, ಇವರ ಹೃದಯಾಘಾತದಿಂದ ಅಥಣಿ ಪೋಲಿಸ್ ಠಾಣೆಯ ಎದುರಿಗಿವ ಲಾಡ್ಜದಲ್ಲಿ ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗ ಬೆಳಕಿಗೆ ಬಂದಿದೆ.  

ಮೃತ ಸಂಪತ ಸುಧಾಕರ ಪಾಟೀಲ ಇವರು ಜಮಖಂಡಿಯಲ್ಲಿ ಮಹೇಂದ್ರ ಫೈನಾನ್ಸ್‌ದಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಮರಳಿ ಗ್ರಾಮಕ್ಕೆ ಬರುವಾಗ ತಡವಾದ ಕಾರಣ ಪೋಲಿಸ್ ಠಾಣೆಯ ಎದುರಿಗೆ ಇರುವ ಲಾಡ್ಜದಲ್ಲಿ ವಾಸ ಮಾಡಿದ್ದರು. ಬೆಳಿಗ್ಗೆ ಎದೆನೋವು ಆದ ನಂತರ ಲಾಡ್ಜ ಮಾಲಿಕರು ಪೋಲಿಸ್ ಠಾಣೆಗೆ ಮಾಹಿತಿ ನೀಡಿದ ನಂತರ ಪೋಲಿಸರು ಲಾಡ್ಜಗೆ ಬಂದ ನಂತರ ಮೃತಾವಸ್ಥೆಯಲ್ಲಿ ಕಂಡು ಬಂದು ಸ್ಥಳಕ್ಕೆ ಅಥಣಿ ಪೋಲಿಸರು ಧಾವಿಸಿ ಪರೀಶೀಲಣೆ ಮಾಡಿದರು. ಅವರ ಮನೆಯಲ್ಲಿ ತಿಳಿಸಿದ ನಂತರ ಅವರು ಬಂದು ಶವವನ್ನು ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ಪರೀಶೀಲಣೆ ಮಾಡಲಾಯಿತು. ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.