ಇಂದು ಆಯ್ಕೆಯಾದ ನೂತನ ನಿರ್ದೇಶಕರಿಗೆ ನಡಹಳ್ಳಿ ಸನ್ಮಾನ

Nadahalli honor to the new director selected today

ಇಂದು ಆಯ್ಕೆಯಾದ ನೂತನ ನಿರ್ದೇಶಕರಿಗೆ ನಡಹಳ್ಳಿ ಸನ್ಮಾನ  

ತಾಳಿಕೋಟಿ 25: ಪಟ್ಟಣದ ಪ್ರತಿಷ್ಠಿತ ತಾಳಿಕೋಟಿ ಸಹಕಾರಿ ಬ್ಯಾಂಕ್ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಆಯ್ಕೆಯಾದ 13 ಜನ ನೂತನ ನಿರ್ದೇಶಕರಿಗೆ ಮಾಜಿ ಶಾಸಕ ಎ.ಎಸ್‌.ಪಾಟೀಲ (ನಡಹಳ್ಳಿ) ಇವರಿಂದ ಸನ್ಮಾನ ಕಾರ್ಯಕ್ರಮ (ಜ.26) ನಡೆಯಲಿದೆ. ಸಾಯಂಕಾಲ 6:00 ಘಂಟೆಗೆ ಪಟ್ಟಣದ ಶ್ರೀ ವಿಠಲ್ ಮಂದಿರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಾಜಿ ಶಾಸಕ, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ ವಹಿಸುವರು. ನೂತನ ನಿರ್ದೇಶಕರಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದಲೂ ಸನ್ಮಾನ ನಡೆಯಲಿದೆ ಕಾರಣ ಎಲ್ಲ ಅಭಿಮಾನಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದ್ದಾರೆ.