ಗದಗ 22: ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಾಲಕರ ಸಭೆಯನ್ನು ದಿ. 20ರಂದು ಆಯೋಜಿಸಲಾಗಿತ್ತು.
ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಂ.ಬಿ ಕೊಳವಿಯವರು ಗದಗಿನ ಅಕ್ಕನ ಬಳಗದ ಆಶಯ ಹಾಗೂ ಗದುಗಿನ ತೋಂಟದಾರ್ಯಮಠದ ಸ್ವಾಮೀಜಿಯವರಾದ ಲಿಂಗೈಕ್ಯ ಡಾ. ಸಿದ್ದಲಿಂಗಶ್ರೀಗಳ ಪ್ರೇರಣೆಯೊಂದಿಗೆ 1985ರಲ್ಲಿ ಮಹಿಳಾ ಮಹಾವಿದ್ಯಾಲಯವಾಗಿ ಸ್ಥಾಪನೆಗೊಂಡು ಇಂದು ಕೆ.ಎಲ್.ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವಾಗಿ ನಡೆದುಬಂದ ದಾರಿ ವಿದ್ಯಾಥರ್ಿಗಳಿಗಿರುವ ಸೌಕರ್ಯಗಳು, ಯೋಜನೆ ಸೌಲಭ್ಯಗಳನ್ನು ಕುರಿತು ಮಾತನಾಡಿದ ಅವರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಾದುದು ಶಿಕ್ಷಕರು ಶಿಕ್ಷಣ ಸಂಸ್ಥೆಯಷ್ಟೇ ಮಹತ್ವದ್ದಾಗಿದೆ ಕಾರಣ ಪಾಲಕರು ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಶಿಕ್ಷಣ ವ್ಯವಸ್ಥೆಯ ತ್ರಿಭುಜಗಳು ಎಂದು ತಿಳಿಸಿದರು.
ಐಕ್ಯೂಎಸಿ ಸಂಯೋಜಕರಾದ ಡಾ.ಎ.ಕೆ ಮಠ ಅವರು ಸಭೆಯನ್ನುದ್ದೇಶಿಸಿ ಮಹಾವಿದ್ಯಾಲಯದಲ್ಲಿ ವಿದ್ಯಾಥರ್ಿಗಳಿಗಾಗಿ ಆಯೋಜಿಸುವ ಪಠ್ಯ-ಪಠ್ಯೇತರ ಮತ್ತು ವೃತ್ತಿ ಮಾರ್ಗದರ್ಶನ ಸಂವಹನ ಕೌಶಲ್ಯಗಳಿಗೆ ಸಂಬಂಧಿಸಿದಂತೆ ಹಾಗೂ ವ್ಯಕ್ತಿತ್ವ ವಿಕಾಸನಕ್ಕೆ ಪೂರಕವಾಗಿ ಆಯೋಜಿಸಲಾಗಿದ್ದ 2018-19 ನೇ ಸಾಲಿನ ಕಾರ್ಯಕ್ರಮಗಳ ವಿವರವಾದ ಮಾಹಿತಿಯ ಪಕ್ಷಿನೋಟವನ್ನು ಛಾಯಾಚಿತ್ರಗಳ ಮೂಲಕ ವಿವರಿಸಿದರು.
