ಲೋಕದರ್ಶನ ವರದಿ
ಕೊಪ್ಪಳ 09: ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆರೋಗ್ಯ ಇಲಾಖೆಯ ನಾಗರಾಜ್ ಜುಮ್ಮನ್ನನವರ್ ಮತ್ತು ಕಂದಾಯ ಇಲಾಖೆಯ ಮಂಜುನಾಥ ಮ್ಯಾಗಳಮನಿ ನಡುವೆ ಜಿದ್ದಾಜಿದ್ದಿ ಸ್ಫರ್ಧೆ ನಡೆದಿದೆ.
ನಾಗರಾಜ್ ಜುಮ್ಮನ್ನನವರ್ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷನಾಗಿ ನಾನು ಆರು ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಹೀಗಾಗಿ ನಾನು ಮತ್ತೋಮ್ಮೆ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾಗುವ ವಿಶ್ವಾಸವಿದೆ. ನನ್ನ ಅವಧಿಯಲ್ಲಿ ನೌಕರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ, ಸಣ್ಣ ಸಣ್ಣ ಇಲಾಖೆಗಳ ನೌಕರರ ಹಿತದೃಷ್ಠಿಯಿಂದ ಸರಕಾರಿ ನೌಕರರ ಪತ್ತಿನ ಸಹಕಾರಿ ಸಂಘವನ್ನು ಪ್ರಾರಂಭಿಸಿ ಅದು ಈಗ ಯಶಸ್ವೀಯಾಗಿ ಕಾರ್ಯನಿರ್ವಹಿಸುತ್ತಿದೆ, ಹೀಗಾಗಿ ಸರಕಾರಿ ನೌಕರರ ಅಪೇಕ್ಷೆ ಮೇರೆಗೆ ನಾನು ಮತ್ತೋಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪಧರ್ಿಸುತ್ತೀರುವೆ, ಮತ್ತೋಮ್ಮೆ ಜಿಲ್ಲಾಧ್ಯಕ್ಷನಾಗಲು ಬೇಕಾಗುವ ನಿದರ್ೇಶಕರ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ಮಂಜುನಾಥ ಮ್ಯಾಗಳಮನಿಯವರು ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಪ್ರಥಮ ಬಾರಿಗೆ ಸ್ಪಧರ್ಿಸಿದ್ದು ಹೊಸಬರಿಗೆ ಹಾಗೂ ಕಂದಾಯ ಇಲಾಖೆಗೆ ಈ ಬಾರಿ ಅವಕಾಶ ದೊರೆಯಲಿ ಎಂಬ ಲೆಕ್ಕಾಚಾರ ಬಹುತೇಕ ನಿದರ್ೇಶಕರು ಆಲೋಚನೆಯಲ್ಲಿ ತೊಡಗಿದ್ದಾರೆ ಸ್ಪಧರ್ೆಗೆ ಅನೇಕರು ಒತ್ತಾಯಿಸಿದ್ದರಿಂದ ನಾನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪಧರ್ಿಸಿದ್ದೇನೆ. ಇದರಲ್ಲಿ ನಿಣರ್ಾಯಕ ಮತದಾರೆಂದು ಶಿಕ್ಷಣ ಇಲಾಖೆಯ ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹಲಿಗೇರಿ ನೇತೃತ್ವದ ನಿದರ್ೇಶಕರ ಬೆಂಬಲ ಕೂಡ ನನಗೆ ಇದ್ದು ಗೆಲುವು ನಿಶ್ಚಿತ ಎನ್ನುತ್ತಾರೆ.
ಚುನಾಯಿತ ಪ್ರತಿನಿಧಿಗಳಿಗೆ ಆಶೆ-ಆಮಿಷೆ: ಜಿಲ್ಲಾ ಸಕರ್ಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇದೇ ನಾಳೆ ಜುಲೈ 9 ರಂದು ಚುನಾವಣೆ ನಡೆಯಲಿದ್ದು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು 69 ಚುನಾಯಿತ ಪ್ರತಿನಿಧಿಗಳು ಹಕ್ಕು ಹೊಂದಿದ್ದು ಇದರಲ್ಲಿ 35 ಚುನಾಯಿತ ಪ್ರತಿನಿಧಿಗಳ ಬೆಂಬಲ ಸಿಕ್ಕರೆ ಅಧ್ಯಕ್ಷ ಸ್ಥಾನ ನಿಶ್ಚಿತ ಇದಕ್ಕಾಗಿ ಚುನಾಯಿತ ಪ್ರತಿನಿಧಿಗಳಿಗೆ ಪ್ರವಾಸ ಭಾಗ್ಯ, ಬಂಗಾರ ಭಾಗ್ಯ, ಇನ್ನೀತರ ಭಾಗ್ಯಗಳ ಆಶೆ ಆಮಿಷವೊಡ್ಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೇ ಜನಪ್ರತಿನಿಧಿಗಳಿಂದ ಬೆಂಬಲಿಸಲು ಫೋನ್ ಮೂಲಕ ಶಿಫಾರಸ್ಸು, ವಿವಿಧ ಮಠಾಧೀಶರಿಂದ ಬೆಂಬಲಿಸುವಂತೆ ಒತ್ತಡ, ಗೆಳೆಯರಿಂದ, ಪರಿಚಯರಿಂದ, ಅವರ ಊರುಗಳ ಮುಖಂಡರಿಂದ ಒತ್ತಡ ಎಲ್ಲಾ ನೂತನ ತಂತ್ರಗಳನ್ನು ಮಾಡಲಾಗುತ್ತಿದ್ದು ಕೊನೆಗೆ ಜಿಲ್ಲಾಧ್ಯಕ್ಷ ಸ್ಥಾನ ಯಾರಿಗೆ ಒಲಿಯುವುದು ಕಾದು ನೋಡಬೇಕಾಗಿದೆ.