ನವದೆಹಲಿ, ಆ 6 ಕ್ರಿಕೆಟ್ ವೃತ್ತಿ ಜೀವನಕ್ಕೆ ಈಗಾಗಲೇ ವಿದಾಯ ಘೋಷಿಸಿರುವ ನ್ಯೂಜಿಲೆಂಡ್ ತಂಡದ ಮಾಜಿ ಬ್ಯಾಟ್ಸ್ಮನ್ ಬ್ರೆಂಡಮ್ ಮೆಕ್ಕಲಂ ಅವರು ಪಂದ್ಯ ವೀಕ್ಷಕ ವಿವರಣೆಕಾರ ಹಾಗೂ ಕೋಚಿಂಗ್ ವಿಭಾಗದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ.
ಕಳೆದ ಒಂದು ದಿನದ ಹಿಂದೆ ಕೆನಡಾದ ಜಿಟಿ-20 ಟೂರ್ನಿ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು ಎಂದು ನ್ಯೂಜಿಲೆಂಡ್ನ ಬ್ಲ್ಯಕ್ ಕ್ಯಾಪ್ಸ್ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿತ್ತು.
" 20 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆನೀಡಿರುವ ಕೊಡುಗೆ ಸಂಪೂರ್ಣ ತೃಪ್ತಿ ತಂದಿದೆ. ಕ್ರಿಕೆಟ್ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡುವ ವೇಳೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಿದ್ದೇನೆ ಎಂದು ಭಾವಿಸಿದ್ದೇನೆ." ಎಂದು ಮೆಕ್ಕಲಮ್ ಟ್ವಿಟ್ ಮಾಡಿದ್ದಾರೆ.
ನ್ಯೂಜಿಲೆಂಡ್ ತಂಡದ ಬೌಂಡರಿ ನಿಯಮದಿಂದ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾದರೂ ಇಡೀ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದೆ. ಕೆನಡಾದಲ್ಲಿ ಜಿಟಿ-20 ಕ್ರಿಕೆಟ್ ಟೂರ್ನಿಯನ್ನೂ ಹೆಚ್ಚು ಆಹ್ಲಾದಿಸಿದ್ದೇನೆ. ಕ್ರಿಕೆಟ್ನಲ್ಲಿ ಸಾಕಷ್ಟು ಖುಷಿ ಕ್ಷಣಗಳನ್ನು ಅನುಭವಿಸಿದ್ದೇನೆ ಎಂದು ಇದೇ ವೇಳೆ ಮೆಕ್ ಕಲಮ್ ತಿಳಿಸಿದ್ದಾರೆ.