ಮಟಕಾ ಓಸಿ ಜೂಜಾಟ; ವ್ಯಕ್ತಿ ಬಂಧನ

Mataka OC gambling; Man arrested: 12-6

ಬೆಳಗಾವಿ 12: ಖಡೇಬಜಾರ ಪೊಲೀಸ್ ಠಾಣಾ ಹದ್ದಿಯ ಚಿತ್ರಹಂಸ ಟಾಕೀಸ್ ಬದಿ ವ್ಯಕ್ತಿಯೊಬ್ಬ ಓಸಿ ಮುಂಬೈ ಮಟಕಾ ಎಂಬ ಅದೃಷ್ಟದ ಆಟದ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡು ಓಸಿ ಜುಗಾರ ಆಟದಲ್ಲಿ ತೊಡಗಿದ್ದಾಗ ಖಡೇಬಜಾರ ಪೊಲೀಸ್ ಠಾಣೆಯ ಪಿಎಸ್‌ಐ ಆನಂದ ಆದಗೊಂಡ ಹಾಗೂ ಸಿಬ್ಬಂದಿಯವರು ದಿ. 11ರಂದು ದಾಳಿ ಮಾಡಿ ಆತನಿಂದ ನಗದು ಹಣ ರೂ.800 ಮತ್ತು ಮಟಕಾ ಬರೆಯಲು ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.  

ಬೆಳಗಾವಿ ಪಾಂಗುಳ ಗಲ್ಲಿ ನಿವಾಸಿ  ಅಭಿಷೇಕ ಪ್ರಕಾಶ ಶಿವಾಪೂರೆ (30) ಆರೋಪಿಯಾಗಿದ್ದು, ಖಡೇಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.