ಪಾಲಕರ ಪರವಾಗಿ ಮಾತನಾಡಿದ ಮುತ್ತಣ್ಣ ಬಡಿಗೇರ ಇವರು ಕೆ.ಎಲ್.ಇ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥರ್ಿಗಳ ಪಾಲಕರಾಗಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಇಲ್ಲಿ ನುರಿತ ಶಿಕ್ಷಕರಿಂದ ಬೋಧನೆ ಗುಣಮಟ್ಟದ ಶಿಕ್ಷಣ, ಗಣಕೀಕೃತ ಮತ್ತು ಅತ್ಯುತ್ತಮ ಗ್ರಂಥಾಲಯ ಸೌಲಭ್ಯ, ವಿದ್ಯಾಥರ್ಿನಿಯರಿಗಾಗಿಯೇ ಪ್ರತ್ಯೇಕ ಕೊಠಡಿ, ಕುಡಿಯುವ ಶುದ್ಧ ನೀರಿನ ವ್ಯವಸ್ಥೆ, ದೈಹಿಕ ಬೌದ್ಧಿಕ ಶಾರೀರಿಕ ಸದೃಢತೆಗಳಾಗಿ ಜಿಮ್ ಸೌಲಭ್ಯ ಹೀಗೆ ಹತ್ತು-ಹಲವು ವೈಶಿಷ್ಟ ಅನುಕೂಲಗಳನ್ನು ಹೊಂದಿರುವ ಈ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣಕ್ಕಾಗಿ ಪ್ರವೇಶ ಪಡೆದಿರುವುದು ನಮ್ಮ ಮಕ್ಕಳ ಪುಣ್ಯವೇ ಸರಿ ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಪಾಲಕರಾದ ದೇಮ್ಮನವರು ಮಕ್ಕಳು ತಮಗಾಗಿ ತಮ್ಮ ಪಾಲಕರು ಪಡುವ ಕಷ್ಟ ಪರಿಶ್ರಮಗಳನ್ನು ಸರಿಯಾಗಿ ಅಥರ್ೈಸಿಕೊಳ್ಳಬೇಕು. ಈ ಮಹಾವಿದ್ಯಾಲಯದಲ್ಲಿ ಕಲ್ಪಿಸಿದ ಎಲ್ಲ ಸೌಕರ್ಯಗಳ ಸದುಪಯೋಗ ಪಡೆದು ತಂದೆ-ತಾಯಿಗಳ ಶ್ರಮವೂ ಸಾರ್ಥಕವಾಗುವಂತೆ ಪ್ರಯತ್ನಿಸಿ ತಮ್ಮ ಗುರಿಯನ್ನು ಸಾಧಿಸಿ ಯಶಸ್ಸನ್ನು ತರುವಂತಾದರೆ ಸಂಸ್ಥೆಗೆ ಹಾಗೂ ಪಾಲಕರಿಗೆ ಆಗುವ ಸಂತೋಷ ಮತ್ತೊಂದಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿ.ಕಾಂ ಪದವಿಯಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿ ಭಾಷಾ ನದಾಫ್ ತಮ್ಮ ಅನಿಸಿಕೆಗಳಲ್ಲಿ ಈ ಮಹಾವಿದ್ಯಾಲಯದಲ್ಲಿ ಎಲ್ಲ ಸೌಕರ್ಯಗಳು ಇವೆ ಅದನ್ನು ಸರಿಯಾಗಿ ಬಳಸಿಕೊಂಡು ಬದ್ಧತೆಯಿಂದ ಕಠಿಣ ಪರಿಶ್ರಮ ಪ್ರಯತ್ನ ಮಾಡಿದರೆ ಸಾಧನೆ ಸಿದ್ಧ ಎಂದು ಹೇಳಿದರು. ಬಿ.ಎ ಪದವಿಯಲ್ಲಿ ಸಾಧನೆ ಗೈದ ಅಜರುದ್ದಿನ್ ಇಲ್ಲಿ ಉತ್ತಮ ಗ್ರಂಥಾಲಯ ಸೌಲಭ್ಯವಿದ್ದು ಪ್ರತಿಯೊಬ್ಬ ವಿದ್ಯಾಥರ್ಿಯ ಕಾಳಜಿ ವಹಿಸುವ ಅನುಭವಿ ಶಿಕ್ಷಕರಿದ್ದು ಅವರಿಂದ ಉತ್ತಮ ಮಾರ್ಗದರ್ಶನ ಪಡೆದು ಆರಂಭದಿಂದಲೇ ನಿರಂತರ ಪರಿಶ್ರಮ ಮಾಡುತ್ತಾ ಬಂದರೆ ಯಶಸ್ಸು ಪಡೆಯುವಲ್ಲಿ ಸಂಶಯವೇ ಇಲ್ಲವೆಂದು ತಿಳಿಸಿದರು. ಸಣ್ಣ ಸಣ್ಣ ಪ್ರಯತ್ನ, ಕಠಿಣ ಪರಿಶ್ರಮ ಬದ್ಧತೆಗಳೇ ಸಾಧನೆಯ ಕೀಲಿ ಕೈ ಎಂದು ಇವರುಗಳು ಅಭಿಪ್ರಾಯಪಟ್ಟರು. ಪಾಲಕರಾದ ದೇವಮ್ಮ ಪ್ರಾಥರ್ಿಸಿದರು. ಪ್ರೊ. ವೀಣಾ ತಿಲರ್ಾಪುರ ವಂದಿಸಿದರು. ಡಾ.ವೀಣಾ.ಇ. ಕಾರ್ಯಕ್ರಮ ನಿರೂಪಿಸಿದರು.