ಲೋಕದರ್ಶನ ವರದಿ
ಬೆಳಗಾವಿ.1 : ಬೆಳಗಾವಿಯ ಹಿಂದವಾಡಿಯಲ್ಲಿನ ಜೈನ ಬಸದಿಯ ನೂತನೀಕರಣ ಮತ್ತು ಶ್ರೀ 1008 ಚಂದ್ರಪ್ರಬ, ಆದಿನಾಥ ಹಾಗೂ 24 ತೀಥಂಕರರ ಪಂಚಕಲ್ಯಾಣ ಮಹಾ ಮಹೋತ್ಸವದ ಮೂರನೆಯ ದಿನವಾದ ಮಂಗಳವಾರದಂದು ಮಕ್ಕಳಿಗೆ ಮೌಂಜಿ ಬಂಧನ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಧಮರ್ೊಪದೇಶ ಮತ್ತು ವೃತಗಳ ಪಾಲನೆಯ ಬಗ್ಗೆ ತಿಳುವಳಿಕೆ ನೀಡಲಾಯಿತು.
ಪಂಚಕಲ್ಯಾಣ ಮಹಾಮಹೋತ್ದದ ಸಾನಿಧ್ಯ ವಹಿಸಿದ್ದ ಆಚಾರ್ಯ ಶ್ರೀ ಧರ್ಮಸೇನ ಮುನಿ ಮಹಾರಾಜರು ಮಕ್ಕಳಿಗೆ ಧಮರ್ೊಪದೇಶ ಮಾಡಿದರು. ಜೈನ ಧರ್ಮ ಆಚರಣೆಯಲ್ಲಿ ಎಲ್ಲರೂ ಪ್ರತಿ ದಿನ ತೀರ್ಥಂಕರರ ದರ್ಶನ ಪಡೆಯಬೇಕು. ಜೀವನದಲ್ಲಿ ಮದ್ಯ, ಮಾಂಸ ಮೊಟ್ಟೆ ಸೇವಿಸಬಾರದು, ಕಂದಮೂಲಗಳನ್ಬು ಸೇವಿಸಬಾರದು. ಜೇನುತುಪ್ಪ, ಹತ್ತಿ ಹಣ್ಣು ಸೇವಿಸಬಾರದು.ನಿತ್ಯದ ವ್ಯವಹಾರದಲ್ಲಿ ಸತ್ಯ ವಚನವನ್ನು ನುಡಿಯಬೆಕು. ಯಾರಿಗೂ ಕೇಡು ಬಯಸಬಾರದು ಎಂದು ತಿಳಿಸಿದ ಅವರು , ಮುನಿಗಳು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮುನಿಗಳಿಗೆ ಆಹಾರ ನೀಡಬೇಕು ಎಂದು ಶ್ರೀಗಳು ಉಪದೇಶ ನೀಡಿದರು.
ಅದಲ್ಲದೆ ಮಂಗಲವಾದ್ಯ , ಮಂಗಲ ಕುಂಭಾನಯನ, ನಿತ್ಯ ವಿಧಿ, ಪಂಚಾಮೃತ ಅಭಿಷೇಕ , ಶಾಂತಿ ಮಂತ್ರ, ತಪ ಕಲ್ಯಾಣ, ಧರ್ಮ ಸಭಾ, ಪ್ರವಚನ ಸವಾಲು, ಕಾರ್ಯಕ್ರಮಗಳು ನಡೆದವು.
ಅದರಂತೆ ಸೋಮವಾರ ಸಾಯಂಕಾಲ ಪಾಂಡುಕಶಿಲೆ ಮೆರವಣಿಗೆ, ಪಾಂಡುಕಶಿಲೆ ಮೆಲೆ ಜನ್ಮಾಭೀಷೇಕ, ಸಂಗೀತಾರತಿ, ಜಾಪ್ಯ, ನಾಮಕರಣ ಸಮಾರಂಭ, ಬಾಲಕ್ರೀಡಾ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶ್ರೀ 108 ಆಚಾರ್ಯ ಧರ್ಮಸೇನ ಮತ್ತು ಶ್ರೀ 105 ಕ್ಷುಲ್ಲಕ ಚಂದ್ರಸೇನ ಮಹಾರಾಜರ ಸಾನಿಧ್ಯದಲ್ಲಿ ಹಾಗೂ ಪ್ರತಿಷ್ಠಾಚಾರ್ಯ ಪಂಡಿತ ವೃಷಭಸೇನ ಉಪಾಧ್ಯೆ , ಸಹ ಪ್ರತಿಷ್ಠಾಚಾರ್ಯ ಪಂಡಿತ ಪಾರೀಸ ಉಪಾಧ್ಯೆ,ಪಂಡಿತ ಸಂಜೀವ ಉಪಾಧ್ಯೆ ಮತ್ತು ಉದಯಕುಮಾರ್ ಉಪಾಧ್ಯೆ ಇವರ ಮಾರ್ಗದರ್ಶನದಲ್ಲಿ ಧಾಮರ್ಿಕ ಕಾರ್ಯಕ್ರಮ ನಡೆದವು.
ಈ ಸಂದರ್ಭದಲ್ಲಿ ಸೌಧರ್ಮ ಇಂದ್ರ-ಇಂದ್ರಾಣಿ ಸೌ ಸವಿತಾ ಮತ್ತು ಅಜರ್ುನ ಭಾಗಣ್ಣವರ, ಈಶಾನ್ಯ ಇಂದ್ರ-ಇಂದ್ರಾಣಿ ಸೌ ಪ್ರಮಿಳಾ ಮತ್ತು ಅಪ್ಪಾಸಾಹೇಬ ಕಬ್ಬುರ, ತೀರ್ಥಂಕರ ಮಾತಾ-ಪಿತಾ ಸೌ ಪದ್ಮಜಾ ಮತ್ತು ಶೀತಲಕುಮಾರ ನಿಲಜಗಿ, ಧನಪತಿ ಕುಬೇರ ಸೌ. ಸವಿತಾ ಮತ್ತು ಶ್ರೀಧರ ಪತ್ರಾವಳಿ, ಮಹಾಯಜ್ಞ ನಾಯಕ ಸೌ ಸುಕನ್ಯಾ ಮತ್ತು ಅನಂತರಾಜ ಸೂಜಿ, ಸುವರ್ಣ ಸೌಭಾಗ್ಯವತಿ ಸೌ ರಾಜಶ್ರೀ ಮತ್ತು ಮಹಾವೀರ ಗಣಿ , ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಉದ್ಯಮಿ ಬಾಳಾಸಾಹೇಬ ಪಾಟೀಲ, ಪಂಚಕಲ್ಯಾಣ ಮಹಾ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಮಹಿಳಾ ಮಂಡಳದ ಸದಸ್ಯರು, ಶ್ರಾವಕ - ಶ್ರಾವಕಿಯರು, ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.