ಲೋಕದರ್ಶನ ವರದಿ
ಮಂಜುನಾಥ ಸೌಂದಲಗಿ ಅಧಿಕಾರ ಸ್ವೀಕಾರ
ಸಂಬರಗಿ 25: ಅಥಣಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರೇಣುಕಾ ಹೊಸಮನಿ ಇವರು ತುರ್ತಾಗಿ ಜಿಲ್ಲಾ ಮಟ್ಟಕ್ಕೆ ವರ್ಗಾವಣೆಗೊಂಡಿದ್ದು, ಆ ಸ್ಥಳದಲ್ಲಿ ಮಂಜುನಾಥ ಸೌಂದಲಗಿ ಇವರನ್ನು ನೇಮಕ ಮಾಡಲಾಗಿದೆ.
ಮಂಜುನಾಥ ಸೌಂದಲಗಿ ಇವರು ಹಲವಾರು ವರ್ಷಗಳಿಂದ ಈ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರೇಣುಕಾ ಹೊಸಮನಿ ಇವರನ್ನು ತುರ್ತಾಗಿ ವರ್ಗಾವಣೆಗೊಂಡ ನಂತರ ಆ ಸ್ಥಳದಲ್ಲಿ ಇವರು ಅಧಿಕಾರ ಸ್ವೀಕರಿಸಿದ್ದಾರೆ.
ಅಥಣಿ ಕ್ಷೇತ್ರದಲ್ಲಿ 338 ಅಂಗನವಾಡಿ ಇದ್ದು, ಯಾವುದೇ ಸಮಸ್ಯೆ ಇದ್ದರೆ ಶೀಘ್ರ ಪರಿಹಾರಗೊಳಿಸುತ್ತೇನೆ. ಎಲ್ಲರೂ ಸಹಕಾರ ನೀಡಬೇಕೆಂದು ಅವರು ವಿನಂತಿಸಿದರು.