ವಿದ್ಯಾಥರ್ಿಗಳಿಗೆ ಸೈಕಲ್ ವಿತರಣೆ

ಶಾಲಾ ವಿದ್ಯಾಥರ್ಿಗಳಿಗೆ ಸೈಕಲ್ ವಿತರಿಸುವಾಗ ಮಲ್ಲಿಕಾಜರ್ುನ ಕೋರೆ ಹಾಗೂ ಇನ್ನಿತರರು.

ಮಾಂಜರಿ 02:  ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ  ಕೆ.ಎಲ್.ಇ. ಸಂಸ್ಥೆಯ  ಶಾರದಾದೇವಿ ಕೋರೆ ಪ್ರೌಢಶಾಲೆಯ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಮಲ್ಲಿಕಾಜರ್ುನ ಕೋರೆಯವರು ಕನರ್ಾಟಕ ಸರಕಾರದಿಂದ ವಿದ್ಯಾಥರ್ಿಗಳಿಗೆ ಕೊಡಮಾಡಿದ ಸೈಕಲ್ಲುಗಳನ್ನು ವಿತರಿಸಿ -"ಮಕ್ಕಳ ಓದಿಗೆ ಪೂರಕವಾಗುವ ಸೈಕಲ್ ವಿತರಣೆ ಸರಕಾರದ ಶ್ಲಾಘನೀಯ ಸೇವೆಯೆಂದು ಬಣ್ಣಿಸಿ, ಮಕ್ಕಳು ಇದರ ನಿಜವಾದ ಸದುಪಯೋಗ ಪಡೆದುಕೊಳ್ಳಬೇಕೆಂದು" ಮಾತನಾಡಿದರು. ಉಪಸ್ಥಿತ ಉಪಪ್ರಾಚಾರ್ಯ ಸಿ ಬಿ ಚೌಗುಲೆ "ದೂರದಿಂದ ಶಾಲೆಗೆ ಬರುವ ಮಕ್ಕಳಿಗೆ ಸೈಕಲ್ ಬಹು ಪ್ರಯೋಜನಕಾರಿ; ಇದನ್ನು ಪಡೆದ ವಿದ್ಯಾಥರ್ಿಗಳ ಓದು ಚೆನ್ನಾಗಿ ಸಾಗಬೇಕೆಂದು" ಅಭಿಪ್ರಾಯಬಿಟ್ಟರು. ಹಿರಿಯ ಶಿಕ್ಷಕರಾದ ಕೆ. ಬಿ. ಶಿಂದೆ, ವ್ಹಿ. ಡಿ. ನಾಯಿಕ, ಎಸ್. ಆರ್. ಮಾನೆ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪ್ರಯೋಜನ ಪಡೆಯುವ ವಿದ್ಯಾಥರ್ಿಗಳು, ಪಾಲಕರು ಭಾಗಿಯಾಗಿದ್ದರು. ಸರಕಾರದ ಈ ಸೇವೆ ನಿಜವಾಗಿಯೂ ಅಭಿನಂದನೀಯವೆಂಬುದು ಪಾಲಕರ ಆಶಯ.