ಯತ್ನಾಳ ಉಚ್ಚಾಟನೆ ಖಂಡಿಸಿ ಹಿಂದೂ ಸಮಾಜಗಳಿಂದ ಬೃಹತ್ ಪ್ರತಿಭಟನೆ

Massive protest by Hindu communities condemning Yatna's expulsion

ಯತ್ನಾಳ ಉಚ್ಚಾಟನೆ ಖಂಡಿಸಿ ಹಿಂದೂ ಸಮಾಜಗಳಿಂದ ಬೃಹತ್ ಪ್ರತಿಭಟನೆ 

ಮುದ್ದೇಬಿಹಾಳ 09: ಕೇಂದ್ರ ಮಾಜಿ ಸಚಿವ ವಿಜಯಪುರ ನಗರದ ಹಾಲಿ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿರುವದನ್ನು ಖಂಡಿಸಿ ಮುದ್ದೇಬಿಹಾಳ ತಾಲೂಕಿನ ಪಂಚಮಸಾಲಿ ಸಮಾಜ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ರಾ​‍್ಯಲಿ ನಡೆಸಿದರಲ್ಲದೇ ಬಿ.ಎಸ್‌.ಯಡಿಯೂರ​‍್ಪ, ವಿಜೇಂದ್ರ ಯಡಿಯೂರ​‍್ಪ ಹಾಗೂ ಮಾಜಿ ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ) ಅವರ ಭಾವಚಿತ್ರಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ  ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಬೆಳಿಗ್ಗೆ10 ಗಂಟೆಗೆ ತಾಲೂಕಿನ ಪಂಚಮಸಾಲಿ ಸಮಾಜ ಹಾಗೂ ಹಿಂದೂ ಸಮಾಜ ಬಾಂಧವರು ಸ್ವಯಂ ಪ್ರೇರಿತವಾಗಿ  ಪ್ರತಿಭಟನಾ ಮೇರವಣಿಗೆಗೆ ಬೆಂಬಲಿಸಿದ ಸಾವಿರಾರು ಜನ  ಯತ್ನಾಳ ಅಭಿಮಾನಿಗಳು ಹಿಂಧೂ ಕಾರ್ಯಕರ್ತರು  ಪಟ್ಟಣದ ಬನಶಂಕರಿ ವೃತ್ತದಿಂದ ಬ್ರಹತ್ ಪ್ರತಿಭಟನಾ ಮೇರವಣಿಗೆ ನಡೆಸುವ ಮೂಲಕ ಮುಖ್ಯ ಬಜಾರ ಮಾರ್ಗವಾಗಿ ಚಲಿಸಿ ಬಸವೇಶ್ವರ ವೃತ್ತದಲ್ಲಿ ಬಹಿರಂಗ ಭಾಷಣ ನಡೆಸಲಾಯಿತು. ಸುಮಾರು 5  ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರಲ್ಲದೇ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷಕ್ಕೆ ಗೌರವವಿತವಾಗಿ ಮರು ಸೇರೆ​‍್ಡ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಹಿಂದೂ ಸಮಾಜ ಬಿಜೆಪಿ ಪಕ್ಷದಿಂದ ಸಂಪೂರ್ಣ ಹಿಂದಕ್ಕೆ ಸರಿಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಜಯಪುರದ ಸ್ವಾಮಿ ವಿವೇಕಾನಂದ ಯುವ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿಯವರು ಮಾತನಾಡಿ ಬಸನಗೌಡ ಪಾಟೀಲ(ಯತ್ನಾಳ) ಅವರು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಯಾಗಿ ಕಟ್ಟಿ ನೆಲೆ ನಿಲ್ಲಿಸಿದ್ದಾರೆ ಸದ್ಯ ಇಡೀ ಕರ್ನಾಟಕದ ತುಂಬೆಲ್ಲಾ ಪಕ್ಷ ಸಂಘಟನೆ ಮಾಡುತ್ತಾ ಸಾಗಿದ್ದಾರೆ. ಬಿಜೆಪಿ ಪಕ್ಷವನ್ನು ತನ್ನ ಕುಟುಂಬದಂತೆ ನೋಡಿಕೊಳ್ಳುತ್ತಿರುವುದನ್ನು ಬಸನಗೌಡ ಪಾಟೀಲ(ಯತ್ನಾಳ)ಅವರು ತಂದೆ ಯಡಿಯೂರ​‍್ಪ ಮಗ ವಿಜಯೇಂದ್ರರವರ ಅಪ್ಪ ಮಕ್ಕಳ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದಬಗ್ಗೆ ಧ್ವನಿ ಎತ್ತಿದ್ದಕ್ಕೆ ಇಬ್ಬರೂ ಕೂಡಿ ಬಿಜೆಪಿ ಪಕ್ಷವನ್ನು ಯತ್ನಾಳ ಅವರಿಗೆ ಉಚ್ಚಾಟನೆ ಮಾಡುವಂತೆ ಮಾಡಿದ್ದಾರೆ. ಆದರೇ ಪಕ್ಷದ ಕೇಂದ್ರದ ವರಿಷ್ಠರು ಯೋಚಿಸಬೇಕಿತ್ತು ಸತ್ಯ ಮತ್ತು ಅ ಸತ್ಯದ ಬಗ್ಗೆ ಅರಿತು ನೋಡಬೇಕಿತ್ತು ಆದರೆ ಯಾರದೋ ಮಾತಿಗೆ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿರುವದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ರೀತಿಯಲ್ಲಿ ಕೇಂದ್ರದ ವರಿಷ್ಟರು ಉಚ್ಛಾಟನೆ ಮಾಡಿದ್ದು ಒಳ್ಳೆಯದ್ದೇ ಆಗಿದೆ ಇದರಿಂದ ರಾಜ್ಯದಲ್ಲಿ ಯತ್ನಾಳವರ ಪ್ರಬಲ ಹಿಂದೂತ್ವದ ಶಕ್ತಿ ಏನೆಂದು ಗೊತ್ತಾಗಿದೆ. ರಾಜ್ಯದಲ್ಲಿ ಯಾವೂದೇ ಹಿಂದೂ ಕಾರ್ಯಕರ್ತರ ಮೇಲೆ ನಡೆದರೂ ಇದೇ ಅಪ್ಪ ಮಗ ಯಾಕೇ ಭೇಟಿ ಮಾಡಲಿಲ್ಲ, ಆದರೇ ಯತ್ನಾಳವರು ಆಯಾ ಎಲ್ಲ ಹಿಂದೂ ಕಾರ್ಯಕರ್ತರ ಮನೆ ತೆರಳಿ ಆರ್ಥಿಕ ಸಹಾಯ ಮಾಡಿದ್ದಲ್ಲದೇ ನೂರಾರು ಗೋಗಳನ್ನು ಸಾಕಿದ ರಾಜ್ಯದ ಏಕೈಕ ನಾಯಕ ಜತೆಗೆ ಹಿಂದೂ ಕುಟುಂಬಗಳ ರಕ್ಷಣೆಗೆ ನಿಂತಿದ್ದಾರೆ. ವಕ್ಫ್‌ ಕಾಯ್ದೆಯ ಬಗ್ಗೆ ಧ್ವನಿ ಎತ್ತುವ ಮೂಲಕ ಹಿಂದೂ ಮಠಗಳ, ದೇವಸ್ಥಾನಗಳ, ಹಿಂದೂ ರೈತರ ಆಸ್ತಿಯನ್ನು ಉಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದರಿಂದ ಇಂದು ಪ್ರಧಾನಿ ನರೇಂದ್ರ ಮೋದಿಯವರು ವಕ್ಫ್‌ ಕಾಯ್ದೆ ರದ್ದು ಮಾಡಲು ಮುಂದಾಗಿದ್ದಾರೆ. ಯತ್ನಾಳವರು ಕೇವಲ ಒಂದು ಜಿಲ್ಲೆ ತಾಲೂಕು ರಾಜ್ಯಕ್ಕೆ ಸೀಮಿತವಲ್ಲ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಗ್ರಹ ಸಚಿವ ಅಮೀತ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಹಾಗೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಜೊತೆ 5ನೇ ಸ್ಥಾನದಲ್ಲಿ ಯತ್ನಾಳ ಅವರು ಪ್ರಬಲ ಹಿಂದೂ ನಾಯಕರಾಗಿ ಹೊರಹೊಮ್ಮಿದ್ದಾರೆ. ಮುದ್ದೇಬಿಹಾಳ ಮತಕ್ಷೇತ್ರದ ಮಾಜಿ ಶಾಸಕರೇ ನಿಮ್ಮ ತೊಗಲಿನ ನಾಲಿಗೆ ಇದೆ ಎಂದು ಮತಕ್ಷೇತ್ರದ ಜನರಿಗೆ ಬಾಯಿಗೆ ಬಂದಂತೆ ಬೈದಿದ್ದಕ್ಕೆ ನಿವೋಬ್ಬ ಹಿಂದೂ ನಾಯಕನಲ್ಲವಾಗಿದ್ದರಿಂದ ಈ ಬಾರಿ ಜನ ನಿಮಗೆ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ ಎಂದು ಟೀಕಿಸಿದರು.  ಯಾರನ್ನೋ ಓಲೈಸಿಕೊಳ್ಳಲು ಯತ್ನಾಳ ಅವರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಿರಿ ಇನ್ನುಮುಂದೆ ನಿಮಗೆ ಪಂಚಮಸಾಲಿ ಸಮಾಜ ಸೇರಿದಂತೆ ಸರ್ವ ಹಿಂದೂ ಸಮಾಜದವರ ವಿಶ್ವಾಸ ಬೆಂಬಲ ಕಳೆದುಕೊಂಡಿದ್ದಿರಿ ಇದೇ ರೀತಿ ಯತ್ನಾಳ ಅವರ ಬಗ್ಗೆ ನಾಲಿಗೆ ಹರಿ ಬಿಟ್ಟರೇ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದು ಮಾಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರ ಹೆಸರು ಬಳಸದೇ ವಾಗ್ದಾಳಿ ನಡೆಸಿದರು. ಯತ್ನಾಳ ಅವರು ಕರ್ನಾಟಕದ ಹಿಂದೂ ಹುಲಿ ಎಂದು ಜನರೇ ಬಿರುದುಕೊಟ್ಟಿದ್ದಾಗಿದೆ. ನಿವೇನು ಹೇಳೋದು ಸಧ್ಯ ಜನರ ದೃಷ್ಠಿಯಲ್ಲಿ ನೀವು ಇಲಿಯಾಗಿದ್ದಿರಿ ಎಂಬುದನ್ನು ಅರ್ಥೈಸಿಕೊಳ್ಳಿ.  