ಅಣ್ಣಿಗೇರಿ ಗುರುಗಳ ನಿಧನಕ್ಕೆ ಸಚಿವ ಸಿ.ಸಿ.ಪಾಟೀಲ ತೀವ್ರ ಶೋಕ

ಗದಗ 06: ಸಾವಿರಾರು ವಿದ್ಯಾರ್ಥಿಗಳ ಅವರ ಪಾಲಕರ ಮನದಲ್ಲಿ ಸ್ಥಾನ ಪಡೆದು ಶಿಕ್ಷಕ ವೃತ್ತಿಗೆ ಮುಕುಟಪ್ರಾಯರಾಗಿದ್ದ ಬಿ.ಜಿ.ಅಣ್ಣಿಗೇರಿ ಗುರುಗಳ ನಿಧನ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ವಿದ್ಯಾಥರ್ಿಗಳು, ಪಾಲಕರು, ಶಿಕ್ಷಕರು ಒರ್ವ ಉತ್ತಮ ಶಿಕ್ಷಕ ಮಾರ್ಗದಶರ್ಿಯನ್ನು ಕಳೆದುಕೊಂಡಂತಾಗಿದೆ ಎಂದು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ  ತೀವ್ರ ಶೋಕ ವ್ಯಕ್ತ ಪಡಿಸಿದ್ದಾರೆ.ಯೋಗಾಯೋಗವೆಂಬಂತೆ ಶಿಕ್ಷಕರ ದಿನಾಚರಣೆ ದಿನವೇ ನಿಧನರಾದ ಅಣ್ಣಿಗೇರಿ ಗುರುಗಳ ಜೀವನ ಅವರ ಶಿಕ್ಷಣ ಕುರಿತ ಪ್ರೀತಿ, ಶ್ರದ್ಧೆ ಎಲ್ಲರಿಗೂ ಮಾದರಿ ಎಂದು ಸಚಿವ ಪಾಟೀಲ ತಿಳಿಸಿದ್ದಾರೆ. ಜಿಲ್ಲಾಮಟ್ಟದ ಶಿಕ್ಷಕ ದಿನಾಚರಣೆ ನಂತರ ಗುರವಾರ ಗದುಗಿನಲ್ಲಿ ಅನಾರೋಗ್ಯ ದಿಂದ ಬಳಲುತಿದ್ದ ಅಣ್ಣಿಗೇರಿ ಗುರುಗಳನ್ನು ಸಚಿವ ಸಿ.ಸಿ.ಪಾಟೀಲ ಭೇಟಿಯಾಗಿದ್ದರು.