ಮೋದಿಯವರಿಂದ ವಿಶ್ವಕ್ಕೆ ಮಾದರಿ ಸರ್ಕಾರ : ಶಾಸಕ ವಿರೂಪಾಕ್ಷಪ್ಪ

ಲೋಕದರ್ಶನವರದಿ

ಬ್ಯಾಡಗಿ೨೧: ಕೊರೊನಾದಂತಹ ಆಥರ್ಿಕ ಸಂಕಷ್ಟ ಚೀನಾದೊಡನೆ ಯುದ್ಧ ಭೀತಿ ಇಂತಹ ಸಂಕಷ್ಟಗಳ ನಡುವೆಯೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಮೂಲಕ ಇಡೀ ವಿಶ್ವಕ್ಕೆ ಒಂದು ಮಾದರಿ ಸಕರ್ಾರ ನೀಡುವ ಉದ್ದೇಶ ಹೊಂದಿರುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

 ಪಟ್ಟಣದಲ್ಲಿ ಅಂದಾಜು 4 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿಮರ್ಿಸಲಾಗುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೂಮಿಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

 ಕೋವಿಡ್-19 (ಕೊರೊನಾ) ಮಹಾಮಾರಿ ನೆರೆಯ ರಾಷ್ಟ್ರಗಳಿಂದ ಯದ್ಧ ಭೀತಿ ಸೇರಿದಂತೆ ಪ್ರಕೃತಿ ವಿಕೋಪ ಇನ್ನಿ ತರ ವಿಪತ್ತುಗಳ ನಡುವೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿರಬಹುದು ಆದಾಗ್ಯೂ ಸಹ ಸಾರ್ವಜನಿಕರಿಗೆ ಮೂಲ ಸೌಕರ್ಯಗಳು ಕೊರತೆಯಾಗದಂತೆ ನೋಡಿಕೊಳ್ಳಲು ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಿಎಸ್ವೈ ನೇತೃತ್ವದ ಬಿಜೆಪಿ ಸಕರ್ಾರ ಪಣತೊಟ್ಟು ನಿಂತಿದೆ ಎಂದರು.

ಜನರ ಸಹಕಾರ ಬೇಕು: ಕೆಲವರ ಪ್ರಚೋದನೆಯಿಂದ ದೇಶದ ಕೆಲವೊಂದು ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ, ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನವೇ ದೇಶ ಸಾಲದಲ್ಲಿ ಸುಳಿಯಲ್ಲಿ ಸಿಲುಕಿಕೊಂಡು ಆಥರ್ಿಕ ಸಂಕಷ್ಟವನ್ನು ಎದುರಿ ಸುತ್ತಿದ್ದು ಇದರಿಂದ ಹೊರ ಬರಲು ಇನ್ನೂ ಕನಿಷ್ಟ 10 ವರ್ಷಗಳು ಬೇಕಾಗಿದ್ದು ಸಾರ್ವಜನಿಕರು ಇದನ್ನು ಅಥರ್ೈಸಿ ಕೊಂಡು ನಮ್ಮಗಳ ಜೊತೆ ಕೈಜೋಡಿಸುವಂತೆ ಮನವಿ ಮಾಡಿದರು.

 ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಸುಮಂಗಲ ಪಟ್ಟಣಶೆಟ್ಟಿ, ತಾಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಮಾಜಿ ಅಧ್ಯಕ್ಷ ರವೀಂದ್ರ ಪಟ್ಟಣಶೆಟ್ಟಿ, ಪುರಸಭೆ ಸದಸ್ಯರಾದ ಬಸವರಾಜ ಛತ್ರದ, ಮೆಹಬೂಬ ಅಗನಸಹಳ್ಳಿ, ಸರೋಜಾ ಉಳ್ಳಾಗಡ್ಡಿ, ಚಂದ್ರಣ್ಣ ಶೆಟ್ಟರ, ಮುಖಂಡರಾದ ಶಂಕ್ರಣ್ಣ ಮಾತನವರ, ವಿರೇಂದ್ರ ಶೆಟ್ಟರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ.ರುದ್ರಮುನಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಅಭಿಪ್ರಾಯ ವ್ಯಕ್ತಪಡಿಸಿದರು.