ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ದೆಹಲಿಯಲ್ಲಿ ಗುರುವಾರ ಮಾಜಿ ಪ್ರಧಾನಿ ಡಾ. ಮನ ಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಡಾ. ಸಿಂಗ್ ಅವರ ನಿವಾಸಕ್ಕೆ ತೆರಳಿದ ನಿರ್ಮಲಾ ಸೀತರಾಮನ್ ಕೆಲ ಕಾಲ ಮಾತುಕತೆ ನಡೆಸಿದರು.
ಡಾ. ಮನಮೋಹನ್ ಸಿಂಗ್ ಅಂತರರಾಷ್ಟ್ರೀಯ ಆರ್ಥಿಕ ತಜ್ಞರಾಗಿದ್ದು , 1991ರಲ್ಲಿ ಅಂದಿನ ಪ್ರಧಾನಿ ಪಿವಿ ನರಸಿಂಹರಾವ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು ಅಲ್ಲದೆ ದೇಶದ ಆರ್ಥವ್ಯವಸ್ಥೆಯನ್ನು ಉದಾರೀಕರಣಕ್ಕೆ ಮುಕ್ತಗೊಳಿಸಿದ್ದ ಪ್ರಮುಖ ವ್ಯಕ್ತಿಯಾಗಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಎನ್ ಡಿ ಎ ಸಕರ್ಾರ ಜುಲೈ 5 ರಂದು 2019-2020 ಸಾಲಿನ ಹಣಕಾಸು ಬಜೆಟ್ ಮಂಡಿಸಲಿದ್ದಾರೆ. ಕಳೆದ ಫೆಬ್ರವರಿ 1 ರಂದು ಸಕರ್ಾರ ಮಧ್ಯಂತರ ಬಜೆಟ್ ಮಂಡಿಸಿ ಹೊಸ ಸರಕಾರ ಅಧಿಕಾರ ವಹಿಸಿಕೊಳ್ಳುವವರೆಗಿನ ವೆಚ್ಚಗಳಿಗೆ ಸಂಸತ್ತಿನ ಅನುಮೋದನೆ ಪಡೆದುಕೊಂಡಿತ್ತು. ಅಭೂತ ಪೂರ್ವ ಗೆಲುವಿನೊಂದಿಗೆ ಸತತ ಎರಡನೇ ಬಾರಿ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಜುಲೈ 5ಕ್ಕೆ ಬಜೆಟ್ ಮಂಡಿಸಲಿದೆ.
ಎನ್ಡಿಎ-2 ಸರ್ಕಾರದ ಮೊದಲ ಬಜೆಟ್ ಆಗಿದೆ. ಇಂದಿರಾ ಗಾಂಧಿ ನಂತರ ದೇಶದ ಮೊದಲ ಮಹಿಳಾ ಹಣಕಾಸು ಸಚಿವೆಯಾದ ಗೌರವಕ್ಕೆ ಪಾತ್ರರಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೂ ಇದು ಮೊದಲ ಬಜೆಟ್ ಆಗಿದೆ. ಜುಲೈ 4ರಂದು ಲೋಕಸಭೆಯಲ್ಲಿ ದೇಶದ ಆರ್ಥಿಕ ಸ್ಥಿತಿ ವಿವರಿಸುವ ಆರ್ಥಿಕ ಸಮೀಕ್ಷೆಯ ವರದಿಯನ್ನು ಮಂಡಿಸಲಾಗುತ್ತದೆ. ಚುನಾವಣೆಗೆ ಮುನ್ನ ಫೆಬ್ರವರಿ 1 ರಂದು ಪಿಯೂಶ್ ಗೋಯೆಲ್ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದರು. ಅದರಲ್ಲಿ ಘೋಷಿಸಲಾಗಿದ್ದ ಬಹುತೇಕ ಅಂಶಗಳನ್ನ ನಿರ್ಮಲಾ ಸೀತಾರಾಮನ್ ಅವರು ಮುಂದುವರಿಸುವ ನಿರೀಕ್ಷೆ ಇದೆ. ಜಿಡಿಪಿ ಕುಸಿತ ಹಾಗೂ ನಿರುದ್ಯೋಗ ಸಮಸ್ಯೆಯಿಂದ ದೇಶದ ಆರ್ಥಿಕಕತೆ ಬಳಲುತ್ತಿರುವ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರ ಮುಂದೆ ಪ್ರಬಲ ಸವಾಲುಗಳಿವೆ. ಆಥರ್ಿಕ ಪ್ರಗತಿಯ ವೇಗ ವೃದ್ಧಿಗೆ ಪುಷ್ಟಿ ಕೊಡುವ ಯೋಜನೆಗಳನ್ನು ಮತ್ತು ಕ್ರಮಗಳನ್ನು ನಿರ್ಮಲಾ ಸೀತಾರಾಮನ್ ತೆಗೆದುಕೊಳ್ಳುವರೇ ಎಂಬುದನ್ನು ಕಾದುನೋಡಬೇಕಿದೆ. ಅರ್ಥಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿರುವ ನಿರ್ಮಲಾ ಸೀತಾರಾಮನ್ ಅವರು ಹಿಂದಿನ ಸರ್ಕಾರದಲ್ಲಿ ರಕ್ಷಣಾ ಖಾತೆ ನಿಭಾಯಿಸಿದ್ದರು. ಈ ಬಾರಿ ದೇಶದ ಆಥರ್ಿಕ ಅಭಿವೃದ್ಧಿಗೆ ಆಧಾರವಾಗಿರುವ ಹಣಕಾಸು ಖಾತೆಯ ಹೊಣೆ ಅವರ ಹೆಗಲಿಗೇರಿದೆ. ಹಿಂದಿನ ಸರಕಾರದಲ್ಲಿ ಅರುಣ್ ಜೇಟ್ಲಿ ಅವರು ಹಣಕಾಸು ಸಚಿವರಾಗಿದ್ದರು. ಅನಾರೋಗ್ಯದ ಕಾರಣ ಜೇಟ್ಲಿ ಅವರು ಸಂಪುಟದಿಂದ ಹೊರಗುಳಿದಿದ್ದಾರೆ.