ಮೋಕ್ಷವು ಮಾರುಕಟ್ಟೆಯಲ್ಲಿ ಸಿಗುವಂತಹ ವಸ್ತುವಲ್ಲ: ಶಿವಯೋಗಿಶ್ರೀ

ಲೋಕದರ್ಶನವರದಿ

ರಾಣೇಬೆನ್ನೂರು೧೭:  ಮೋಕ್ಷವು ಮನಸ್ಸು ಮತ್ತು ಅಂತರಾತ್ಮಕ್ಕೆ ಸಂಬಂಧಿಸಿದ್ದಾಗಿದೆ.  ಈ ಮೋಕ್ಷವು ಮಾರುಕಟ್ಟೆಯಲ್ಲಿ ಸಿಗುವಂತಹ ವಸ್ತುವಲ್ಲ.  ಮೋಕ್ಷಕ್ಕೆ ತನ್ನದೇ ಆದ ಮಹತ್ವ ಮತ್ತು ವೈಶಿಷ್ಠ್ಯತೆ ಇದೆ.  ಈ ಭೂಮಿ ಮೇಲೆ ಜನ್ಮತಾಳಿದ ಮನುಷ್ಯ ಒಂದಿಲ್ಲೊಂದು ರೀತಿಯಲ್ಲಿ ಮೋಕ್ಷ ಹೊಂದಿದಾಗ ಮಾತ್ರ ಆತನ ಜೀವನ ಸಾರ್ಥಕವಾಗಲು ಕಾರಣವಾಗುತ್ತದೆ ಎಂದು ಸ್ಥಳೀಯ ಹಿರೇಮಠದ ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

ರವಿವಾರ ಅವರು ಇಲ್ಲಿನ ಶನೈಶ್ಚರ ಮಂದಿರದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿರುವ 7ನೇ ವರ್ಷದ ತಿಲಲಕ್ಷದೀಪೋತ್ಸವದ ಪ್ರವಚನ ಕಾರ್ಯಕ್ರಮದ 2ನೇ ದಿನದಂದು ಪ್ರವಚನ ಮಾಡಿ ಮಾತನಾಡಿದರು.  ಮೋಕ್ಷವು ಮನುಷ್ಯನನ್ನು ಉತ್ತಮ ನಾಗರೀಕನನ್ನಾಗಿ ಮಾಡಬಹುದು.  ಇಲ್ಲವೇ ದುಷ್ಠನನ್ನಾಗಿಯೂ ಸಹ ಮಾಡುವ ಗುರಿ ಈ ಮೋಕ್ಷಕ್ಕೆ ಇದೆ ಎಂದರು. 

ಮೋಕ್ಷವು ಮನುಜ, ಭಕ್ತ, ಮಹೇಶ, ಪ್ರಸಾದಿ, ಶರಣ, ಪ್ರಾಣಲಿಂಗವಾಗುತ್ತದೆ.  ಮನುಷ್ಯನಲ್ಲಿ ಅಡಗಿರುವ ಮನಸ್ಸಿನಿಂದ ಒಳ್ಳೆಯ ಅಥವಾ ಕೆಟ್ಟ ಆಲೋಚನೆಗಳನ್ನು ಸಹ ಈ ಮನಸ್ಸು ಮಾಡಿಸುತ್ತದೆ.  ಮನಸ್ಸು ಉತ್ತಮ ವ್ಯಕ್ತಿತ್ವ ರೂಪಿಸುವುದರ ಜೊತೆಗೆ ಮನುಷ್ಯನನ್ನು ಸತ್ಪ್ರಜೆಯನ್ನಾಗಿ ಮಾಡುತ್ತದೆ.  ಈ ಕಾರಣದಿಂದ ಮನಸ್ಸನ್ನು ಸದಾ ಶುದ್ಧ ಹಾಗೂ ನಿಷ್ಕಲ್ಮಶವನ್ನಾಗಿ ಇಟ್ಟುಕೊಳ್ಳುವ ಗುರುತರವಾದ ಜವಾಬ್ದಾರಿ ಮನುಷ್ಯನಲ್ಲಿ ಅಡಗಿರುತ್ತದೆ ಎಂದರು. 

ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಅಡಗಿರುವ ತತ್ವ ಸಿದ್ಧಾಂತಗಳನ್ನು ಬಸವಣ್ಣನವರು ಸೇರಿದಂತೆ ಶರಣ-ಶರಣಿಯರು, ಹರ-ಗುರು-ಚರಮೂತರ್ಿಗಳು ಈಗಲೂ ಸಹ ಧಮರ್ಾಚರಣೆಯಲ್ಲಿ ಆಚರಿಸುತ್ತಾ ಬರುತ್ತಿದ್ದಾರೆ.   ಅಂತಹ ಸಿದ್ಧಾಂತ ಶಿಖಾಮಣಿಯಲ್ಲಿನ ಸ್ತೋತ್ರಗಳನ್ನು, ತತ್ವಗಳನ್ನು ಜೀವನದುದ್ದಕ್ಕೂ ಮನುಜನು ಪಾಲಿಸಿಕೊಂಡು ಮುನ್ನಡೆದರೆ, ಆತನ ಜೀವನ ಬದುಕಿನುದ್ದಕ್ಕೂ ಪಾವನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. 

ಆಧುನಿಕತೆಯ ಇಂದಿನ ದಿನಮಾನಗಳಲ್ಲಿ ಮೊಬೈಲ್ನ ಹುಚ್ಚು ಯುವಕ-ಯುವತಿಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.  ವ್ಯಾಟ್ಸ್ಪ್, ಫೇಸ್ಬುಕ್ ನಿಂದ ಇತರರಿಗೆ ಒಳ್ಳೆಯದು ಆಗಿದ್ದು ಉದಾಹರಣೆ ಅತೀ ಕಡಿಮೆ.  ಇದರಿಂದ ದುರುಪಯೋಗ, ಸಂಸಾರ ಹಾಳಾಗಲು ಮತ್ತು ಜೀವನ ಕೆಡಲು ಬಹಳಷ್ಟು ಕಾರಣವಾಗಿದೆ.  ಮೊಬೈಲ್ನ್ನು ಎಷ್ಟು ಬೇಕು ಅಷ್ಟು ಮಾತ್ರ ಬಳಸಲು ಜನರು ಮುಂದಾಗಬೇಕಾಗಿದೆ ಎಂದರು.   

ಒಳ್ಳೆಯ ಮತ್ತು ಕೆಡುಕಿಗೆ ಕಾರಣವಾಗುವ  ಮೊಬೈಲ್ನಿಂದ ಮಕ್ಕಳನ್ನು ದೂರವಿಡುವುದರ ಜೊತೆಗೆ ಉತ್ತಮ ಪುಸ್ತಕ ಮತ್ತು ಧಾಮರ್ಿಕತೆಯನ್ನು ಭೋಧಿಸುವುದು ಅವಶ್ಯಕವಾಗಿದೆ ಎಂದರು.  ಬಸವರಾಜ ಸವಣೂರ, ಗಿರಿಜಾದೇವಿ ದುರ್ಗದಮಠ, ಕೃಷ್ಣಮೂತರ್ಿ ಲಮಾಣಿ, ಪುಷ್ಪಾ ಬದಾಮಿ, ಪುನೀತ್ ಶಾಸ್ತ್ರೀ ಸೇರಿದಂತೆ ಶಾಸ್ತ್ರೀಗಳು, ವಟುಗಳು, ಭಕ್ತರು ಉಪಸ್ಥಿತರಿದ್ದರು.  ಅನಂತರ ಸಂಗೀತ ಸುಧೆ ಕಾರ್ಯಕ್ರಮ ಜರುಗಿತು.