ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಅದ್ಭುತವಾಗಿರಲಿ: ಜುನಗೊಂಡ

May the achievements of rural students be wonderful: Junagonda

ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಅದ್ಭುತವಾಗಿರಲಿ: ಜುನಗೊಂಡ 

 ವಿಜಯಪುರ 08: ಇಂದಿನ ಸ್ಪರ್ಧಾಜಗತ್ತಿನಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಸರಕಾರಿ ಹುದ್ದೆಯಲ್ಲಿ ನೇಮಕಾತಿ ಆಗಬೇಕು. ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಅದ್ಭುತವಾಗಿರಬೇಕು ಎಂದು  ಎಕ್ಸಲಂಟ್ ಪಿ ಯು ಕಾಲೇಜಿನ ಉಪಪ್ರಾಚಾರ್ಯ ಮಂಜುನಾಥ ಜುನಗೊಂಡ ಕರೆ ನೀಡಿದರು. 

ಮಾತೋಶ್ರೀ ಶಂಕ್ರೆಮ್ಮಾ ತಾಯಿ ಪ್ರಾಥಮಿಕ ಶಾಲೆ ಕತಕನಹಳ್ಳಿ ಶಾಲೆಯಲ್ಲಿ 7ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಕ್ಕಳನ್ನು ಉದ್ದೇಶಿಸಿಅವರು ಮಾತನಾಡುತ್ತಿದ್ದರು. 

ಈ ಸ್ಪರ್ಧಾ ಜಗತ್ತಿನ ಸ್ಪರ್ಧಾ ಪರೀಕ್ಷೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿ ಜೀವನದಲ್ಲಿ ಏನಾದರು ಒಳ್ಳೆಯ ಸಾಧನೆ ಮಾಡಲು ಈ ಚಿಕ್ಕ ವಯಸ್ಸಿನಿಂದಲೆ ಗುರಿಯನ್ನು ಇಟ್ಟುಕೊಳ್ಳಬೇಕು. ನಿಮ್ಮ ಬಗ್ಗೆ ತಂದೆ ತಾಯಿ ಕಾಣುವ ಒಳ್ಳೆಯ ಆಶೆ ಆಕಾಂಕ್ಷೆಗಳನ್ನು ಈಡೇರಿಸಬೇಕು. ತಾಯಿ ಯಾವಾಗಲು ತಮ್ಮ ಬಗ್ಗೆ ಒಳ್ಳೆಯ ಕನಸು ಕಾಣುತ್ತಿರುತ್ತಾಳೆ. ಆ ಕನಸು ತಾವು ಈಡೇರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.  

ಶಾಲೆಯ ಮುಖ್ಯಗುರು ಅರವಿಂದ ಪವಾರ ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಆಸಕ್ತಿಯೊಂದಿಗೆ ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕಾರ ಇಟ್ಟು ಕೊಳ್ಳಬೇಕು. ನಾವು ನಮ್ಮ ಜೀವನದಲ್ಲಿ ಒಳ್ಳೆಯ ಸಂಸ್ಕೃತಿ ಇಟ್ಟುಕೊಂಡರೆ ಮಾತ್ರ ನಾವು ಸಮಾಜದಲ್ಲಿ ಉತ್ತಮ ಸಾಧಕರಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ. ಒಬ್ಬ ಆದರ್ಶ ವಿದ್ಯಾರ್ಥಿಯಾಗಿ ಬೆಳೆದು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಹೊರಹೊಮ್ಮಬೇಕು. ಸರಿಯಾಗಿ ಅಭ್ಯಾಸ ಮಾಡಿ ಉತ್ತಮ ಅಂಕಗಳ ಪಡೆಯುವ ಮೂಲಕ ಸಮಾಜದಲ್ಲಿ ಒಬ್ಬ ಆದರ್ಶ ಸರಕಾರಿ ಅಧಿಕಾರಿ, ಒಳ್ಳೆಯ ಆದರ್ಶ ವ್ಯಕ್ತಿಯಾಗಲು ಎಲ್ಲ ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ಮಕ್ಕಳು ಜೀವನದಲ್ಲಿ ಒಳ್ಳೆಯ ಛಲ ಗುರಿ ಯಾವಾಗಲು ಇಟ್ಟು ಕೊಳ್ಳಬೇಕು ಎಂದು ಹೇಳಿದರು.  

ಸಂಸ್ಥೆಯ ನಿರ್ದೇಶಕ ಬಸವರಾಜ ಅರಕೇರಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಮಾಡಿ ಎಲ್ಲ ಮಕ್ಕಳಿಗೆ ಉತ್ಸಾಹ ತಂದರು.  

ವೇದಿಕೆಯಲ್ಲಿ ಊರಿನ ಪ್ರಮುಖ ವ್ಯಕ್ತಿಗಳಾದ ಅಪ್ಪಾಸಾಹೇಬ ಕೊಟ್ಯಾಳ, ಶರಣಪ್ಪ ಬಬಲೇಶ್ವರ, ಸಾಹೇಬಗೌಡ ಬಿರಾದಾರ, ಗುರುಪಾದ ಶಿರಮಗೊಂಡ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಬಿರಾದಾರ ಭಾಗವಹಿಸಿದರು. ಶಿಕ್ಷಕ ಹೇಮಂತ ನಾಯಕ, ಮತ್ತು ಶಾಲೆಯ ಎಲ್ಲ ಶಿಕ್ಷಕರು ಭಾಗವಹಿಸಿದ್ದರು. ಸಾಯಬಣ್ಣ ಬಮನಳ್ಳಿ ನಿರೂಪಿಸಿದರು. ಸಚೀನ ಯಳಮೇಲಿ ಶಿಕ್ಷಕರು ವಂದಿಸಿದರು.