ಅಂಬೇಡ್ಕರ ಅವರ ಜೀವನ ಪ್ರತಿಯೊಬ್ಬರಿಗೆ ಪ್ರೇರಣೆ ಜೊತೆಗೆ ದಾರೀದೀಪವಾಗಲಿ
ಬ್ಯಾಡಗಿ 14:ಜಗತ್ತಿನ ಉದ್ದಗಲಕ್ಕೂ ತಾಂಡವಾಡುತ್ತಿದ್ದ ಸಾಮಾಜಿಕ ಸಮಸ್ಯೆಗಳಿಗೆ ತಾತ್ವಿಕ ಪರಿಹಾರ ಸೂಚಿಸಿದವರು ಡಾಕ್ಟರ್ ಮಹಾನ್ ಮಾನವತಾವಾದಿ ಡಾ. ಬಿಆರ್ ಅಂಬೇಡ್ಕರ್ ಎಂದು ಶಾಸಕ ಬಸವರಾಜ್ ಶಿವಣ್ಣನವರ್ ಹೇಳಿದರು. ಪಟ್ಟಣದ ಅಂಬೇಡ್ಕರ್ ಅವರ ಭವನದಲ್ಲಿ ಇಂದು ತಾಲೂಕಾ ಆಡಳಿತ ತಾಲೂಕ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ಪುರಸಭೆ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಹಾಗೂ ಪರಿಶಿಷ್ಟ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಇತರೆ ಒಕ್ಕೂಟಗಳ ಬ್ಯಾಡಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಹಾಗೂ ಹಸಿರು ಕ್ರಾಂತಿ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಡಾಕ್ಟರ್ ಬಾಬು ಜಗಜೀವನ್ ರಾವ್ ಅವರ 118ನೇ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದವರು.
ಪ್ರಪಂಚದ ನಾನಾ ದೇಶಗಳಲ್ಲಿರುವ ಬಡತನ, ಅಸಮಾನತೆ, ನಿರುದ್ಯೋಗ ಸಮಸ್ಯೆ ಅನಾರೋಗ್ಯ, ಅನಕ್ಷರತೆ ಹೋಗಲಾಡಿಸುವ ಯೋಜನೆಗಳನ್ನು ರೂಪಿಸುವ ಅಂಬೇಡ್ಕರ್ ಅವರ ಸಾಮಾಜಿಕ ಪ್ರತಿಪಾದನೆ ದೂರ ದೃಷ್ಟಿತ್ವದ ಆಲೋಚನೆಗಳು ಚಿಂತನೆಗಳು ವಿಚಾರಧಾರೆಗಳು ಹೊಂದಿದ ಮಹಾನ್ ವ್ಯಕ್ತಿ ಅಂಬೇಡ್ಕರ್ ಅವರು. ಸಮಾಜಮುಖಿ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದೆ.
ಅವರ ಸಾಧನೆ ಹೋರಾಟ ಆದರ್ಶಗಳು ಸ್ಮರಣೆಯ ಹಾಗೂ ಅನುಕರಣೆಯ ಅಂಬೇಡ್ಕರದ ಜೀವನ ಪ್ರತಿಯೊಬ್ಬರಿಗೆ ಪ್ರೇರಣೆಯಾಗುವುದರ ಜೊತೆಗೆ ದಾರೀದೀಪವಾಗಲಿ ಅಂಬೇಡ್ಕರ್ ಮಹಾನ್ ಪ್ರಭಾವಿಶಾಲಿ ವಿಶ್ವವಿಜ್ಞಾನಿಯಾಗಿದ್ದು ಅವರ ಬಗ್ಗೆ ತಿಳಿದುಕೊಳ್ಳುವುದು ಬಹಳವಿದೆ ಎಂದರು.ಇದಕ್ಕೂ ಮೊದಲು ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಹಾಗೂ ಡಿ.ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು.
ತಹಶೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಮಾತನಾಡಿ ಅಕ್ಷರ ವಂಚಿತರಾಗಿದ್ದ ಮನೆ ಕೆಲಸಕ್ಕೆ ಸೀಮಿತವಾಗಿದ್ದ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯುವ ಹಕ್ಕು ನೀಡಿದವರು ಅಂಬೇಡ್ಕರ್ ಸಂವಿಧಾನ ಶಿಲ್ಪಿ ಆಶಯದಂತೆ ಮೌಡ್ಯೆಗಳನ್ನು ತೊರೆದು ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಅಂಬೇಡ್ಕರ್ ಹೇಳಿರುವಂತೆ ಪ್ರತಿಯೊಬ್ಬರೂ ಏಳಿಗೆ ಉನ್ನತಿ ಅವರವರ ಪರಿಶ್ರಮದಿಂದ ಮಾತ್ರ ಸಾಧ್ಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದವರು ಅವರ ಆಶಯದಂತೆ ಅವಕಾಶಗಳನ್ನು ಬಳಸಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳ ಬೇಕು ಮುಂದಿನ ಪೀಳಿಗೆಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೆ ಪ್ರೇರೇಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೆಡ್ಕರವರಹಾಗೂ ಬಾಬು ಜಗಜೀವನರಾಂ ಅವರ ಕುರಿತು ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಮಲ್ಲಿಕಾರ್ಜುನ,ಸುರೇಶ್ ಆಸಾದಿ,ನಾಗರಾಜ ಹಾವನೂರ್, ದುರ್ಗೆಶ ಗೋಣೆಮ್ಮನವರ,ರಮೇಶ ಸುತ್ತಕೋಟಿ, ಫಕ್ಕೀರಮ್ಮ ಚಲವಾದಿ.ರಮೇಶ ಕೋಟಿ,ವಿಜಯ ಮಾಳಗಿ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಿ ದೊಡ್ಡಬಸವರಾಜ . ವೃತ್ತ ನೀರೀಕ್ಷಕ ಮಾಲತೇಶ ಲಂಬಿ,ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು,ಸಮಾಜದ ಮುಖಂಡರು ಉಪಸ್ಥಿತರಿದ್ದರು.