ಲೋಕದರ್ಶನ ವರದಿ
ಕುಮಟಾ, 12: ಸಕರ್ಾರ ಮತ್ತು ಕಾನೂನು ವ್ಯವಸ್ಥೆ ಜಾರಿಯಾಗಿ ಏಳು ದಶಕಗಳು ಗತಿಸಿದ್ದರೂ ಸಾಮೂಹಿಕ ಬಹಿಷ್ಕಾರದಂತಹ ಅನಿಷ್ಠ ಪದ್ಧತಿಗಳು ಇಂದಿಗೂ ನಮ್ಮ ಹಳ್ಳಿಗಳಲ್ಲಿ ಕಾಣ ಸಿಗುತ್ತವೆ ಎಂದರೆ ಇಡೀ ಸುಶಿಕ್ಷಕಿತ ಸಮಾಜ ತಲೆ ತಗ್ಗಿಸುವಂತಾಗಿದೆ.
ಹೌದು, ಕುಮಟಾ ತಾಲೂಕಿನ ಉಪ್ಪಿನಪಟ್ಟಣ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಂಬಿಗ ಸಮಾಜದ 9 ಕುಟುಂಬಗಳಿಗೆ ಸಾಮೂಹಿಕ ಬಹಿಷ್ಕಾರಕ್ಕೊಳಗಾಗಿದ್ದಾರೆ. ಐದು ವರ್ಷಗಳು ಸಮಾಜದ ಕಡೆಗಣನೆಗೆ ಒಳಗಾಗಿ ನೊಂದ ಕುಟುಂಬುಗಳು ನ್ಯಾಯಕ್ಕಾಗಿ ತಾಲೂಕು ಆಡಳಿತದ ಮೊರೆ ಹೋಗಿ ನ್ಯಾಯಕ್ಕಾಗಿ ಪರಿತಪಿಸುವಂತಾಗಿದೆ.
ಕುಮಟಾ ತಾಲೂಕಿನ ಅಳಕೋಡ್ ಗ್ರಾಪಂ ವ್ಯಾಪ್ತಿಯ ಉಪ್ಪಿನಪಟ್ಟಣ ಗ್ರಾಮದ ಯುವತಿಯೋರ್ವಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮೇಶ್ವರ ಅಂಬಿಗ ಅವರ ಕುಟುಂಬಕ್ಕೆ ಹಲವು ವರ್ಷಗಳ ಹಿಂದೆ ಸಾಮೂಹಿಕ ಬಹಿಷ್ಕಾರ ಹಾಕಲಾಗಿತ್ತು. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಕುಟುಂಬಕ್ಕೆ ಶಿಕ್ಷೆ ನೀಡುವುದು ಯಾವ ಸೀಮೆ ನ್ಯಾಯ ಎಂಬುದು ಕೆಲ ಸಂಬಂಧಿಗಳು ಸಮಾಜದ ಪ್ರಮುಖರಲ್ಲಿ ವಾದಿಸಿದ್ದರು. ಅಂತೆಯೇ ಪರಮೇಶ್ವರ ಅವರ ಸಹೋದರ ಗಣಪತಿ ಅಂಬಿಗ ಅವರ ವಿವಾಹ ಮಾಡಿಸುವಲ್ಲಿ ಅವರ ಕೆಲ ಸಂಬಂಧಿಗಳು ಹಾಗೂ ಸ್ನೇಹಿತರ ಕುಟುಂಬಗಳು ಮುಂದಾಗಿ ವಿವಾಹ ಮಾಡಿಸಿದ್ದರು. ಇದರಿಂದ ಕುಪಿತಗೊಂಡ ಅಂಬಿಗ ಸಮಾಜದ ಪ್ರಮುಖರು 9 ಕುಟುಂಬಗಳಿಗೆ ಸಾಮೂಹಿಕ ಬಹಿಷ್ಕಾರ ಹಾಕಿದ್ದಾರೆ. ಇದರಿಂದ ತಾಲೂಕಿನ ಇಡೀ ಅಂಬಿಗ ಸಮಾಜವು ತಮ್ಮ ಸಮಾಜದ ಎಲ್ಲ ಕಾರ್ಯಕ್ರಮಗಳಿಂದ ಈ ಕುಟುಂಬಗಳನ್ನು ದೂರವಿಡಲಾಗಿದೆ. ಬಹಿಷ್ಕೃತ ಕುಟುಂಬಗಳ ಮನೆಗಳಿಗೆ ಸಮಾಜದ ಯಾವುದೇ ವ್ಯಕ್ತಿ ಹೋಗುವಂತಿಲ್ಲ. ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತಿಲ್ಲ. ವಿವಾಹ ಸಂಬಂಧ ಬೆಳೆಸುವಂತಿಲ್ಲ. ಕುಲದೇವರ ದೇವಸ್ಥಾನಗಳ ಕಾರ್ಯಕ್ರಮದಲ್ಲೂ ಭಾಗಿಯಾಗಲು ಅವಕಾಶ ನೀಡಲಾಗುವುದಿಲ್ಲ. ನಮ್ಮ ಕುಟುಂಬದೊಂದಿಗೆ ಅಂಬಿಗ ಸಮಾಜದ ಇತರರು ಯಾವುದೇ ರೀತಿಯ ಸಂಬಂಧ ಇಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ಆ ಕುಟುಂಬಗಳೊಂದಿಗೆ ಸ್ನೇಹಯುತವಾಗಿ ನಡೆದುಕೊಂಡರೆ ಅವರನ್ನು ಕೂಡ ಸಮಾಜದಿಂದ ಬಹಿಷ್ಕರಿಸಲಾಗುತ್ತದೆ. ಸಮಾಜದ ಪ್ರಮುಖರ ಇಂಥ ಕಟ್ಟುನಿಟ್ಟಿನ ಅಪ್ಪಣೆಯಿಂದ ನೊಂದು ನೋವು ಅನುಭವಿಸುತ್ತಿರುವ ಮಾದೇವ ವೆಂಕಪ್ಪ ಅಂಬಿಗ, ಗಣಪತಿ ವೆಂಕಪ್ಪ ಅಂಬಿಗ, ಉಲ್ಲಾಸ ನಾಗಪ್ಪ ಅಂಬಿಗ, ನಾಗೇಶ ಬೀರಪ್ಪ ಅಂಬಿಗ, ಅಪ್ಪಯ್ಯ ಸುಬ್ಬು ಅಂಬಿಗ, ಉಮೇಶ ಈಶ್ವರ ಅಂಬಿಗ, ಕೃಷ್ಣಪ್ಪ ಬೀರಪ್ಪ ಅಂಬಿಗ, ಲಕ್ಷ್ಮಣ ವೆಂಕಪ್ಪ ಅಂಬಿಗ, ಮತ್ತು ಸುಬ್ರಾಯ ಗಣಪು ಅಂಬಿಗ ಅವರ ಕುಟುಂಬಗಳುನ್ಯಾಯಕ್ಕಾಗಿ ತಾಲೂಕು ಆಡಳಿತದ ಮೊರೆ ಹೋಗಿದ್ದರಿಂದ ಈ ಪ್ರಕರಣ ಬೆಳಕಿಗೆ ಬರುವಂತಾಗಿದೆ.
ಸಕರ್ಾರ ಮತ್ತು ಕಾನೂನು ವ್ಯವಸ್ಥೆಯಿರುವಾಗಲೂ ಸಾಮೂಹಿಕ ಬಹಿಷ್ಕಾರ ಹಾಕಿ ಕುಟುಂಬಗಳ ಸದಸ್ಯರನ್ನು ಶೋಷಣೆಗೊಳ್ಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಅನಿಷ್ಠ ಪದ್ಧತಿಯಿಂದ ಮುಕ್ತಿ ಕೊಡಿಸಿ, ನ್ಯಾಯ ದೊರಕಿಸಿಕೊಡುವಂತೆ ಸಾಮೂಹಿಕ ಬಹಿಷ್ಕಾರಕ್ಕೊಳ್ಪಟ್ಟವರು ಒತ್ತಾಯಿಸಿದ್ದಾರೆ.
ಈ ಕುರಿತು "ಕನ್ನಡಮ್ಮಕ್ಕೆ" ತಮ್ಮ ಅಳಲನ್ನು ತೋಡಿಕೊಂಡ ಶಿವು ಎಲ್ ಅಂಬಿಗ, ಸಮಾಜದ ಯಜಮಾನರಾದವರು ಸಮಾಜದ ಸಮಸ್ಯೆ ಬಗೆಹರಿಸಬೇಕೆಹೊರತು ಸಮಾಜ ಬಾಂಧವರನ್ನು ಶೋಷಣೆಗೊಳಪಡಿಸಬಾರದು. ಯಾರೇ ತಪ್ಪು ಮಾಡಿದರೂ ಕಾನೂನು ವ್ಯವಸ್ಥೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಅದನ್ನು ಬಿಟ್ಟು ಅವರ ಕುಟುಂಬಕ್ಕೆ ಸಮಾಜದಿಂದ ಬಹಿಷ್ಕಾರ ಹಾಕಿ ಕಿರುಕುಳ ನೀಡುವುದು ಸರಿಯಲ್ಲ. ಅಲ್ಲದೇ ಸಮಾಜದಲ್ಲಿ ಮರು ಸೇರ್ಪಡೆ ಮಾಡಿಕೊಳ್ಳಲು ಪ್ರತಿ ಮನೆಯವರು ಏಳೆಂಟು ಸಾವಿರ ರೂ. ನೀಡುವಂತೆ ಒತ್ತಾಯಿಸುತ್ತಾರೆ. ಬಡ ಕೂಲಿಕಾರರು ಸಾವಿರಾರು ರೂ. ಹೇಗೆ ಹೊಂದಿಸಿಕೊಡಲು ಸಾಧ್ಯ ಎಂದು ಅವರು ತಿಳಿಸಿದರೆ, ಲಕ್ಷ್ಮೀ ಅಂಬಿಗ ಅವರು, ತನ್ನ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರ ವಿವಾಹ ಮಾಡಲು ಸಂಬಂಧ ಹುಡುಕಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಸಮಾಜದ ಯಜಮಾನ ನನ್ನ ಸಹೋದರಿಯ ಪತಿಯಾಗಿದ್ದರೂ ಎದುರು ಸಿಕ್ಕಿದರೆ, ಮಾತನಾಡುವುದಿಲ್ಲ. ಇಂಥ ದುಸ್ಥಿತಿ ಈ ಅನಿಷ್ಠ ಪದ್ದತಿ ತಂದೊಡ್ಡಿದೆ. ಇದು ಕೊನೆಯಾಗಬೇಕೆಂದು ಆಗ್ರಹಿಸಿದರು.