ಬಸನಗೌಡ ಪಾಟೀಲ(ಯತ್ನಾಳ) ಅವರು ಒಬ್ಬ ವ್ಯಕ್ತಿಯಲ್ಲಾ ಹಿಂದೂ ಸಮಾಜದ ಒಂದು ದೊಡ್ಡ ಶಕ್ತಿಯಾಗಿದ್ದಾರೆ. ಇತ್ತೀಚಗೆ ಬಿಜೆಪಿ ಕೆಲವು ನಾಯಕರು ಹಿಂದೂತ್ವ ಎಂದು ಯಾರು ಯಾರೇ ಬಂದರೂ ಅವರನ್ನು ಮೊದಲು ಮಣ್ಣು ಕೊಡುವ ಕೆಲಸ ಮಾಡುತ್ತಾ ಸಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಳವಿನಂಚಿಗೆ ಬರಲು ಕಾರಣವಾಗಿದೆ. ಸದ್ಯ ಅಪ್ಪ ಮಕ್ಕಳು ಇಬ್ಬರೂ ಸೇರಿ ನಾ ಕಟ್ಟಿದ ಪಕ್ಷ ಎಂದು ಹೇಳುತ್ತಾ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಕರಾವಳಿ ಭಾಗದಲ್ಲಿ ಹಲವಾರು ನಾಯಕರನ್ನು ಮುಗಿಸಿದ ಕೀರ್ತಿ ಈ ಅಪ್ಪ ಮಕ್ಕಳಿಗೆ ಸಲ್ಲುತ್ತದೆ ಎಂದು ಯಡಿಯೂರ​‍್ಪ ಕುಟುಂಬದ ವಿರುದ್ಧ ಕಿಡಿ ಕಾರಿದರು.  ಮುದ್ದೇಬಿಹಾಳ ತಾಲೂಕು ಸೇರಿದಂತೆ ರಾಜ್ಯದೆಲ್ಲಡೆ ಇಂದು ಯತ್ನಾಳ ಗೌಡರ ಪರವಾಗಿ ಹಿಂದೂ ಸಮಾಜಗಳು ಎದ್ದು ನಿಂತಿವೆ. ಇದನ್ನು ನೋಡಿ ಯತ್ನಾಳ ಗೌಡರು ಒಂದೇ ಸಮಾಜಕ್ಕೆ ಸೀಮಿತವಾಗಿಲ್ಲಾ. ಇಡೀ ಹಿಂದೂ ಸಮಾಜದ ನಾಯಕ ಎಂದು ಒಪ್ಪಿಕೊಂಡಿದ್ದಾರೆ ಹಾಗಂತ ಕುರುಬ ಸಮಾಜಕ್ಕೆ ಎಷ್ಟಿ ಮೀಸಲಾತಿ ನೀಡುವಂತೆ ಗಂಗಾಮತಸ್ಥ ಸಮಾಜ ಹೀಗೇ ಅನೇಕ ಸಣ್ಣ ಸಣ್ಣ ಹಿಂದೂ ಸಮಾಜಗಳ ಸರಕಾರದ ಸೌಲಭ್ಯ ಕೊಡಿಸಲು ಆಶ್ರಯಕ್ಕೆ ನಿಂತಿದ್ದಾರೆ ಎಂದರು. ಯತ್ನಾಳ ಅವರು ರಾಜೀನಾಮೆ ಕೊಡುವಂತೆ ವಿಜಯೇಂದ್ರ ತನ್ನ ಚೇಲಾಗಳಿಂದ ಹೇಳಿಸುವುದು ಬಿಟ್ಟು ವಿಜಯೇಂದ್ರ ಕೂಡ ತನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಲಿ. ಇತ್ತ ವಿಜಯಪರದಲ್ಲಿ ಯತ್ನಾಳ ಅವರು ರಾಜಿನಾಮೆ ಕೊಡುತ್ತಾರೆ. ಇಬ್ಬರೂ ಕೂಡಿ ಚುನಾವಣೆ ಎದುರಿಸೋಣ ಆಗ ಸರ್ವ ಹಿಂದೂ ಸಮಾಜಗಳು ಒಂದಾಗಿ ಯತ್ನಾಳ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ, ವಿಜಯೇಂದ್ರ ಅವರು ಕಾಂಗ್ರೆಸ ಕೃಪಾಕಟಾಕ್ಷದಿಂದ ಗೆದ್ದು ಬಂದಿದ್ದಾರೆ ವಿನಃ ಅವರ ಗೆಲುವು ಸುಲಭವಿರಲಿಲ್ಲ. ವಿಜಯೇಂದ್ರವರಿಗೆ ತಮ್ಮ ಸೋಲಿನ ಬಗ್ಗೆ ಮೊದಲೆ ಗೊತ್ತಿತ್ತು ಅದಕ್ಕೆ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳುತ್ತಿದ್ದಾರೆ. ಇದೇ ಹೊಂದಾಣಿಕೆ ರಾಜಕಾರಣ ಕುಟುಂಬ ರಾಜಕಾರಣವನ್ನು ಯತ್ನಾಳ ಅವರು ಬಲವಾಗಿ ಖಂಡಿಸಿ ವಿರೋಧಿಸಿದ್ದಾರೆ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮಾತನಾಡಿ ಮಾಜಿ ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ) ಅವರು ಯತ್ನಾಳ ಅವರು ಹುಲಿ ಅಲ್ಲಾ ಇಲಿಯಾಗಿದ್ದಾರೆಂದು ಟೀಕಿಸಿದ್ದಾರೆ. ಯತ್ನಾಳ ಅವರು ಹುಲಿಯೋ ಅಥವಾ ಇಲಿ ಎಂಬುದನ್ನು ತಕ್ಕ ಉತ್ತರ ಮುದ್ದೇಬಿಹಾಳ ಕ್ಷೇತ್ರದ ಜನರು ನೀಡುತ್ತಿದ್ದಾರೆ. ಪ್ರಸ್ತುತ ಇಂದಿನ ಹೋರಾಟ ನಡಹಳ್ಳಿಗೆ ತಕ್ಕ ಉತ್ತರವಾಗಿದೆ ಎಂದ ಅವರು ನಡಹಳ್ಳಿ ಅವರು ಕೇವಲ ಬಾಯಿ ಚಪಲಕ್ಕ ಮಾತನಾಡುವದನ್ನು ಬಿಡಬೇಕು ಯತ್ನಾಳ ಅವರ ಬಗ್ಗೆ ಮಾತಾಡಿದರೆ ನಾನು ದೊಡ್ಡವನಾಗುತ್ತೇನೆಂದು ನಡಹಳ್ಳಿ ಅವರು ತಿಳಿದುಕೊಂಡಿದ್ದರೆ ಅದನ್ನು ಬಿಡಬೇಕು ನಡಹಳ್ಳಿ ಹಿಂದೂತ್ವ ಮರೆತಿದ್ದಕ್ಕೆ ಮಾಜಿ ಆಗಿದ್ದಾರೆ ಯಾಕೆಂದರೆ ಒಳಗೊಂದು ಹೊರಗೊಂದು ಮಾತಾಡುವ ವ್ಯಕ್ತಿ ನಡಹಳ್ಳಿಯಾಗಿದ್ದಾನೆ ಇತನ ಮಾತಿನಿಂದ ಯತ್ನಾಳ ಅವರ ವರ್ಚಸ್ಸಿಗೆ ಧಕ್ಕೆ ಇಲ್ಲಾ ಇತನಿಗೆ ಯತ್ನಾಳ ಅವರ ಅಭಿಮಾನಿಗಳು ಉತ್ತರ ನೀಡಲು ಸದಾ ಸಿದ್ದರಿದ್ದೇವೆ. ಪ್ರಭುಗೌಡ ದೇಸಾಯಿಯವರಿಂದ ಶಾಂತಿಭಂಗವಾಗುತ್ತದೆ ಅವರಿಂದ ರಕ್ಷಣೆ ಕೊಡಿ ಎಂದು ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಕ್ಕೆ ನಾನೇನು ಭಯಪಡುವ ಅಗತ್ಯವಿಲ್ಲ. ಇಂತಹ 10 ಕೇಸ್ ಹಾಕಿಸಿದರೂ ನಾನೂ ಹೆದರುವ ಪ್ರಶ್ನೇಯೇ ಇಲ್ಲ.  