ಕುಕನೂರ 07: ತಾಲೂಕಿನ ನೆಲಜೇರಿ ಗ್ರಾಮ ಪಂಚಾಯತಿ ವಟಪರ್ವಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಸ್ತ್ರೀ ಚೇತನ, ದುಡಿಯೋಣ ಬಾ ಹಾಗೂ ರೋಜಗಾರ ದಿನಾಚರಣೆ ಆಚರಿಸಿ ಕೂಲಿಕಾರರಿಗೆ ನಿರಂತರ ಕೆಲಸ ನೀಡಲು ನೆಲಜೇರಿ ಗ್ರಾಮದಲ್ಲಿ ಕೂಲಿಕಾರರಿಗೆ ಮಾಹಿತಿ ನೀಡಲಾಯಿತು.
ಸ್ತ್ರೀ ಚೇತನ ಕಾರ್ಯಕ್ರಮದಡಿಯಲ್ಲಿ ಮಹಿಳಾ ಕುಲಿಕಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ನೀಡುತ್ತಿದ್ದು ಮಹಿಳಾ ಕೂಲಿಕಾರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಹೇಳಿದರು. ನಂತರ ತಾಂತ್ರಿಕ ಸಂಯೋಜಕ ಸುರೇಶ್ ದೇಸಾಯಿ ಮಾತನಾಡಿ ಮೇ-1 ರಿಂದ ಕೂಲಿಕಾರರಿಗೆ ಅನುಕೂಲವಾಗಲಿ ಎಂದು ದುಡಿಯೋಣ ಬಾ ಅಭಿಯಾನ ಆರಂಭವಾಗಿದ್ದು ಕೂಲಿಕಾರರು ಪ್ರತಿದಿನ ನಿಗದಿತ ಅಳತೆ ಕೆಲಸ ನಿರ್ವಹಿಸಿ ರೂ.370 ಕೂಲಿ ಪಡೆದುಕೊಳ್ಳಿ ಎಂದರು.ಸ್ಥಳದಲ್ಲಿ ತಾಂತ್ರಿಕ ಸಹಾಯಕ ಮಂಜುನಾಥ ಮೇಟಿ, ಹುಸೇನ್ ಪಾಷಾ, ಗ್ರಾಮ ಕಾಯಕ ಮಿತ್ರರಾದ ಲಲಿತಾ, ಕಾಯಕ ಬಂಧುಗಳು ಹಾಜರಿದ್ದರು.