ಹಿರಣ್ಯಕೇಶಿ ನದಿಗೆ ಶಾಸಕ ಉಮೇಶ ಕತ್ತಿ ಗಂಗಾಪೂಜೆ



ಲೋಕದರ್ಶನ ವರದಿ 

ಸಂಕೇಶ್ವರ : ರಾಜ್ಯ ಗಡಿ ಹಾಗೂ ಮಹಾರಾಷ್ಟ್ರ ಕೊಂಕಣ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ಹಿರಣ್ಯಕೇಶಿ ನದಿಗೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ರೈತರ ಹಾಗೂ ಜನಸಾಮಾನ್ಯರ ಮುಖದ ಮೇಲೆ ಹರ್ಷ ಕಂಡು ಬಂದಿದೆ.

ಮೈದುಂಬಿ ಹರಿಯುತ್ತಿರುವ ಹಿರಣ್ಯಕೇಶಿ ನದಿಗೆ ಸೋಮವಾರ ದಿನದಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರು ನಗರದ  ಶಂಕರಾಚಾರ್ಯ ಮಠದ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಗಂಗಾಪೂಜೆ ನೆರವೇರಿಸಿ, ಬಾಗೀನ ಅಪರ್ಿಸಿದರು. 

ಈ ಸಮಾರಂಭದಲ್ಲಿ ಪುರಸಭಾಧ್ಯಕ್ಷೆ ಧನಶ್ರೀ ಕೋಳೇಕರ, ಉಪಾಧ್ಯಕ್ಷ ಅಪ್ಪಾಸಾಬ ಹೆದ್ದೂರಶೆಟ್ಟಿ, ಹಿರಾಶುಗರ ಚೇರಮನ್ ಅಪ್ಪಾಸಾಹೇಬ ಶಿರಕೋಳಿ, ರಾಜೇಂದ್ರ ಪಾಟೀಲ, ಸುನೀಲ ಪರ್ವತರಾವ, ಸಂಜಯ ಶಿರಕೋಳಿ, ಬಿಜೆಪಿ ಅಧ್ಯಕ್ಷ ಪರಗೌಡ ಪಾಟೀಲ, ಸತ್ಯಪ್ಪಾ ನಾಯಿಕ, ರಮೇಶ ಕುಲಕಣಿ, ಶಿವಶಂಕರ ಢಂಗ, ಬಸವರಾಜ ಬಾಗಲಕೋಟಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. 


(ಪೋಟೋ)-30-ಎಸ್.ಎನ್.ಕೆ-1- ಸಂಕೇಶ್ವರ : ಶಂಕರಲಿಂಗ ಮಠದ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಸಾನಿಧ್ಯದಲ್ಲಿ ಶಾಸಕ ಉಮೇಶ ಕತ್ತಿ ಹಿರಣ್ಯಕೇಶಿ ನದಿಗೆ ಗಂಗಾಪೂಜೆ ನೆರವೇರಿಸುತ್ತಿರುವದು.