ಪೌರಾಣಿಕ, ಧಾಮರ್ಿಕ ನಾಟಕ ಪ್ರದರ್ಶನ ಕಷ್ಟಕರ : ಗುರುಸಿದ್ಧ ಶ್ರೀಗಳು

ಲೋಕದರ್ಶನ ವರದಿ

ಬೆಳಗಾವಿ 21. ಪೌರಾಣಿಕ, ಧಾಮರ್ಿಕ ನಾಟಕಗಳನ್ನು ಪ್ರದಶರ್ಿಸುವುದು ಅತ್ಯಂತ ಕಷ್ಟದಾಯಕವಾಗಿದೆ. ಏಕೆಂದರೆ ಅವುಗಳ ಪ್ರದರ್ಶನಕ್ಕೆ ಕೆಲ ಇತಿಮಿತಿಗಳಿರುತ್ತವೆ ಎಂದು ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ನುಡಿದರು. 

ರವಿವಾರ ಪ್ರತಿಭಾ ನಾಟ್ಯ ಮತ್ತು ಸಂಗೀತ ಕೇಂದ್ರ ಬೆಳಗಾವಿ, ರಡ್ಡಿ ಸಂಘ ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಇವರುಗಳ ಸಹಯೋಗದಲ್ಲಿ ಮಹಾಯೋಗಿ ವೇಮನ ಜಯಂತೋತ್ಸವ ಅಂಗವಾಗಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. 

ಪ್ರತಿಭಾ ನಾಟ್ಯ ಸಂಘ ಹಲವಾರು ವರ್ಷಗಳಿಂದ ಸಮಾಜಕ್ಕೆ ಉಪಯುಕ್ತವಾಗುವ ನಾಟಕಗಳನ್ನು ಪ್ರದಶರ್ಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಶ್ರೀಗಳು ಮೆಚ್ಚುಗೆ ಸೂಚಿಸಿದರು.

ಸಾಹಿತಿ ಸಿದ್ಧಣ್ಣ ಲಂಗೋಟಿ ಇವರು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಉತ್ತರ ಭಾರತದಲ್ಲಿ ಸಂತ ಮೀರಾಬಾಯಿ, ಝಾನ್ಸಿರಾಣಿ ಲಕ್ಷ್ಮೀಬಾಯಿ ಖ್ಯಾತಿಗಳಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅಕ್ಕಮಹಾದೇವಿ, ಕಿತ್ತೂರು ಚನ್ನಮ್ಮ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಇವರು ತಮ್ಮದೇ ಆದ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿ ಇಡೀ ಜಗತ್ತಿಗೆ ಆದರ್ಶ ಪ್ರಾಯರಾಗಿದ್ದಾರೆ ಎಂದರು.

55 ವರ್ಷಗಳ ಹಿಂದೆ ತಾವು ವಿದ್ಯಾಥರ್ಿಯಾಗಿದ್ದಾಗ ಹೇಮರಡ್ಡಿ ಮಲ್ಲಮ್ಮ ನಾಟಕ ವಿಜಯಪುರದಲಲ್ಲಿ ವೀಕ್ಷಿಸಿದ್ದನ್ನು ಬಿಟ್ಟರೆ ಸದ್ಯ ಬೆಳಗಾವಿಯಲ್ಲಿ ವೀಕ್ಷಿಸುವುದನ್ನು ಸ್ಮರಿಸಿಕೊಂಡ ಅವರು ನಾಟಕ ಪ್ರದರ್ಶನ ನೀಡುತ್ತಿರುವ ಪ್ರತಿಭಾ ನಾಟ್ಯ ಸಂಘದ ಕಾರ್ಯವನ್ನು ಶ್ಲಾಘಿಸಿದರು.

ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕ.ವಿ.ವಿ.ದ. ವೇಮನ ವಿದ್ಯಾಪೀಠದ ನಿದರ್ೇಶಕ ರಮೇಶ ಜಂಗಲ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶಂಕರ ಅರಕೇರಿ, ಮಾಜಿ ಮಹಾಪೌರ ಸಿದ್ಧನಗೌಡ ಪಾಟೀಲ, ಡಾ. ತಿಮ್ಮಾಪೂರ, ಗ್ರಾಮೀಣ ಬಿ.ಇ.ಓ. ಲೀಲಾವತಿ ಹಿರೇಮಠ, ಬಿ.ಬಿ. ದಾಸೋಗ, ಪತ್ರಕರ್ತ ಧಾರವಾಡಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ನಾಟ್ಯ ಸಂಘದ ಅಧ್ಯಕ್ಷ ಎಸ್.ಎನ್. ಮುತಾಲಿಕ್ ದೇಸಾಯಿ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾಜರ್ುನ ದೇಶನೂರ ನಿರೂಪಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಭಾರತ ಸರಕಾರದ ಜೈವಿಕ ಇಂಡಿಯಾ ಪ್ರಶಸ್ತಿ ಪುರಸ್ಕೃತ ಹಣಮಂತ ಹಲಕಿ ಹಾಗೂ ಗಣ್ಯರನ್ನು ಸತ್ಕರಿಸಲಾಯಿತು. ನಾಟಕ ವೀಕ್ಷಿಸಲು ಅಸಂಖ್ಯಾತ ಜನರು ಅತ್ಯಂತ ಆಸಕ್ತಿಯಿಂದ ಆಗಮಿಸಿದ್ದರು.