ಗೋಕಾಕ: ನಗರದ ಸೌಂದರ್ಯಿಕರಣದ ಹಿನ್ನಲೆಯಲ್ಲಿ ನಗರಸಭೆಯಿಂದ ನಗರದಲ್ಲಿ ಮಾಸ್ಟರ್ ಪ್ಲಾನ್ ಯೋಜನೆಯನ್ನು ಜಾರಿಗೆ ತಂದು ಈಗಾಗಲೇ ಕೆಲವೊಂದು ಪ್ರಮುಖ ರಸ್ತೆಗಳ ಕಾರ್ಯ ಮುಕ್ತಾಯವಾಗಿದೆ ಎಂದು ನಗರಸಭೆ ಹಿರಿಯ ಸದಸ್ಯ ಹಾಗೂ ಮಾಜಿ ನಗರಾಧ್ಯಕ್ಷ ಎಸ್.ಎ.ಕೋತವಾಲ ಹೇಳಿದರು.
ಅವರು, ಸೋಮವಾರದಂದು ಇಲ್ಲಿಯ ಬನಶಂಕರಿ ಕಲ್ಯಾಣ ಮಂಟಪ ಹಾಗೂ ಮಹಾದೇವ ದೇವಸ್ಥಾನದಲ್ಲಿ ಮಾಸ್ಟರ್ ಪ್ಲಾನ್ ಯೋಜನೆ ಸಂಬಂಧವಾಗಿ ಕರೆದ ಸಾರ್ವಜನಿಕರ ಹಾಗೂ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ನಗರದ ಪ್ರಮುಖ ರಸ್ತೆಗಳ ಅಗಲೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ನಗರದ ಇನ್ನೂ ಕೆಲವೊಂದು ಪ್ರಮುಖ ರಸ್ತೆಗಳಾದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪುರಾಣಿಕ ಸರ್ಕಲವರೆಗೆ ಹಾಗೂ ಅಪ್ಸರಾ ಕೂಟದಿಂದ ಶಿಂಧಿಕೂಟವರೆಗೆ ಜನದಟ್ಟನೆ ಹೆಚ್ಚುತ್ತಿರುವುದರಿಂದ ವ್ಯಾಪಾರಸ್ಥರಿಗೆ ಅನುಕೂಲ ದೃಷ್ಠಿಯಿಂದ ಈ ಕಾಮಗಾರಿಯನ್ನು ಅತೀ ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದರು.
24ಘಿ7 ಕುಡಿಯುವ ನೀರಿನ ಯೋಜನೆ, ನಗರೋತ್ಥಾನದ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದರೊಂದಿಗೆ ಮಾಸ್ಟರ್ ಪ್ಲಾನ್ ಯೋಜನೆಯು ಅರ್ಧ ಭಾಗದಷ್ಟು ಕಾಮಗಾರಿ ಬಾಕಿ ಉಳಿದಿದ್ದು, ಈ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಗೋಕಾಕ ನಗರವನ್ನು ಸೌಂದಯರ್ೀಕರಣಗೊಳಿಸಿ ಮಾದರಿ ನಗರವನ್ನಾಗಿ ನಿಮರ್ಿಸಲು ತಾವೆಲ್ಲರೂ ನಮ್ಮ ನಗರಸಭೆ ಜೊತೆ ಕೈಜೋಡಿಸಬೇಕೆಂದು ವಿನಂತಿಸಿಕೊಂಡರು.
ಈಗಾಗಲೇ ನಗರಸಭೆ ವತಿಯಿಂದ ಕೈಗೊಂಡ ಎಲ್ಲ ಕಾಮಗಾರಿಗಳಿಗೆ ನಗರದ ಸಮಸ್ತ ಜನತೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಹೀಗಾಗಿ ವ್ಯಾಪಾರಸ್ಥರು, ಅಂಗಡಿ ಮಾಲೀಕರು, ಈ ಬಾರಿಯೂ ಸ್ವಯಂ ಪ್ರೇರಣೆಯಿಂದ ಈ ಕಾರ್ಯಕ್ಕೆ ಸ್ಪಂದಿಸಿ ಮಾಸ್ಟರ್ ಪ್ಲಾನ್ ಯೋಜನೆ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಬಾಕ್ಸ್; ನಗರದ ಮಾಕರ್ೆಟನಲ್ಲಿ ಎರಡೂ ರಸ್ತೆಗಳ ಬದಿಯಲ್ಲಿ ಕಾಯಿಪಲ್ಯೆ ವ್ಯಾಪಾರಸ್ಥರು ಹಾಗೂ ಚಿಕ್ಕಪುಟ್ಟ ವ್ಯಾಪಾರಸ್ಥರು ಕುಳಿತುಕೊಂಡು ವ್ಯಾಪಾರ ನಡೆಸುವುದರಿಂದ ರಸ್ತೆ ಅಗಲೀಕರಣ ಮಾಡಿಯೂ ಪ್ರಯೋಜನವಿಲ್ಲದಂತಾಗುತ್ತದೆ. ಇದರಿಂದ ಮತ್ತೇ ರಸ್ತೆಯಲ್ಲಿ ಅಡಚಣೆವುಂಟಾಗುವುದು. ಕಾರಣ ಅಂತಹ ಚಿಕ್ಕಪುಟ್ಟ ವ್ಯಾಪಾರಸ್ಥರಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಿ ಅವರನ್ನು ಅಲ್ಲಿ ವಗರ್ಾವಣೆ ಮಾಡಿದಾಗ ಮಾತ್ರ ನಗರದ ಸೌಂದಯರ್ೀಕರಣ ಹಾಗೂ ಟ್ರಾಫಿಕ್ ಸಮಸ್ಯೆ ಬಗೆಹರಿಯುವುದು.
ಮಲ್ಲಿಕಾಜರ್ುನ ಭೂತಿ
ವ್ಯಾಪಾರಸ್ಥ
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಎಮ್.ಎಚ್.ಅತ್ತಾರ, ಸಹಾಯಕ ಕಾರ್ಯ ನಿವರ್ಾಹಕ ಅಭಿಯಂತರ ವಿಠ್ಠಲ ತಡಸಲೂರ, ಇಂಜನೀಯರ ಎಸ್.ಎಚ್.ಗಿಡದಹುಬ್ಳಿ, ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಸದಸ್ಯರುಗಳಾದ ಪರಶುರಾಮ ಭಗತ, ಭೀಮಶಿ ಭರಮಣ್ಣವರ, ಜಾಕೀರ ನದಾಫ್, ದುರ್ಗಪ್ಪ ಶಾಸ್ತ್ರಿಗೊಲ್ಲರ, ಚಂದ್ರಕಾಂತ ಇಳಿಗೇರ, ಅಬ್ಬಾಸ ದೇಸಾಯಿ, ವ್ಯಾಪಾರಸ್ಥರಾದ ಬಿ.ಎಸ್.ಪರಮಾರ, ದೀಪಕ ಓರಾ, ಆಯ್.ವಿ.ಕೌತನಾಳಿ, ಬಿ.ಪಿ.ಗುಲ್ಲ, ಶಂಕರ ಕಲಬುಗರ್ಿ, ಎಸ್.ಎ.ತ್ರಾಸಗರ, ಆರ್.ವಿ.ಅತ್ತಾರ, ಡಿ.ಬಿ.ಪಾಶ್ಚಾಪೂರ, ಡಿ.ಬಿ.ಕಾಗತಿ ಸೇರಿದಂತೆ ಅನೇಕರು ಇದ್ದರು.