ಗದಗ 29: ಜಿಲ್ಲೆಯ ಮುಂಡರಗಿ ಮತ್ತು ನರಗುಂದ ಪುರಸಭೆಗಳ ತಲಾ 23 ಸದಸ್ಯರ ಆಯ್ಕೆಗೆ ಇಂದು ಮತದಾನ ನಡೆಯುತ್ತಿದೆ. ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಂದು ಮುಂಡರಗಿ ಪಟ್ಟಣದಲ್ಲಿ ನಡೆಯುವ ಚುನಾವಣೆಯಲ್ಲಿ ಮತಗಟ್ಟೆ ಸಂಖ್ಯೆ 18 ಕ್ಕೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮುಂಡರಗಿ ತಹಶೀಲ್ದಾರ ವೆಂಕಟೇಶ ನಾಯಕ, ಪುರಸಭೆಯ ಮುಖ್ಯಾಧಿಕಾರಿ ಸತೀಶ ಚವಡಿ ಉಪಸ್ಥಿತರಿದ್ದರು.