ಯತ್ನಾಳ ಅವರು ನಮ್ಮ ನಾಯಕರು ತಾಯಿ ಹೃದಯ ಹೊಂದಿದವರು ಅವರೆಲ್ಲಿರುತ್ತಾರೋ ಅವರ ಜತೆಗಿರುತ್ತೇನೆ ಇದರಲ್ಲಿ ಎರಡು ಮಾತಿಲ್ಲ. ಮಾಜಿ ಶಾಸಕ ನೀನು ಅಧಿಕಾರದಲ್ಲಿದ್ದಾಗ ಮಿಣಜಗಿ ಗ್ರಾಮದಲ್ಲಿರುವ ಬಹುತೇಕ ಗಣಿಗಾರಿಕೆಯನ್ನು ನಿಲ್ಲಿಸುವ ಮೂಲಕ ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಮಾಡಿದಿ. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಸಂದರ್ಭದಲ್ಲಿ ನನ್ನ ಮೇಲೆ ಸುಳ್ಳು ಕೇಸ್ ಹಾಕಿಸಿದಿ, ಆದರೇ ನಾನು ಕೇಸನಲ್ಲಿ ಗೆದ್ದು ಬಂದ ಮೇಲೆ ನನ್ನ ಮನೆಗೆ ಬಂದು ನಾನೂನು ಸಹೋದರ ಇದ್ದಂತೆ ಒಟ್ಟಾಗಿರೋಣ ಎಂದು ಹೇಳಿ ಚುನಾವಣೆಯಲ್ಲಿ ಗೆದ್ದು ಬಂದ ಮೇಲೆ ಪ್ರಭ್ಯಾ ಆರ್ ಎಸ್‌ನಿಂದ ಏನಾಗತೈತಿ ಎಂದು ಸಾರ್ವಜನಿಕರಲ್ಲಿ ಹೀಯಾಳಿಸಿದ್ದೆ, ಆದರೇ ನೀನೀಗ ಮಾಜಿಯಾಗಿದೆಯಲ್ಲ  ನಮ್ಮ ತಾಕತ್ತು ಏನು ಎಂಬುದು ತಿಳಿದುಕೋ ನೀನು ಹೀಗೇ ಮುಂದುವರೆದರೆ ನಾವೂ ಕೂಡ ಮೌನವಾಗಿರುವುದಿಲ್ಲ ಇಷ್ಟುದಿನದ ರಾಜಕಾರಣವೇ ಬೇರೆಯಾಗಿತ್ತು ಇನ್ನುಮುಂದಿನ ರಾಜಕಾರಣವೇ ಬೇರೆಯಾಗಿರುತ್ತದೆ ಎಂಬುದನ್ನು ಅರ್ಥೈಸಿಕೊಂಡು ನಡೆಯಬೇಕು ಎಂದು ವಾಗ್ದಾಳಿ ನಡೆಸಿದರು.  ಪ್ರಗತಿ ಪರ ಚಿಂತಕ ಅರವಿಂದ ಕೊಪ್ಪ ಅವರು ಮಾತನಾಡಿ ಕರ್ನಾಟಕದಲ್ಲಿ ಕೇಸರಿ ಧ್ವಜ ಉಳಿಯಬೇಕಾದರೆ ಯತ್ನಾಳ ಗೌಡರು ಕಾರಣರಾಗಿದ್ದಾರೆ ಬಿಜೆಪಿ ಪಕ್ಷದಿಂದ ಕೇವಲ ಯತ್ನಾಳ ಗೌಡರನ್ನು ಹೊರಗೆ ಹಾಕಿಲ್ಲಾ ಇಡೀ ಹಿಂದೂ ಸಮಾಜವನ್ನು ಪಕ್ಷದಿಂದ ಹೊರ ಹಾಕಿದಂತಾಗಿದೆ ಇದರಿಂದ ಕುಪಿತಗೊಂಡಿರುವ ಹಿಂದೂ ಸಮಾಜಬಾಂದವರು ಇಡೀ ಕರ್ನಾಟಕ ರಾಜ್ಯದ ತುಂಬೆಲ್ಲಾ ಸಿಡಿದೆದ್ದು ನಿಂತಿದ್ದಾರೆ ಇದನ್ನು ಬಿಜೆಪಿ ಪಕ್ಷದ ಹೈಕಮಾಂಡ ಪರೀಶೀಲನೆ ಮಾಡಬೇಕು ಯತ್ನಾಳ ಅವರನ್ನು ಪಕ್ಷಕ್ಕೆ ಮರು ಸೇರೆ​‍್ಡ ಮಾಡಿಕೊಳ್ಳಬೇಕೆಂದ ಅವರು ಚಮಚಾಗಿರಿ ಮಾಡುವವರಿಗೆ ಬಿಜೆಪಿ ಪಕ್ಷದಲ್ಲಿ ನೀಡುತ್ತಿರುವ ಬೆಲೆಯನ್ನು ಕಡಿಗಣಿಸಬೇಕು ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಪೂರ್ಣ ಅಸ್ಥಿತ್ವ ಕಳೆದುಕೊಳ್ಳಲಿದೆ ಎಂದರು. ಮಾಜಿಶಾಸಕ ನಡಹಳ್ಳಿಯವರು ತಮ್ಮ ಅಧಿಕಾರದಲ್ಲಿದ್ದಾಗ ಪಂಚಮಸಾಲಿ ಸಮಾಜದ ಯುವ ಮುಖಂಡ ಹೋರಾಟಗಾರನ ಮೇಲೆ ಪೋಲಿಸ್ ಕೇಸ್ ಹಾಕಿಸಿ ದರ​‍್ ತೋರಿದ್ದಾರೆ. ಅದರಂತೆ ಯತ್ನಾಳವರಿಗೆ ಮಾತ್ರವಲ್ಲದೇ ಕೂಡಲ ಸಂಗಮದ ಪಂಚಮಸಾಲಿ ಸಮಾಜದ ಬಸವಜಯಮೃತ್ಯುಂಜಯ ಮಹಾಸ್ವಾಮಿಗಳಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಿರಿ, ಕಳೆದ ತಮ್ಮ ಎಲ್ಲ ಚುನಾವಣೆಗಳಲ್ಲಿ ಶೇಕಡಾ 80 ರಷ್ಟು ನಮ್ಮ ಪಂಚಮಸಾಲಿ ಸಮಾಜ ಬೆಂಬಲಿಸಿದೆ ಎಂಬುದು ಮೊದಲು ಅರ್ಥೈಸಿಕೊಳ್ಳಿ ಈಗ ನಮ್ಮ ಸಮಾಜದ ನಾಯಕರಿಗೆ ಮಠಾಧೀಶರಿಗೆ ವಿರುದ್ಧ ಮಾತನಾಡುತ್ತಿದ್ದಿರಲ್ಲ ಮುಂದೆ ನಮ್ಮ ಸಮಾಜ ನಿಮಗೆ ಬೆಂಬಲಿಸಬೇಕೇ ಅದು ಸಾಧ್ಯವಿಲ್ಲ ಎಂದರು. ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ, ಡಾ, ಬಸನಗೌಡ ಪಾಟೀಲ(ನಾಗರಾಳ) ಎಮ್ ಎಸ್ ರುದ್ರುಗೌಡರ, ಬಾಬು ಸೂಳಿಭಾವಿ,ಶರಣಪ್ಪ ಹೊಳಿ, ಕಾಮರಾಜ ಬಿರಾದಾರ,  ರವಿ ಕಮತ, ಬಸವರಾಜ ಗೋನಾಳ, ಉದಯ ರಾಯಚೂರ, ಅರವಿಂದ ಕಾಶಿನಕುಂಟಿ,ಅಶೋಕ ಇಲಕಲ್ಲ, ಬಸಲಿಂಗಪ್ಪ ರಕ್ಕಸಗಿ, ವಿರೇಶ ಢವಳಗಿ, ಶರಣಗೌಡ ಬೂದಿಹಾಳ, ದ್ಯಾಮನಗೌಡ ಪಾಟೀಲ, ಮಹಾಂತೇಶ ನಿಡಗುಂದಿ, ಅನೀಲ ಪಾಟೀಲ, ವಿರೇಶ ಕಲ್ಲೂರ, ರಾಚೋಟಿ ಬಳಗಾರ, ಶರಣು ಸಾಲವಾಡಗಿ, ಸತೀಶ ಕುಲಕರ್ಣಿ, ರಾಜುಗೌಡ ಗೌಡರ, ಸುರೇಶ ಗೌಡ  ಪಾಟೀಲ, ಶಿವು ಕೋರಿ, ವಿರೇಶ ಹಡಲಗೇರಿ, ರವಿ ತಡಸದ ಸೇರಿದಂತೆ ಈ ಬೃಹತ್ ಪ್ರತಿಭಟನಾ ನೇತೃತ್ವವನ್ನು ಪಟ್ಟಣದಲ್ಲಿ ಸಮಸ್ತ ಮುಖಂಡರುಗಳು ವಹಿಸಿದ್ದರಲ್ಲದೇ ಪ್ರತಿಭಟನಾ ಸಮಯದಲ್ಲಿ ವಿವಿಧ ಗ್ರಾಮಗಳಿಂದ ಸುತ್ತಮುತ್ತಲಿನ ಯತ್ನಾಳ ಅಭಿಮಾನಿಗಳ  ಬಳಗವು ಹಾಗೂ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.